ಶಿವಮೊಗ್ಗ, ಮೇ 02:
2023-24ನೇ ಸಾಲಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಪಿ.ಜೆ.ಅಬ್ದುಲ್ ಕಲಾಂ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ (ಆಂಗ್ಲ ಮಾಧ್ಯಮ)ಗಳಲ್ಲಿ ವಸತಿ ಸಹಿತಿ 6ನೇ ತರಗತಿಗೆ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ವಿದ್ಯಾಥಿಗಳಿಗೆ ಶೇಕಡ ೭೫% ಮತ್ತು ಇತರೆ ಹಿಂದುಳಿದ ವರ್ಗದ ಸಮುದಾಯಗಳಿಗೆ ಶೇಕಡ ೨೫% ರಷ್ಟು ಉಚಿತ ಪ್ರವೇಶಕ್ಕಾಗಿ ಸೇವಾಸಿಂದು ಪೋರ್ಟಲ್ ಮೂಲಕ ಆನ್ಲೈನ್ ಆರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ನುರಿತ ಅನುಭವಿ ಶಿಕ್ಷಕರಿಂದ ಆಂಗ್ಲ ಮಾಧ್ಯಮದಲ್ಲಿ ಭೋಧನೆ, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೊಟ್ ಪುಸ್ತಕ ಲೇಖನ ಸಾಮಗ್ರಿಗಳು, ಶಾಲಾ ಬ್ಯಾಗ್, ಎರಡು ಜೊತೆ ಉಚಿತ ಸಮವಸ್ತ್ರ, ಎರಡು ಜೊತೆ ಶೂ ಮತ್ತು ಸಾಕ್ಸ್, ಉಚಿತ ಬಿಸಿ ಊಟನ ವ್ಯವಸ್ಥೆ, ಉಚಿತ ಕಂಪ್ಯೂಟರ್ ತರಬೇತಿ, ಸ್ಮಾರ್ಟ್ ಕ್ಲಾಸ್, ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಸೌಲಭ್ಯ, ಸುಸಜ್ಜಿತ ಪ್ರಯೋಗಾಲಯ ಮತ್ತು ಗ್ರಂಥಾಲಯ, ವಿದ್ಯಾರ್ಥಿಗಳ ದೈಹಿಕ ವಿಕಾಸಕ್ಕಾಗಿ ಕ್ರೀಡಾ ಚಟುವಟಿಕೆಗಳು ಈ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು.
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು 5 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು, ವಿದ್ಯಾರ್ಥಿಯ ಇತ್ತಿಚಿನ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದಿನ ತರಗತಿಯ ಅಂಕಪಟ್ಟಿ, ಶಾಲಾ ಘೋಷಣಾ ಪ್ರಮಾಣ ಪತ್ರದೊಂದಿಗೆ ಸೇವಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ದಿನಾಂಕ 03/03/2023ರೊಳಗಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶಿವಮೊಗ್ಗ. ೧ನೇ ಮಹಡಿ, ಸತ್ಯಶ್ರೀ ಆರ್ಕೆಡ್, ೫ನೇ ಪ್ಯಾರಲಾಲ್ ರಸ್ತೆ, ದುರ್ಗಿಗುಡಿ ದೂರವಾಣಿ: 08182 220206 ಅಥವಾ ಇಲಾಖೆ ವೆಬ್ಸೈಟ್ , ಪ್ರಾಂಶುಪಾಲರು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಮೇಲಿನಹನಸವಾಡಿ ಶಿವಮೊಗ್ಗ -೯೪೮೩೬೨೩೫೩೭, ಪ್ರಾಂಶುಪಾಲರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೊಡ್ಡೆರಿ, ಭದ್ರಾವತಿ -೯೫೯೧೨೩೭೯೦೫, ಪ್ರಾಂಶುಪಾಲರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಶಿರಾಳಕೊಪ್ಪ-೮೩೧೦೩೫೦೩೬೧, ಪ್ರಾಂಶುಪಾಲರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಉಡುಗಣಿ ಶಿಕಾರಿಪುರ-೯೭೩೧೮೬೪೬೩೬, ಅಲ್ಪಸಂಖ್ಯಾತರ ಜಿಲ್ಲಾ ಮಾಹಿತಿ ಕೇಂದ್ರ, ಶಿವಮೊಗ್ಗ-೭೬೭೬೮೮೮೩೮೮, ಭದ್ರಾವತಿ-೯೫೩೮೮೫೩೬೮೦, ತೀರ್ಥಹಳ್ಳಿ-೮೮೬೧೯೮೨೮೩೫, ಸೊರಬ-೯೫೧೩೮೧೫೫೧೩, ಶಿಕಾರಿಪುರ-೭೮೨೯೧೩೬೭೨೪, ಹೊಸನಗರ -೯೦೦೮೪೪೭೦೨೯, ಸಾಗರ-೭೩೩೮೨೨೨೯೦೭ ಸಂಪರ್ಕಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.