ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ಹಿಂದುತ್ವದ ರಕ್ಷಣೆ ಆಧಾರದ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ಖಚಿತ. ಪಕ್ಷದ ಸಿದ್ದಾಂತಗಳನ್ನು ಧ್ಯೇಯಗಳನ್ನು ಒಪ್ಪಿಕೊಂಡಿರುವ ಜನತೆ ರಾಜ್ಯದಲ್ಲಿಯೂ ಸಹ ಈ ಭಾರಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದು ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚೆನ್ನಬಸಪ್ಪ (ಚೆನ್ನಿ) ಹೇಳಿದರು.
ಅವರು ಇಂದು ಬೆಳಗ್ಗೆ ಪತ್ರಿಕಾ ಸಂವಾದ ದಲ್ಲಿ ಮಾತನಾಡುತ್ತಾ, ಹಿಂದುತ್ವ ಎಂದಾಕ್ಷಣ ಬೇರೆ ಧರ್ಮವನ್ನು ಧ್ವೇಷಿಸುವುದಲ್ಲ. ಅಭಿ ವೃದ್ಧಿ ಶರೀರ ವಿದ್ದಂತೆ, ಹಿಂದುತ್ವ ಹೃದಯ ವಿದ್ದಂತೆ. ಕೆಲವರು ಸುಳ್ಳು ಹೇಳುತ್ತಾ, ಸುಖಾ ಸುಮ್ಮನೆ ಗಲಭೆ, ಗದ್ದಲ, ಗೊಂದಲದ ವಾತಾವರಣನ್ನು ಸೃಷ್ಠಿಸುತ್ತಿದ್ದಾರೆ. ಮತದಾರರು ಸುಳ್ಳು ಹೇಳುವವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದರು.
ಜನಸಂಘ ಹಾಗೂ ನಂತರದ ಬಿಜೆಪಿ ಉದ್ಧೇಶ ಅತ್ಯಂತ ಸ್ಪಷ್ಟವಾಗಿದೆ. ಬೇರೆ ಪಕ್ಷಗಳಿಗೆ ವಿಭಿನ್ನವಾಗಿ ಗುರುತಿಸಿಕೊಳ್ಳುವ ಬಿಜೆಪಿ ಒಂದು ಕಾರ್ಯಕರ್ತರ ಸಂಘಟನೆ ಯಾಗಿದೆ. ಈ ಹಿನ್ನೆಲೆಯಲ್ಲಿ ನನ್ನನ್ನು ಗುರು ತಿಸಿ ಟಿಕೇಟ್ ನೀಡಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿಗೆ ವಿಶೇಷವಾಗಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘದಿಂದ ಬೆಳೆದ ನನ್ನನ್ನು ಹಿರಿಯರು ಪಕ್ಷದ ಕಾರ್ಯಕರ್ತರು ಗುರುತಿಸಿ ಈ ಅವಕಾಶ ನೀಡಿದ್ದಾರೆ ಎಂದು ಹೇಳಿದರು.
ಈಗ ಕೋಮುಗಲಭೆಯಾಯಿತು ಎಂದರೆ ಹಿಂದೆ ಶುಗರ್ ಫ್ಯಾಕ್ಟರಿ ನಿಂತಿದ್ದೇಕೆ. ಶಾಯಿ ಗಾರ್ಮೇಂಟ್ ಬರಲಿಲ್ಲವೇ.? ಸುಳ್ಳು ಹೇಳುವುದನ್ನೇ ಮಾಡುವುದು ಬೇಡ ಈಗಷ್ಟೇ ವಿಮಾನ ನಿಲ್ಧಾಣವಾಗಿದೆ. ವಿಮಾನ ಹಾರಲಿ, ಬೈಪಾಸ್ ರಸ್ತೆ ಸಿದ್ದವಾಗಲೀ ಸಾಕಷ್ಟು ಕೈಗಾರಿಕೆಗಳು ಬರುತ್ತವೆ ಎಂದರು.
ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಆಗಿ ನಗರದ ಅಭಿವೃದ್ಧಿ ಮುಂದಿ ಟ್ಟುಕೊಂಡು ಸೇವೆ ಸಲ್ಲಿಸಿರುವ ಅನುಭವ ವಿದೆ. ಜನಸ್ನೇಹಿ ಆಡಳಿತವಿರುವ ಜೊತೆಗೆ ನಗರದ ನೀರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸ ಲಾಗುವುದು ಎಂದರು.
ಸಂವಾದಲ್ಲಿ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಕಾರ್ಯದರ್ಶಿಗಳಾದ ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ ಉಪಸ್ಥಿತರಿದ್ದರು.