ಶಿವಮೊಗ್ಗ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಭಾರಿ ಜೆಡಿಎಸ್‌ಗೆ ಅತಿ ಹೆಚ್ಚಿನ ಸ್ಥಾನಗಳು ಲಭಿಸಲಿದ್ದು, ಬರುವ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಮತ್ತೆ ಕುಮಾರಸ್ವಾಮಿ ನೇಮಕವಾಗಲಿದ್ದಾರೆ. ಅದಕ್ಕೆ ಪಕ್ಷದ ಎಲ್ಲಾ ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಕರ್ತವ್ಯ ನಿರ್ವಹಿಸುವುದು ಅಗತ್ಯವಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.


ಅವರು ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ನಡೆದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ನಾನು ನನ್ನ ರಾಜಕೀಯ ಜೀವನವನ್ನು ಆರಂಭಿಸಿದ್ದು, ಇದೇ ಜಿಲ್ಲಾ ಜನತಾದಳದ ಕಟ್ಟಡದಲ್ಲಿ. ಹಾಗೂ ಶಿವಮೊಗ್ಗ ಜಿಲ್ಲಾ ಯುವ ಜನತಾದಳದ ಮೊಟ್ಟ ಮೊದಲ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದೆ ಎಂದ ಅವರು ಹಳೆಯ ನೆನಪುಗಳನ್ನು ಸ್ಮರಿಸಿದರು.


ಶಿವಮೊಗ್ಗ ನಗರ, ಗ್ರಾಮಾಂತರ ಹಾಗೂ ಭದ್ರಾವತಿಯಲ್ಲಿ ನಮ್ಮ ಪಕ್ಷ ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತದೆ. ಶಿವಮೊಗ್ಗ ನಗರದ ಜನ ಶಾಂತವಾಗಿ ಬದುಕಬೇಕೆಂಬ ಸದುದ್ದೇಶದಿಂದ ಈ ಭಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನಗರದ ಎಲ್ಲಾ ವಿದ್ಯಾವಂತರ ಸಮೂಹ, ಸರ್ಕಾರಿ ನೌಕರರು, ವಿಶೇಷವಾಗಿ ಕಾರ್ಮಿಕರು, ಬಡ ಕುಟುಂಬದವರು ಕುಮಾರಸ್ವಾಮಿ ಅವರನ್ನು ಹಾಗೂ ನನ್ನನ್ನು ಪ್ರೀತಿಸುತ್ತಾರೆ. ಹಾಗಾಗೀ ಖಡಖಂಡಿತ ಗೆಲುವು ನನ್ನದು ಎಂದರು.


ಕಾರ್ಯಕರ್ತರು ನಿಜವಾದ ಜೀವಾಳ ಪ್ರತಿ ಬೂತ್‌ಮಟ್ಟದಲ್ಲಿ ಪಕ್ಷಕ್ಕೆ ಕೊಡಿಸುವ ಮತಗಳ ಆಧಾರದಲ್ಲಿ ಗಣನೆಗೆ ತೆಗೆದುಕೊಂಡು ಹೆಚ್ಚು ಮತ ಕೊಡಿಸಿದವರಿಗೆ ಸನ್ಮಾನಿಸುವ ಜೊತೆಗೆ ಬರುವ ನಗರ ಪಾಲಿಕೆ ಚುನಾವಣೆಯಲ್ಲಿ ಅವರಿಗೆ ಅದ್ಯತೆ ನೀಡಿ ಅವರನ್ನು ಗೆಲ್ಲಿಸಿ ತರುವ ಹೊಣೆಗಾರಿಕೆ ನಮ್ಮದಾಗಿದೆ ಎಂದು ಹೇಳಿದರು.

ಪಕ್ಷಕ್ಕೆ ನಾನು ಬರಲು ಶ್ರೀಕಾಂತ್ ಅವರ ಪ್ರಯತ್ನ ದೊಡ್ಡದು. ನಿನ್ನೆ ನೀಲಕಂಠೇಶ್ವರ ದೇವಾಲಯದಲ್ಲಿ ಕುಮಾರಸ್ವಾಮಿ ಅವರು ಶುಭ ಹರಿಸಿ ಶ್ರೀಕಾಂತ್ ನೇತೃತ್ವದಲ್ಲಿ ನನಗೆ ಬಿ ಫಾಂ ನೀಡಿದ್ದಾರೆ ಇದು ಈ ವರುಷದ ಜೆಡಿಎಸ್ ಪಕ್ಷದ ಹೊಸ ಇತಿಹಾಸಕ್ಕೆ ಆರಂಭವಾಗಿದೆ. ಸರ್ಕಾರ ರಚಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್, ಮಾಜಿ ಶಾಸಕಿ ಹಾಗೂ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರಾದ ಪೂರ‍್ಯಾನಾಯ್ಕ್, ಪ್ರಮುಖರಾದ ಹೆಚ್.ವಿ.ಮಹೇಶ್ವರಪ್ಪ, ಪರಂಧಾಮರೆಡ್ಡಿ, ಚಾಬೂಸಾಬ್, ಶಾಂತಸುರೇಂದ್ರ, ಗೀತಾ ಸುರೇಶ್, ಬಾಸ್ಕರ್, ಸಿದ್ದಪ್ಪ, ಮೊಹಮ್ಮದ್ ಯೂಸಫ್, ಗೋವಿಂದಪ್ಪ, ನಾಗರಾಜ್ ಕಂಕಾರಿ, ಸತ್ಯನಾರಾಯಣ, ಪಾಲಾಕ್ಷಿ ಹಾಗೂ ಇತರರು ವೇದಿಕೆಯಲ್ಲಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!