ಶಿವಮೊಗ್ಗ,ಮಾ.04:
ಶಿವಮೊಗ್ಗದ ಆರು ವಿಧಾನಸಭಾಕ್ಷೇತ್ರ ಸೇರಿದಂತೆ ರಾಜ್ಯದ ನೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಬಿಡುಗಡೆಗೊಳಿಸಿದೆ ಎಂದು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪಿಡಿಎಫ್ ಪ್ರತಿ ಹರಿದಾಡುತ್ತದೆ.
ಇದರಲ್ಲಿ ಶಿವಮೊಗ್ಗದ ಆರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಿದ್ದು ಸೂರಬದಲ್ಲಿ ಕುಮಾರ್ ಬಂಗಾರಪ್ಪರಿಗೆ ಟಿಕೇಟ್ ಸಿಕ್ಕಿಲ್ಲ. ಇಲ್ಲಿ ಪಿ. ರಾಜೀವ್ ಅಭ್ಯರ್ಥಿಯಾಗಿದ್ದಾರೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕೆ ಎಸ್ ಈಶ್ವರಪ್ಪ ಅವನ ಪುತ್ರ ಕೆ ಕಾಂತೇಶ್ ಅವರ ಹೆಸರು ಬಂದಿದೆ. ಇಲ್ಲಿ ಮತ್ತೊಂದು ಹೊಸ ಮುಖವೆಂದರೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ಹೆಸರು ಕಾಣಿಸಿಕೊಂಡಿದೆ.
ವಿಶೇಷವೆಂದರೆ ಸಾಗರದಲ್ಲಿ ಹರತಾಳು ಹಾಲಪ್ಪ, ತೀರ್ಥಳ್ಳಿಯಲ್ಲಿ ಆರಗ ಜ್ಣಾನೇಂದ್ರ ಅವರ ಹೆಸರು ಬಂದಿದೆ. ಬಿಜೆಪಿ ರಾಷ್ಟೀಯ ಅಧ್ಯಕ್ಷರ ಹೆಸರಲ್ಲಿ ಪಕ್ಷದ ಪ್ರಮುಖರಾದ ಅರುಣ್ ಸಿಂಗ್ ಸಹಿಯ ಈ ಪಟ್ಟಿ ಸುಳ್ಳು ಎಂದು ಬಹುತೇಕ ನೂರರಷ್ಟು ಪ್ರಮುಖರು ಹೇಳುತ್ತಿದ್ದಾರೆ.
ವಿಶೇಷವೆಂದರೆ ಕಾರ್ಕಳಕ್ಕೆ ಪ್ರಮೋದ್ ಮುತಾಲಿಕ್ ಹೆಸರು ಕಂಡು ಬಂದಿದ್ದರೆ, ಉಡುಪಿಗೆ ಸುನಿಲ್ ಜಿಗಿದಿದ್ದಾರೆ.
ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ನಾನಾ ವದಂತಿಗಳನ್ನು ಸೃಷ್ಟಿಸುವ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ.
ಇದೊಂದು ಸುಳ್ಳು ಮೂಲದ ದಾಖಲೆ ಎಂದು ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಹಾಗೂ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ. ಈ.ಕಾಂತೇಶ್ ಮತ್ತು ಆಯನೂರು ಮಂಜುನಾಥ್ ಅವರ ಆಪ್ತ ವಲಯ ತಿಳಿಸಿದೆ.
ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಕಕ್ಕಾಬಿಕ್ಕಿ ಆಗುವಂತೆ ಮಾಡಿದ ಹಾಗೂ ಇಡೀ ಬಿಜೆಪಿಯ ದಾಖಲೆಯನ್ನು ನಕಲಿಯಾಗಿ ಕಳಿಸಿದ ಪ್ರಕರಣವನ್ನು ಪತ್ತೆ ಹಚ್ಚಬೇಕಿದೆ. ಆ ಕಾರ್ಯ ಯಾರದು? ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ವೈರಲ್ ಆದ ಈ ಸುದ್ದಿ ಇಂದಿನ ದಿನದ ಬಹುಮುಖ್ಯ ಅಂಶವಾಗಿದ್ದು ದುರಂತವೇ ಹೌದು.