ಗರದ ತಾಪಮಾನ ನಿಯಂತ್ರಣ, ಮುಂದಿನ ಪೀಳಿಗೆಗೆ ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣಕ್ಕಾಗಿ ಆಕ್ಸಿಜನ್ ಸಿಲಿಂಡರ್ ಎಂದೇ ಗುರುತಿಸಲ್ಪಟ್ಟಿರುವ ಇಲ್ಲಿನ ಹೊರವಲಯದ ರಾಗಿಗುಡ್ಡದಲ್ಲಿ ನವುಲೆ ಕಡೆಯಿಂದ ಕಾಂಕ್ರಿಟ್ ರಸ್ತೆ ನಿರ್ಮಾ ಣ ಸೇರಿದಂತೆ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಡೆಸಬಾರದು ಎಂದು ರಾಗಿಗುಡ್ಡ ಉಳಿಸಿ ಅಭಿಯಾನದ ನವ್ಯಶ್ರೀ ನಾಗೇಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.


ರಾಗಿಗುಡ್ಡ ಉಳಿಸಿ ಅಭಿಯಾನದ ವತಿ ಯಿಂದ ಇಂದು ಶನಿವಾರ ಬೆಳಿಗ್ಗೆ ೮ ಗಂಟೆಗೆ ರಾಗಿಗುಡ್ಡದ ನೆತ್ತಿಯ ಮೇಲಿರುವ ಬ್ರಹ್ಮ,ವಿಷ್ಣು, ಮಹೇಶ್ವರ ಮೂರ್ತಿಯ ಸಮೀಪ ರಾಗಿಗುಡ್ಡ ಉಳಿಸಿ ಎಂಬ ಧ್ಯೇಯದೊಂದಿಗೆ ತಲೆಯ ಮೇಲೆ ಕೈ ಹೊತ್ತು ವಿನೂತನವಾಗಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು ಮಾತ ನಾಡಿದರು.


ಈ ಪ್ರದೇಶದಲ್ಲಿ ಕಟ್ಟಡ, ಕಾಂಕ್ರಿಟ್ ರಸ್ತೆ ನಿರ್ಮಾಣದಿಂದ ನೈಸರ್ಗಿಕ ಕಾಡು ನಾಶ ವಾಗುತ್ತಿದೆ. ಗಿಡ, ಮರಗಳು ಅಗ್ನಿಗೆ ಆಹುತಿ ಯಾಗಿವೆ. ಅಳಿದುಳಿದಿರುವ ಸಸ್ಯ ಸಂಕುಲವನ್ನು ಸಂರಕ್ಷಿಸಬೇಕಾಗಿದೆ. ಬಿಸಿಲಿನಿಂದಾಗಿ ಸಸ್ಯಗಳು ಒಣಗುತ್ತಿವೆ. ಈ ಸಸ್ಯಗಳಿಗೆ ನೀರು ಪೂರೈಸಲು ಬೋರ್‌ವೆಲ್ ಕೊರೆಸಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೀರಿನ ಟ್ಯಾಂಕ್‌ನ ಪೈಪ್‌ಲೈನ್ ವ್ಯವಸ್ಥೆ ಹಾಳಾಗಿದೆ. ಕೂಡಲೇ ಇದನ್ನು ದುರಸ್ತಿ ಪಡಿಸಬೇಕು ಎಂದರು.


ರಾಗಿಗುಡ್ಡ ಪ್ರದೇಶವನ್ನು ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು. ಈ ಪ್ರದೇಶದ ಸುತ್ತ ಭದ್ರವಾದ ಬೇಲಿ ನಿರ್ಮಿಸ ಬೇಕು. ಮುಂಗಾರು ಆರಂಭವಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಹಸರೀಕರಣವನ್ನು ಪ್ರಾರಂಭಿಸಲಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ರಾಗಿಗುಡ್ಡ ಪ್ರದೇಶದಲ್ಲಿ ಸಸಿ ನೆಡು ವಂತಾಗಬೇಕೆಂದು ಹೇಳಿದರು.


ಈ ಪ್ರದೇಶದಲ್ಲಿ ಅಪರೂಪದ, ವಿನಾಶದ ಅಂಚಿನಲ್ಲಿರುವ ಸಸ್ಯಗಳಿವೆ. ಇವುಗಳನ್ನು ಸಂರಕ್ಷಿಸಬೇಕಾಗಿದೆ. ಇದೊಂದು ಪಾರಂಪರಿಕ ತಾಣವಾಗಿದ್ದು, ಮುಂದಿನ ಪೀಳಿಗೆಗೆ ಇದನ್ನು ಉಳಿಸಿಬೇಕಾಗಿದೆ. ಈ ನಿಟ್ಟಿನಲ್ಲಿ ರಾಗಿಗುಡ್ಡ ಉಳಿಸಿ ಅಭಿಯಾನ ಕೈಗೊಳ್ಳಲಾಗಿದೆ. ಈ ಅಭಿಯಾನ ನಿರಂತರವಾಗಿ ಹೋರಾಟ ನಡೆಸ ಲಿದ್ದು ಇದರಲ್ಲಿ ನಾಗರೀಕರು ಪಾಲ್ಗೊಳ್ಳ ಬೇಕೆಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಅಭಿಯಾನದಲ್ಲಿ ಕೆ.ವಿ.ವಸಂತ ಕುಮಾರ್, ಎಸ್.ಬಿ. ಅಶೋಕ್, ನಾಗರಾಜ್ ಶೆಟ್ಟರ್, ಆರ್. ಶ್ರೀಕಾಂತ್, ರಘುಪತಿ, ಲೋಕೇಶ್ವರಪ್ಪ, ದಿಗಂತ್ ಕುಮಾರ್ ಮತ್ತಿತರರು ಭಾಗವಹಿ ಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!