ಶಿವಮೊಗ್ಗ
ಬಂಜಾರ, ಬೋವಿ, ಕೊರಚ, ಕೊರಮ ಸಮಾಜಕ್ಕೆ ನಿರೀಕ್ಷೆಗೂ ಮೀರಿ ಮೀಸಲಾತಿ ಸಿಕ್ಕಿದ್ದು, ಆದರೆ ಕೆಲವರ ಚಿತಾವಣೆಯಿಂದ ಕಾಣದ ‘ಕೈ ವಾಡದಿಂದ ಪ್ರತಿಭಟನೆ ನಡೆಯು ತ್ತಿದ್ದು, ಇಲ್ಲಿಗೆ ಈ ವಿಷಯವನ್ನು ಕೈಬಿಡಬೇಕು ಎಂದು ಶಾಸಕ ಹಾಗೂ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಕೆ.ಬಿ. ಅಶೋಕ ನಾಯ್ಕ ಮನವಿ ಮಾಡಿದರು.


ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಎಲ್ಲಾ ವರ್ಗದವರ ಹಿತವನ್ನು ಕಾಪಾಡುತ್ತಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒಳಮೀಸಲಾತಿಯ ಗೊಂದಲಗಳನ್ನು ಸರಿಪಡಿಸಿದೆ. ತುಳಿತಕ್ಕೆ ಒಳ ಗಾದ ಎಲ್ಲಾ ಪರಿಶಿಷ್ಟರಿಗೆ ನ್ಯಾಯವಾದ ಮೀಸಲಾತಿ ಸಿಕ್ಕಿದೆ. ಆದರೆ ಬಂಜಾರ ಸಮು ದಾಯದವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೆಲವರ ಕುಮ್ಮಕ್ಕಿನಿಂದ ಪ್ರತಿ ಭಟನೆ ಮಾಡಲು ಹೊರಟಿದ್ದಾರೆ. ಇದು ಸರಿಯಲ್ಲ. ನಮ್ಮ ಸಮುದಾಯದವರು ಎಚ್ಚರಗೊಳ್ಳಬೇಕು. ಮೀಸಲಾತಿ ಪ್ರಮಾಣವನ್ನು ಬಿಜೆಪಿ ಸರ್ಕಾರ ಹೆಚ್ಚಿಸಿದೆ. ಇದನ್ನು ಸ್ವಾಗತಿಸಬೇಕು ಎಂದರು.


ಈ ಹಿಂದೆ ಬಂಜಾರ ಮತ್ತ ಇತರ ಜಾತಿಯವರಿಗೆ ಕೇವಲ ಶೇ.೨ರಷ್ಟು ಮೀಸಲಾತಿ ಇತ್ತು. ನಾವು ಶೇ.೩ರಷ್ಟು ಹೆಚ್ಚಿಸಬಹುದು ಎಂದುಕೊಂಡಿದ್ದೆವು. ಆದರೆ ಶೇ.೪.೫ರಷ್ಟು ಹೆಚ್ಚಿಸಲಾಗಿದೆ. ಇದು ನಮ್ಮ ನಿರೀಕ್ಷೆ ಮೀರಿ ನಮಗೆ ಮೀಸಲಾತಿ ಸಿಕ್ಕಿದೆ. ಆದ್ದರಿಂದ ಸರ್ಕಾರಕ್ಕೆ ನಾನು ಸಮಾಜದ ಪರವಾಗಿ ಅಭಿನಂದಿಸುತ್ತೇನೆ. ಮತ್ತು ನಮ್ಮ ಸಮಾಜದವರು ಇದನ್ನು ಅರ್ಥ ಮಾಡಿಕೊಂಡು ಯಾವುದೇ ರೀತಿಯ ಪ್ರತಿಭಟನೆಗೆ ಮುಂದಾಗಬಾರದು. ಈ ವಿಷಯವನ್ನು ಇಲ್ಲಿಗೇ ಕೈಬಿಡಬೇಕು ಎಂದರು.


ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ನಿವಾಸದ ಮೇಲೆ ಕಲ್ಲು ತೂರಾಟ ಮಾಡಿದ್ದು ನಮಗೆ ಬೇಸರ ತಂದಿದೆ. ಇದೊಂದು ಕಹಿ ಘಟನೆ. ಈ ರೀತಿಯ ಘಟನೆಗಳು ಸಂವಿಧಾನ ಬಾಹಿರ ವಾಗಿದೆ. ಬಿಜೆಪಿ ಸರ್ಕಾರ ಅಧ್ಯಯನ ವರದಿಯನ್ನು ನೋಡಿಯೇ ಮೀಸಲಾತಿ ಪ್ರಕಟಿಸಿದೆ. ಶೇ.೧೫ರಷ್ಟು ಮೀಸಲಾತಿಯಲ್ಲಿ ಎಡಗೈನ ವರಿಗೆ ಶೇ.೬, ಬಲಗೈನವರಿಗೆ ಶೇ.೫.೫, ಬಂಜಾರ ಸೇರಿದಂತೆ ನಾಲ್ಕು ಜಾತಿಗಳಿಗೆ ಶೇ.೪.೫ ಹಾಗೂ ಇತರರಿಗೆ ಶೇ.೧ರಷ್ಟು ಮೀಸಲಾತಿ ನೀಡಿದೆ. ಇದು ವೈಜ್ಞಾನಿಕವೂ ಆಗಿದೆ. ಶೇ.೧ರಲ್ಲಿಯೂ ಕೂಡ ಬಂಜಾರ ಸಮುದಾಯದ ಅಲೆಮಾರಿಗಳು ಸೇರಿಕೊ ಳ್ಳುತ್ತಾರೆ. ಹಾಗಾಗಿ ಬಿಜೆಪಿ ಸರ್ಕಾರದಲ್ಲಿ ನಮಗೆ ನ್ಯಾಯ ಸಿಕ್ಕಿದೆ ಎಂದರು.


ಬಿ.ಎಸ್ ಯಡಿಯೂರಪ್ಪನವರು ಲಂಬಾಣಿ ಸಮುದಾಯಕ್ಕೆ ಅನೇಕ ರೀತಿಯ ನೆರವು ನೀಡಿದ್ದಾರೆ. ತಾಂಡಾಗಳ ಅಭಿವೃದ್ಧಿಪಡಿಸಿದ್ದಾರೆ. ಬಂಜಾರ ಧಾರ್ಮಿಕ ಕೇಂದ್ರವಾದ ಸೂರಗೊಂಡನಕೊಪ್ಪವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಧಾಕೃಷ್ಣ, ಕುಮಾರ ನಾಯ್ಕ, ಭೋಜಾ ನಾಯ್ಕ, ಲೋಕೇಶ್ ನಾಯ್ಕ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!