ಶಿವಮೊಗ್ಗ,ಮಾ.29:

ಒಳಮೀಸಲಾತಿ ಕಿಚ್ಚು ನಿಧಾನವಾಗಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಕಳೆದ ಸೋಮವಾರದಂದು ಶಿಕಾರಿಪುರದಲ್ಲಿ ಬಂಜಾರ ಹಾಗೂ ಬೋವಿ ಸಮುದಾಯದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದ ಮುಂದೆ ಉಗ್ರ ಪ್ರತಿಭಟನೆ ನಡೆಸಿದ್ದರು. ನಿನ್ನೆ ಶಿವಮೊಗ್ಗದ ಇತರ ಭಾಗಗಳಿಗೂ ಮೀಸಲಾತಿ ಕಿಚ್ಚು ಹಬ್ಬಿಕೊಂಡಿದೆ.
ಶಿವಮೊಗ್ಗ ತಾಲೂಕು ಕುಂಚೇನಹಳ್ಳಿಯಲ್ಲಿ ಬಂಜಾರ ಸಮುದಾಯದವರಿಂದ ಒಳ ಮೀಸಲು ಜಾರಿ ವಿರೋಧಿಸಿ ರಸ್ತೆ ತಡೆ ನಡೆಸಲಾಯಿತು. ರಸ್ತೆಯಲ್ಲಿ ಟೈರ್ ಸುಟ್ಟು ತಮ್ಮ ಅಸಮಾಧಾನ ಹೊರಹಾಕಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಯಾವುದೇ ಕಾರಣಕ್ಕೂಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಕೂಡದು ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯಿಂದಾಗಿ ರಸ್ತೆಯ ಎರಡೂ ಬದಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅದರಿಂದಾಗಿ, ಸಾಲುಗಟ್ಟಿದ ವಾಹನಗಳಲ್ಲಿ ಕುಳಿತವರು ಟ್ರಾಫಿಕ್ ಜಾಮ್ ಬಿಸಿ ಅನುಭವಿಸಿದರು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.


ಶಿಕಾರಿಪುರದಲ್ಲಿರುವ ಯಡಿಯೂರಪ್ಪನವರ ನಿವಾಸದ ಮುಂದೆ ಬಂಜಾರ ಹಾಗೂ ಬೋವಿ ಸಮುದಾಯದ ಜನರು ಉಗ್ರ ಪ್ರತಿಭಟನೆ ನಡೆಸಿದ್ದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಅವರನ್ನು ತಡೆಯಲು ಪೊಲೀಸರು ಮಾಡಿದ್ದ ಪ್ರಯತ್ನಗಳೆಲ್ಲವೂ ವಿಫಲವಾಗಿತ್ತು. ಬ್ಯಾರಿಕೇಡ್ ಗಳನ್ನು ದಾಟಿ ನಿವಾಸದ ಕಡೆಗೆ ಆಗಮಿಸಿದ್ದ ಅವರು ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿ ನಿವಾಸದ ಗಾಜುಗಳನ್ನು ಪುಡಿ ಮಾಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!