ಶಿವಮೊಗ್ಗ,ಮಾ.25:
ಶಿವಮೊಗ್ಗ ನಗರದಲ್ಲಿ ಮಾರ್ಚ್ 26ರ ನಾಳೆ ಹಾಗೂ ಮಾರ್ಚ್ 22ರಂದು ಎರಡು ದಿನಗಳ ಕಾಲ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯವಾಗುವುದರಿಂದ ಬಹುತೇಕ ಕಡೆ ನೀರು ಸಿಗುವ ಸಾಧ್ಯತೆಗಳು ಕಡಿಮೆಯಾಗಿದೆ.
ಮೆಸ್ಕಾಂ ಇಲಾಖೆಯಿಂದ ಗಾಜನೂರು ಮೂಲಸ್ಥಾವರಕ್ಕೆ ವಿದ್ಯುತ್ ಸರಬರಾಜು ಆಗುವ ಮತ್ತು ಕೃಷ್ಣರಾಜೇಂದ್ರ ಜಲ ಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜಾಗುವ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ತುರ್ತು ನಿರ್ವಹಣಾ ಕಾಮಗಾರಿ ಈ ಎರಡು ದಿನಗಳ ಕಾಲ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯವಾಗುತ್ತದೆ. ಇಲ್ಲವೇ ನೀರೇ ಸಿಗುವುದಿಲ್ಲ ಎಂದು ತಿಳಿಸಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಾರ್ವಜನಿಕರು ಈ ಸಂದರ್ಭದಲ್ಲಿ ಸಹಕರಿಸುವಂತೆ ವಿನಂತಿಸಿದೆ