ತೀರ್ಥಹಳ್ಳಿಯ ಮುಗ್ಧ ಬಾಲಕಿಯ ನಂದಿತಾಳ ಅಸಹಜ ಸಾವಿನ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿ ಇಂದು ಎನ್ಎಸ್ಯುಐ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
೨೦೧೩ರಲ್ಲಿ ತೀರ್ಥಹಳ್ಳಿಯಲ್ಲಿ ಹಿಂದೂ ಸಮಾಜಕ್ಕೆ ಸೇರಿದ ವಿದ್ಯಾರ್ಥಿನಿ ಕುಮಾರಿ ನಂದಿತಾ ಅಸಹಜ ಸಾವಿಗೀಡಾಗಿದ್ದಳು. ವಿದ್ಯಾರ್ಥಿನಿಯ ಅಸಹಜ ಸಾವಿನ ಕುರಿತು ಅಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಸಿಒಡಿ ತನಿಖೆ ನಡೆಸಿತ್ತು. ಆದರೆ ಸಿಐಡಿ ವರದಿ ಬಗ್ಗೆ ಬಿಜೆಪಿ ನಾಯಕರು ಆಕ್ಷೇಪಣೆ ವ್ಯಕ್ತಪಡಿಸಿ, ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.
ಅಂದಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಇಂದಿನ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ?ರವರು ೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕುಮಾರಿ ನಂದಿತಾಳ ಮನೆಗೆ ಭೇಟಿ ನೀಡಿ,ಸಿಬಿಐ ತನಿಖೆ ನಡೆಸಿ ಮುಗ್ಧ ಬಾಲಕಿಯ ಸಾವಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಈಗಿನ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಹಾಗೂ ತಮ್ಮದೇ ಕೇಂದ್ರ ಬಿಜೆಪಿ ಸರ್ಕಾರ ಮೇಲ್ಕಂಡ ಮುಗ್ಧ ಬಾಲಕಿಯ ಅಸಹಜ ಸಾವಿನ ಕುರಿತು ಸಿಬಿಐ ತನಿಖೆ ನಡೆಸದೆ ಮುಗ್ಧ ಬಾಲಕಿಯ ಸಾವಿಗೆ ನ್ಯಾಯ ದೊರಕಿಸಲು ನಿರ್ಲಕಲ್ಷ್ಯತನ ತೋರಿರುತ್ತಾರೆ ಎಂದು ಆರೋಪಿಸಿದರು.
ನಂದಿತಾ ಸಾವಿನ ಕುರಿತು ಸಿಬಿಐ ತನಿಖೆಗೆ ಆದೇಶಿ ಬಾಲಕಿಯ ಸಾವಿಗೆ ನ್ಯಾಯಕೊಡಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ
ಈ ಸಂದರ್ಭದಲ್ಲಿ ಪ್ರಮುಖರಾದ ರವಿ ಕಾಟಿಕೆರೆ, ಚರಣ, ಹರ್ಷಿತ್, ವಿಜಯಕುಮಾರ್ ಎಸ್.ಎನ್., ಕುಮಾರ್, ಚಂದ್ರೋಜಿರಾವ್ ಆಕಾಶ್ ಬಸವರಾಜ್ ಇದ್ದರು.