ಶಿವಮೊಗ್ಗ,ಮಾ.22:
ದೇಶದ ಶಾಸಕಾಂಗ ವ್ಯವಸ್ಥೆಯ ಲೋಕಸಭೆ ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ವಿಧಾನ ಪರಿಷತ್ ಶಾಸಕರಾಗಿರುವ ಆಯನೂರು, ಮಂಜುನಾಥ್ ಅವರ ಶಿವಮೊಗ್ಗ ಟಿಕೆಟ್ ಆಕಾಂಕ್ಷಿಯ ಕೋರಿಕೆಯ ಹೊಡೆತಕ್ಕೆ ಬಿಜೆಪಿ ಥಂಡಾ ಹೊಡೆಯಿತೇ…?
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಜನ ನೆಮ್ಮದಿಯಿಂದ ಶಾಂತವಾಗಿರಲು ಸಾಧ್ಯವಿಲ್ಲ.ಶಿವಮೊಗ್ಗದ ಜನತೆ ಶಾಂತಿಯಿಂದ ಕರ್ತವ್ಯ ನಿರ್ವಹಿಸುವಂತಹ ಮನೋಭಾವನೆ ಮೂಡುವ ಉದ್ದೇಶದಿಂದ ನನಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಬೇಕು ಎಂಬುದು ಆಯನೂರು ಮಂಜುನಾಥ್ ಅವರ ಕೋರಿಕೆ.
ಎಲ್ಲಿಯೂ ಹಾಲಿ ಶಾಸಕ ಕೆಎಸ್ ಈಶ್ವರಪ್ಪ ಅವರ ಹೆಸರನ್ನು ಉದ್ದೇಶಿಸಿಲ್ಲ, ಪರೋಕ್ಷವಾಗಿ ಅವರಿಗೆ ಟೀಕೆ ಮಾಡಿದ್ದೇವೆ ಎಂಬಂತೆ ಶಿವಮೊಗ್ಗದ ನೆಮ್ಮದಿಯ ಕ್ಷಣಗಳಿಗೆ ಈ ಟಿಕೆಟ್ ಕೋರಿಕೆಯ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ಮಂಜುನಾಥ್ ಅವರ ಅಭಿಮಾನಿಗಳು ನಗರದ ಹಲವಡೆ ಸಾಕಷ್ಟು ಬ್ಯಾನರ್ ಗಳನ್ನು ಹಾಕಿದ್ದು, ಎಲ್ಲೆಡೆ ಶಿವಮೊಗ್ಗ ನೆಮ್ಮದಿ ಹುಡುಕುವ ಅಂಶವೇ ಹೆಚ್ಚಾಗಿದೆ, ನಿನ್ನೆ ಶಿವಮೊಗ್ಗ ನಗರದಲ್ಲಿ ಆಯನೂರು ಮಂಜುನಾಥ್ ಅವರು ಹಾಕಿರುವ ಬ್ಯಾನರ್ಗಳಲ್ಲಿ ಇರುವ ವಾಕ್ಯಗಳು ಅತ್ಯಂತ ಕ್ಲಿಷ್ಟ ಪರಿಸ್ಥಿತಿಯನ್ನು ಬಿಜೆಪಿಗೆ ಅದರಲ್ಲೂ ಈಶ್ವರಪ್ಪ ಅವರಿಗೆ ತಂದಿದ್ದು ಸುಳ್ಳೇನಲ್ಲ.
ಮತ್ತೆ ಇದಕ್ಕೊಂದು ಸ್ಪಷ್ಟನೆ ಎಂಬಂತೆ ಆಯನೂರು ಮಂಜುನಾಥ್ ಅವರು ಮೊನ್ನೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಜಾನ್ ಕೂಗಿದವರನ್ನು ಬಂಧಿಸಬೇಕು ಹಾಗೆ ಕೂಗಿದವರನ್ನು ಹರಕು ಬಾಯಿಯವರು ಎಂದಿದ್ದೇನೆ. ವಿಧಾನ ಸೌಧದಲ್ಲಿ ಆಜಾನ್ ಕೂಗುತ್ತೇನೆ ಎಂದಿರುವ ಅವರದು ಸಂವಿಧಾನ ವಿರೋಧಿ ನೀತಿ ಅಲ್ಲವೇ? ಈಶ್ವರಪ್ಪ ನಮ್ಮ ನಾಯಕರು ಎಂದು ಈಶ್ವರಪ್ಪ ಹಾಗೂ ಅವರ ಅನುಯಾಯಿಗಳಿಗರ ಆಗಿರುವ ಸಿಟ್ಟಿನ ಪ್ರಮಾಣವನ್ನು ಒಂದಿಷ್ಟು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ.
ಆದರೆ ಕಾಂಗ್ರೆಸ್ ಇದನ್ನು ಅತ್ಯಂತ ಸೂಕ್ತ ಸಮಯವೆಂಬಂತೆ ಸಮರ್ಪಕವಾಗಿ ಬಳಸಿಕೊಂಡಿದೆ.ಕಾಂಗ್ರೆಸ್ ಪಕ್ಷವು ಹರಕು ಬಾಯಿಯ ಪದವನ್ನು ಈಶ್ವರಪ್ಪನವರಿಗೆ ಹೋಲಿಸಿಕೊಂಡು ಅದಕ್ಕೆ ಹೊಸ ಪುಷ್ಠಿ ನೀಡಿ ನಾನಾ ಬಗೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಈಶ್ವರಪ್ಪ ವಿರುದ್ಧ ಸುದ್ದಿ ಹಬ್ಬಿಸುತ್ತಿದ್ದಾರೆ.
ಯುಗಾದಿ ಹಾಗೂ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಹೇಳಿರುವ ಆಯನೂರು ಮಂಜುನಾಥ ಅವರ ಮುಖ್ಯ ವಾಕ್ಯಗಳು ಇಂತಿವೆ
ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ,
ಮುರಿದ ಮನಸ್ಸುಗಳ ಬೆಸುಗೆಯಾಗಲಿ
ಶಿವಮೊಗ್ಗದಲ್ಲಿ ಶಾಂತಿ- ಸೌಹಾರ್ದತೆ ನೆಲೆಸಲಿ
ಎಂದಿರುವ ಈ ಬ್ಯಾನರ್ ಗಳನ್ನು ಹಾಕಿದ ಕ್ಷಣ ಎಲ್ಲರೂ ಈಶ್ವರಪ್ಪನಪ್ಪ ಚಿತ್ತಹರಿಸಿದ್ದು ಸುಳ್ಳೇನಲ್ಲ.
ಅಂತಿಮವಾಗಿ ಸಂಜೆಯ ಹೊತ್ತಿಗೆ ಇದಕ್ಕೊಂದು ಸ್ಪಷ್ಟನೆಯ ಲೇಪವನ್ನು ಇಡಲು ಆಯನೂರು ಮಂಜುನಾಥ್ ಒಂದಾಗಿದ್ದು ವಿಶೇಷ.
ಒಟ್ಟಾರೆ ಶಿವಮೊಗ್ಗದ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿ ಆಯನೂರು ಮಂಜುನಾಥ್ ಕಾಯುತ್ತಿರುವುದರ ಹಿನ್ನೆಲೆ ಅತ್ಯಂತ ನಿಗೂಢವೆನಿಸುತ್ತಿದೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯುವ ಪ್ರಯತ್ನವೂ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಅಷ್ಟು ಸುಲಭವಾಗಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಬರುವ ವಿಧಾನಸಭಾ ಚುನಾವಣೆಗೆ ನೀತಿ ಸಮಿತಿ ಜಾರಿಯ ಈ ಹೊತ್ತಿನಲ್ಲಿ ಆಯನೂರು ಮಂಜುನಾಥ್ ಅವರ ಫ್ಲೆಕ್ಸ್ ರಣರಂಗ ಬಿಜೆಪಿಯಲ್ಲಿನ ಪ್ರಮುಖರನ್ನಂತೂ ನಿದ್ದೆಗೆಡಿಸಿರುವುದಂತೂ ಸತ್ಯ. ಅಂತಿಮ ಹಂತದ ಬಿಸಿಬಿಸಿ ಚರ್ಚೆಗಳ ನಡುವೆ ಸತ್ಯದ ಹುಡುಕಾಟ ಹಾಗೂ ಬರುವ ವಿಧಾನಸಭಾ ಚುನಾವಣೆಯ ಚಿತ್ರಣವನ್ನು ನೀಡುವ ಪ್ರಯತ್ನವಷ್ಟೇ ನಮ್ಮದು.