ಯುಗಾದಿಯಂದು ಮಾವು,ಬೇವು, ಹೊಂಗೆಯ ಚಿಗುರು ಪರಿಸರವನ್ನು ಹಸಿರು ಮಾಡಿ ಹೊಸ ಚೈತನ್ಯ ತುಂಬುವಂತೆ ಕಾಂತೇಶ್ ಅವರ ಹುಟ್ಟು ಹಬ್ಬ ಯುಗಾದಿಯಂದು ಬರುವುದರಿಂದ ಅವರು ಕೂಡ ಹೊಸ ಚೈತನ್ಯದಿಂದ ಸಾಮಾಜಿಕ ಸೇವೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ
ಮಾಡುವಂತಾಗಲಿ. ಅವರ ಇಡೀ ಕುಟುಂಬ ಸಮಾಜಮುಖಿಯಾಗಿ ಧಾರ್ಮಿಕವಾಗಿ, ಸೇವಾಕಾರ್ಯ ಮಾಡಿಕೊಂಡು ಬಂದಿದ್ದು, ಅವರಿಗೆ ಇನ್ನು ಹೆಚ್ಚಿನ ಯಶಸ್ಸು ಸಿಗಲಿ ಎಂದು ಚಿತ್ರದುರ್ಗ ಮಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಹೇಳಿದ್ದಾರೆ.
ಅವರು ಇಂದು ನಗರದ ಗುರುಪುರದ ನಂಜುಂ ಡೇಶ್ವರ ಸಭಾಂಗಣದಲ್ಲಿ ಕೆ.ಈ.ಕಾಂತೇಶ್ ಅವರ ೪೩ನೇ ಹುಟ್ಟು ಹಬ್ಬದ ಅಂಗವಾಗಿ ೨,೫೦೦ಕ್ಕೂ ಹೆಚ್ಚು ನಿವಾಸಿಗಳಿಗೆ ಸೊಳ್ಳೆ ಪರದೆ ವಿತರಿಸುವ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶಾಸಕ ಕೆ.ಎಸ್.ಈಶ್ವರಪ್ಪನವರು ಮಾತನಾಡಿ, ಜಗದ್ಗುರುಗಳು ಕಾಂತೇಶ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಬಂದು ಒಟ್ಟಾಗಿ ಆಶೀರ್ವಾದ ಮಾಡಿರುವುದು ಪೂರ್ವಜನ್ಮದ ಪುಣ್ಯ ಆತನಿಗೆ ಸಮಾಜ ಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಕ್ಕಿದೆ. ದೇವರು ಆತನಿಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜಡೆ ಮಠದ ಮಹಾಂತ ಸ್ವಾಮೀಜಿಗಳು ಮಾತನಾಡಿ, ಈಶ್ವರಾನಂದಪುರಿ ಶ್ರೀಗಳು ಹಾಗೂ ಪ್ರಮುಖರು ಕಾಂತೇಶ್ರನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ ಮೇಯರ್ ಶಿವಕುಮಾರ್, ಸೂಡ ಅಧ್ಯಕ್ಷ ನಾಗರಾಜ್, ಪಾಲಿಕೆ ಸದಸ್ಯರಾದ ಸುರೇಖಾ ಮುರುಳೀಧರ್, ವಿಶ್ವಾಸ್, ಪ್ರಭಾಕರ್ ಇದ್ದರು.