ಶಿವಮೊಗ್ಗ: ಇಲ್ಲಿನ ಎನ್‌ಯು ಆಸ್ಪತ್ರೆಯಲ್ಲಿ ಯಶಸ್ವಿಯಗಿ ಇದೆ ಮೊದಲ ಬಾರಿಗೆ ಮೂತ್ರ ರೋಗ ಶಸ್ತ್ರ ಚಿಕಿತ್ಸೆಯ ಮೂಲಕ ಮೂತ್ರ ಸೋರಿಕೆಯನ್ನು ಗುಣಪಡಿಸಲಾಗಿದೆ.


ಗರ್ಭಕೋಶದ ಶಸ್ತ್ರಚಿಕಿತ್ಸೆಯ ನಂತರ ಮೂತ್ರ ಚೀಲಕ್ಕೆ ತೊಂದರೆಯಾಗಿ ೩೮ ವ?ದ ಮಹಿಳೆಗೆ ನಿರಂತರವಾಗಿ ಮೂತ್ರ ಸೋರುತ್ತಿತ್ತು. ಇದರಿಂದ ಹಾಕಿದ ಬಟ್ಟೆ ಒದ್ದೆಯಾಗಿ ಮೂತ್ರದ ವಾಸನೆಯಿಂದ, ಬೇರೆಯವರು ಅವರೊಂದಿಗೆ ಬೆರೆಯಲು ಹಿಂದೆಮುಂದೆ

ಯೋಚಿಸುವಂತಾಗಿತ್ತು, ಈ ಮೂತ್ರ ಸೋರುವಿಕೆಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಅವರು ಸಾಮಾಜಿಕವಾಗಿ ಬೇರೆಯವರೊಂದಿಗೆ ಬೆರೆಯುವುದನ್ನು ಸಹ ನಿಲ್ಲಿಸಿದ್ದರು, ಒಟ್ಟಾರೆ ತಮ್ಮ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು.


ಎನ್‌ಯು ಆಸ್ಪತ್ರೆಯಲ್ಲಿ ಕೂಲಂಕು?ವಾಗಿ ತಪಾಸಣೆ ಮಾಡಿದಾಗ ಇವರ ಮೂತ್ರ ಚೀಲದಲ್ಲಿ ರಂಧ್ರವಾಗಿ ಯೋನಿ ಮಾರ್ಗಕ್ಕೆ ಜೋಡಣೆಯಾಗಿರುವುದು ಖಚಿತವಾಯಿತು. ಈ ತೊಂದರೆಗೆ ಎನ್‌ಯು ಆಸ್ಪತ್ರೆಯ ಖ್ಯಾತ ಮೂತ್ರ ರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಪ್ರದೀಪ ಅವರು ಲ್ಯಾಪ್ರೋಸ್ಕೊಪಿಯ ಮುಖಾಂತರ ಶಸ್ತ್ರಚಿಕಿತ್ಸೆಯನ್ನು

ಮಾಡಿ, ಮೂತ್ರ ಸೋರಿಕೆಯನ್ನು ಯಶಸ್ವಿಯಾಗಿ ಗುಣಪಡಿಸಿರುತ್ತಾರೆ.
ಈ ವಿಧವಾದ ಶಸ್ತ್ರಚಿಕಿತ್ಸೆಯನ್ನು ಲ್ಯಾಪ್ರೋಸ್ಕೊಪಿಯ ಮುಖಾಂತರ ಯಶಸ್ವಿಯಾಗಿ ಮಾಡಿರುವುದು ಮಲೆನಾಡಿನ ವಿಭಾಗದಲ್ಲಿ ಮೊದಲನೇ ಭಾರಿಯಾಗಿದೆ. ಈಗ ರೋಗಿಯು ಸಂಪೂರ್ಣ ಗುಣಮುಖವಾಗಿದ್ದು ಎನ್‌ಯು ಆಸ್ಪತ್ರೆ ಹಾಗೂ ಡಾ. ಪ್ರದೀಪ ಅವರ ವೈದ್ಯಕೀಯ ಪರಿಣಿತ ತಂಡಕ್ಕೆ ಅನಂತ ಧನ್ಯವಾದಗಳನ್ನು ತಿಳಿಸಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!