ಶಿವಮೊಗ್ಗ, ಫೆ.27:
ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನೆ ಸೇರಿದಂತೆ 10 ಹಲವು ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ವಿವಿಧ ಶಂಕುಸ್ಥಾಪನಾ ಸಮಾರಂಭಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಗಮನಕ್ಕೆ ಕ್ಷಣಗಣನೆ ಆರಂಭಗೊಂಡಿದೆ.


ಇದೇ ವಿಮಾನ ನಿಲ್ದಾಣದ ಆವರಣದಲ್ಲಿ ಸಮಾರಂಭ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಲ್ಲಿನ ಪ್ರವೇಶಕ್ಕೆ ಯಾವುದೇ ಪ್ರವೇಶ ಪತ್ರದ ಅಗತ್ಯವಿಲ್ಲ. ವಿಐಪಿ,ವಿ ವಿ ಐ ಪಿ ಎಂಬ ಪ್ರವೇಶ ಪತ್ರಗಳು ಸಹ ಆಯಾ ಆಸನಗಳಿಗೆ ಹೋಗಲು ಅವಕಾಶ ನೀಡುತ್ತವೆ ಅಷ್ಟೆ.


ಶಿವಮೊಗ್ಗ ಜಿಲ್ಲೆಯ ಸಾಕಷ್ಟು ಜನರು ನಮ್ಮಲ್ಲಿ ಪ್ರವೇಶ ಪತ್ರವಿಲ್ಲ. ಅಲ್ಲಿಗೆ ಒಳಗೆ ಬಿಡುವುದಿಲ್ಲ ಎಂಬ ಮಾತನ್ನು ಹೇಳುತ್ತಲೇ ಇದ್ದು, ವಿಮಾನ ನಿಲ್ದಾಣದ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಯಾವುದೇ ಪ್ರವೇಶ ಪತ್ರದ ಅಗತ್ಯವಿರುವುದಿಲ್ಲ.
ವಿಶೇಷವಾಗಿ ಹಲವರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರವೇಶ ಪತ್ರಗಳನ್ನು ಹಂಚಿದ್ದು ಈ ಗೊಂದಲಕ್ಕೆ ಕಾರಣವಾಗಿದೆ. ಅದರಲ್ಲೂ ಭಾರತೀಯ ಜನತಾ ಪಕ್ಷದ ಆಯಾ ಸ್ಥಳೀಯ ನಾಯಕರುಗಳು ವಾಹನ ವ್ಯವಸ್ಥೆ ಇದೆ ಎಂದು ಜೊತೆಗೆ ಪಾಸ್ ವಿತರಿಸಿದ್ದು ಈ ಗೊಂದಲಕ್ಕೆ ಕಾರಣವಾಗಿದೆ.


ಬೆಳಗ್ಗೆ 11 ಗಂಟೆಗೆ ನರೇಂದ್ರ ಮೋದಿ ಅವರು ಮೊದಲ ವಿಮಾನದಲ್ಲೇ ಇಲ್ಲಿನ ನಿಲ್ದಾಣಕ್ಕೆ ಆಗಮಿಸಲಿದ್ದು, ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರುಗಳು, ರಾಜ್ಯದ ಮುಖ್ಯಮಂತ್ರಿ, ಸಚಿವರುಗಳು ಹಾಗೂ ಗಣ್ಯರು ಆಗಮಿಸಲಿದ್ದಾರೆ.
ವಿಶೇಷವಾಗಿ ಇಂದು ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜನುಮದಿನವಿದ್ದು, ಅವರ ಈ ಕಾರ್ಯಕ್ರಮವನ್ನು ನಡೆಸಲು ಸಹ ಸಕಲ ಸಿದ್ಧತೆಗಳು ನಡೆದಿವೆ. ಭಾರಿ ಗಾತ್ರದ ಕೇಕ್ ಸಿದ್ದವಾಗಿದೆ. ವಿಮಾನ ನಿಲ್ದಾಣ ಉದ್ಘಾಟನೆಯ ಹೊತ್ತಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ವಿಮಾನ ನಿಲ್ದಾಣಕ್ಕೆ ಕಪ್ಪು ಬಟ್ಟೆ ಧರಿಸಿ ಬರುವಂತಿಲ್ಲ. ನೀರಿನ ಬಾಟಲಿ ಮತ್ತಿತರ ವಸ್ತುಗಳನ್ನು ತರುವಂತಿಲ್ಲ. ಅಗತ್ಯವಿದ್ದರೆ ಮೊಬೈಲ್ ಹಾಗೂ ಪರ್ಸ್ ತರಬಹುದಾಗಿದೆ. ಅಲ್ಲಿ ಊಟ, ಕುಡಿಯುವ ನೀರು, ಮಜ್ಜಿಗೆ ಹಾಗೂ ಇತರೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಇದೇ ಮೂಲಗಳು ತಿಳಿಸಿವೆ.

By admin

ನಿಮ್ಮದೊಂದು ಉತ್ತರ

error: Content is protected !!