ಶಿವಮೊಗ್ಗ,
ವಾಸವಿ ಪಬ್ಲಿಕ್ ಶಾಲೆ ಆರ್ಥಿಕವಾಗಿ ದುರ್ಬಲರಾದವರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯ್ಕೆಯಾದ ಮಕ್ಕಳ ಶಾಲಾ ಶುಲ್ಕ ರಿಯಾಯಿತಿ ನೀಡುವ (ಎಲ್‌ಕೆಜಿಯಿಂದ ನಾಲ್ಕನೇ ತರಗತಿಯವರೆಗೆ ನೇರವಾಗಿ ದಾಖಲಾ ಗುವ ಮಕ್ಕಳಿಗೆ) “ವಾಸವಿ ಚಾರಿಟಿ ಯನ್ನು ಎಂದಿನಂತೆ ಈ ಬಾರಿಯೂ ಘೋಷಿಸಿದ್ದು, ೨೦ ಮಕ್ಕಳು ಇದರ ಪ್ರಯೋಜನವನ್ನು ಪಡೆಯಬಹು ದಾಗಿದೆ ಎಂದು ವಾಸವಿ ವಿದ್ಯಾಲಯ ಟ್ರಸ್ಟ್ ಕಾರ್ಯದರ್ಶಿ ಎಸ್. ಕೆ. ಶೇಷಾಚಲ ಇಂದಿಲ್ಲಿ ತಿಳಿಸಿದರು.


ಅವರಿಂದು ಬೆಳಿಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಳೆದ ಬಾರಿಯಿಂದ ಆರಂಭಗೊಂಡ ಈ ಯೋಜನೆಗೆ ಎಂಬ ವಾಸ ವವಿ ಚಾರಿಟಿ ಎಂಬ ಹೆಸರನ್ನು ಇಡಲಾಗಿದ್ದು, ಈಗ ಮಾರ್ಚ್ ೧ ರಿಂದ ೧೮ರವರೆಗೆ ಅರ್ಜಿ ಯನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಮಾರ್ಚ್ ೨೦ರ ಬೆಳಿಗ್ಗೆ ೧೧ ಗಂಟೆಗೆ ಪೋಷಕರ ಸಮ್ಮುಖದಲ್ಲಿ ಲಾಟರಿ ಮೂಲಕ ಮಾಡಲಾಗು ವುದು. ಆಯ್ಕೆಯಾದ ವಿದ್ಯಾರ್ಥಿಗಳ ಪೋಷ ಕರು ಮಾರ್ಚ್ ೨೨ ರೊಳಗೆ ಏಕಗಂಟಿನಲ್ಲಿ ರಿಯಾಯಿತಿಯ ವಾರ್ಷಿಕ ಶುಲ್ಕ ೧೫,೦೦೦ ಗಳನ್ನು ಪಾವತಿಸಬೇಕು ಎಂದರು.
ವಾಸವಿ ವಿದ್ಯಾಲಯದ ಶುಲ್ಕ ದ ಬಹಳಷ್ಟು ಹಣ ರಿಯಾಯಿತಿ ಮೂಲಕ ಕಡಿಮೆಯಾಗಲಿದೆ. ಇದರಲ್ಲಿ ಸಮವಸ್ತ್ರ, ಪುಸ್ತಕ ಸೇರಿರುತ್ತದೆ. ಕಳೆದ ವರ್ಷ ೩೦ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ನೀಡಲಾಗಿತ್ತು ಎಂದರು.


ಶಾಲಾ ಮಟ್ಟದ ಕಲಾ ಮತ್ತು ವಿಜ್ಞಾನ ಮೇಳವನ್ನು ಫೆಬ್ರವರಿ ೨೮ರಂದು ಆಯೋಜಿಸ ಲಾಗಿದ್ದು, ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಅಂದು ಸಂಜೆ ನಾಲ್ಕು ಗಂಟೆಯಿಂದ ೭:೦೦ವರೆಗೆ ಪ್ರವೇಶಾವಕಾಶ ಇರುತ್ತದೆ ಮೇ ೧೫ರಿಂದ ಎಲ್ಲಾ ತರಗತಿಗಳು ಆರಂಭಗೊಳ್ಳ ಲಿದ್ದು, ಸಾಲ ಸೌಲಭ್ಯದ ಉಪಯೋಗ ಉಪ ಯೋಗವನ್ನು ಪಡೆಯು ವಂತೆ ಕೋರಲಾಗಿದೆ. ಹಚ್ಚಿನವಿವರಗಳಿಗೆ ೯೭೪೨೧ ೫೧೪೨೧, ೯೯೧೬೫ ೧೪೦೬೬ ಗೆ ಸಂಪರ್ಕಿಸಬಹುದು.


ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಅಧ್ಯಕ್ಷ ಶಾಮ್ ಸುಂದರ್, ಖಜಾಂಚಿ ಮಂಜುನಾಥ್ ಶೆಟ್ಟಿ, ಪ್ರಾಂಶುಪಾಲ ಮನುಜಿಸೆ ಉಪಸ್ಥಿತರಿದ್ದರು.
/

By admin

ನಿಮ್ಮದೊಂದು ಉತ್ತರ

error: Content is protected !!