ಶಿವಮೊಗ್ಗ ತಾಲ್ಲೂಕಿನ ನಿದಿಗೆ ಹೋಬಳಿ, ಸೋಗಾನೆ ಗ್ರಾಮ ಸರ್ವೇ ನಂ.೧೨೦ರಲ್ಲಿ ನಮ್ಮ ಹೆಸರಿನಲ್ಲಿ ೨೪ ಎಕರೆ ಖಾತೆ ಮತ್ತು ಪಹಣಿಯಿದ್ದು, ನಡವಳಿಯಂತೆ ಪರಿಹಾರ ನೀಡುವವರೆಗೆ ಜಾಗ ಬಿಟ್ಟು ಕದಲಲ್ಲ ಎಂದು ಸೋಗಾನೆಯ ಬಿ.ಟಿ.ರವಿಕುಮಾರ್ ಮತ್ತು ಇತರರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.


ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಯಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದು, ಶಾಸಕ ಕೆ.ಬಿ.ಅಶೋಕ್‌ನಾಯ್ಕ್ ಮತ್ತು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭಾ ನಡವಳಿ ನಡೆಸಿದ್ದು, ಪ್ರತಿ ಎಕರೆಗೆ ೪೦ಲಕ್ಷ ರೂ. ಮತ್ತು ಒಂದು ನಿವೇಶನವನ್ನು ಕೊಡುವುದಾಗಿ ಸಭೆಯಲ್ಲಿ ತೀರ್ಮಾನಿಸಿದ್ದರು. ನಮ್ಮಗಳ ೨೪ ಎಕರೆ ವಶಪಡಿಸಿಕೊಳ್ಳಲು ಮುಂದಾದಾಗ ನಾವು ತಕರಾರು ವ್ಯಕ್ತಪಡಿಸಿದ್ದೆವು. ಆಗ ಪರಿಹಾರದ ಭರವಸೆಯನ್ನು ನೀಡಿದ್ದರು.


ಉಪವಿಭಾಗಾಧಿಕಾರಿಗಳು ನಮಗೆ ಪತ್ರ ವನ್ನು ಬರೆದು ಪ್ರಕರಣ ಸಂಖ್ಯೆ ಎಲ್‌ಎನ್‌ಡಿ ಸಿಆರ್ ೪೫೦/೨೦೧೬-೧೭ ದಿ.೨೬.೦೪.೨೦೨೨ ರಂದು ಸರ್ಕಾರದ ಕಾರ್ಯದರ್ಶಿಗಳಿಗೆ ಈ ಜಮೀನು ಸಂಬಂಧ ಹಣ ಬಿಡುಗಡೆ ಮಾಡಲು ಮನವಿ ಸಲ್ಲಿಸಿದ ಮೇರೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಒಪ್ಪಿಗೆ ಸೂಚಿಸಿ ೨೪ ಎಕರೆ ಜಮೀನಿಗೆ ೧೦.೫೪ ಕೋಟಿ ಬಿಡುಗಡೆ ಮಾಡಿರುತ್ತಾರೆ ಹಾಗೂ ಉಪವಿಭಾಗಾಧಿಕಾರಿ ಗಳಿಗೆ ಪರಿಹಾರದ ಮೊತ್ತ ೯.೬೦ ಕೋಟಿ ರೂ. ಹಣವನ್ನು ಸಹ ಚೆಕ್ ಮುಖಾಂತರ ಬಿಡುಗಡೆಮಾಡಿದ್ದು ಕಂಡು ಬಂದಿದ್ದು, ಇದುವರೆಗೆ ಸಂತ್ರಸ್ತ ರೈತರ ಕುಟುಂಬಗಳಿಗೆ ಸಿಕ್ಕಿಲ್ಲ ಮತ್ತು ನಿವೇಶನವನ್ನು ನೀಡಿರುವುದಿಲ್ಲ.


ಈ ಸಂದರ್ಭದಲ್ಲಿ ಸಂತ್ರಸ್ತ ರೈತ ಕುಟುಂಬಗಳೊಂದಿಗೆ ರೈತ ಮುಖಂಡರಾದ ಕೆ.ಟಿ.ಗಂಗಾಧರ್, ತಿ.ನಾ.ಶ್ರೀನಿವಾಸ್, ಬಿ.ಟಿ.ರವಿಕುಮಾರ್ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!