ಶಿವಮೊಗ್ಗ, ಫೆ.೧೮:
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಹಳಷ್ಟು ಹಳ್ಳಿಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜಾತ್ಯಾತೀತ ಜನತಾ ದಳದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಫೆ.೨೨ ಮತ್ತು ೨೩ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಮಾಜಿ ಶಾಸಕಿ ಶಾರದಾ ಪೂರ‍್ಯಾನಾಯ್ಕ್ ಇಂದಿಲ್ಲಿ ಹೇಳಿದರು.


ಅವರು ಇಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅರಬಿಳಚಿ ಕ್ಯಾಂಪ್‌ನಿಂದ ಆರಂಭಗೊಳ್ಳುವ ರಥಯಾತ್ರೆಯು ಕಲ್ಲಿಹಾಳ್, ಹೆಮ್ಮೆಹಟ್ಟಿ, ಹೊಳೆಹೊನ್ನೂರು, ಆನವೇರಿ, ಮಂಗೋಟೆ, ಹೊಳಲೂರು, ಕುಂಚೇನಹಳ್ಳಿ, ಆಯನೂರು ಮಂಡಗಟ್ಟ ಸೇರಿದಂತೆ ಹಾರ‍್ನಳ್ಳಿಯಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲಿದೆ. ನಂತರ ಮಲವಗೊಪ್ಪದಲ್ಲಿ ಸಭೆ ಹಾಗೂ ವಾಸ್ತವ್ಯವನ್ನು ಹೂಡಲಿದ್ದು, ಮರುದಿನ ಸೂಳೆಬೈಲು ಮಾರ್ಗವಾಗಿ ಹೊಳೆಬೆನ್ನವಳ್ಳಿವರೆಗೆ ಹಲವು ಗ್ರಾಮಗಳಿಗೆ ಭೇಟಿ ನೀಡಲಿದೆ. ಶೆಟ್ಟಿಹಳ್ಳಿ ಸಂತ್ರಸ್ಥರ ವಿಷಯವನ್ನು ಸಹ ಕುಮಾರಸ್ವಾಮಿ ಅಲ್ಲಿನ ಜನರೊಂದಿಗೆ ಚರ್ಚಿಸಲಿದ್ದಾರೆ ಒಟ್ಟು ಗ್ರಾಮಾಂತರ ಕ್ಷೇತ್ರದ ೪೦೦ ಕಿ.ಮೀ. ವ್ಯಾಪ್ತಿಯಲ್ಲಿ ರಥ ಸಂಚರಿಸಲಿದೆ ಎಂದರು.


ಫೆ.೨೧ರಂದು ಭದ್ರಾವತಿಗೆ ಬರಲಿರುವ ಕುಮಾರಸ್ವಾಮಿ ಅವರ ತಂಡದ ಜೊತೆ ಜೆಡಿಎಸ್ ಪ್ರಮುಖರಾದ ಸಿ.ಎಂ. ಇಬ್ರಾಹಿಂ, ಕುಮಾರಸ್ವಾಮಿ ಹಾಗೂ ಇತರರರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಕಾಂತರಾಜ್ ಸೋಮಿನಕೊಪ್ಪ, ಸತೀಶ್, ಎಸ್.ಎನ್. ಮಹೇಶ್, ಗಣೇಶಪ್ಪ, ಗೀತಾ ಸತೀಶ್, ದಾದಾಪೀರ್, ಆಯನೂರು ಬಸಪ್ಪ, ಯೋಗೀಶ್, ಇನಾಯಿತ್, ಕುಮಾರನಾಯ್ಕ್, ರೇಣುಕಮ್ಮ, ಸತೀಶ್, ಕರಿಯಣ್ಣ, ಶಶಿಕುಮಾರ್ ಹಾಗೂ ಇತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!