ಮೇಯರ್ ಆಗಿದ್ದಾಹ ತಗೆದಿದ್ದ ಚಿತ್ರ
ಶಿವಮೊಗ್ಗ,ಫೆ.8:
ಕಳೆದ ವರ್ಷದ ಶಿವಮೊಗ್ಗ ಮಾರಿಕಾಂಬ ಜಾತ್ರೆಯನ್ನು ನೀವು ನೋಡಿದ್ದೀರಿ. ಗೊಂದಲ ಸೃಷ್ಟಿಸುವ ವ್ಯಕ್ತಿಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ. ಅಂತೆಯೇ ಈಗಲೂ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷನಾಗಿರುವ ನಾನು ನಮ್ಮ ಸಮಿತಿ ಜೊತೆಗೂಡಿ ಮುಂದಿನ ವರ್ಷದ ಮಾರಿ ಜಾತ್ರೆಯನ್ನು ಹೇಗೆ ಮಾಡುತ್ತೇವೆ ಕಾದು ನೋಡಿ ಎಂದು ಮಾಜಿ ಮೇಯರ್ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಸ್.ಕೆ. ಮರಿಯಪ್ಪ ಇಂದಿಲ್ಲಿ ತಿಳಿಸಿದರು.


ಅವರು ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೀತಿ ಹೀಗಿತ್ತು. ನಿಮ್ಮೆಲ್ಲರ ಸಹಕಾರದಿಂದ ಶಿವಮೊಗ್ಗ ಸಾರ್ವಜನಿಕರ ಹಿತಾಕಾಂಕ್ಷೆಯಂತೆ ಅತ್ಯಂತ ಅದ್ಭುತವಾಗಿ ಭಕ್ತಿ ಪೂರ್ವಕವಾದ ಮಾರಿ ಜಾತ್ರೆಯನ್ನು ಮಾಡಿದ್ದೆವು. ಒಂದಿಷ್ಟು ಗೊಂದಲಗಳನ್ನು ಸೃಷ್ಟಿ ಮಾಡಲಾಗಿತ್ತು ಅವುಗಳನ್ನು ಬಗೆಹರಿಸಲಾಗಿತ್ತು. ಮುಂದಿನ ಬಾರಿ ನಡೆಯುವ ಶಿವಮೊಗ್ಗ ಮಾರಿ ಜಾತ್ರೆಯನ್ನು ನೋಡಿ ಎಂದು ಅವರು ತಿಳಿಸಿದರು.
ಶಿವಮೊಗ್ಗ ನಗರದ ಅಭಿವೃದ್ಧಿಯ ಜೊತೆಗೆ ಶಾಂತಿ ನೆಮ್ಮದಿ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಈಶ್ವರಪ್ಪ ಸ್ಪರ್ಧಿಸಿದರೂ ಸಹ ನಾನು ಸ್ಪರ್ಧಿಸುತ್ತೇನೆ. ನನ್ನಲ್ಲಿ ಜಾತಿ ಎಂಬುದು ಮುಖ್ಯವಲ್ಲ. ಅದನ್ನು ನೀವು ಮಾರಿಕಾಂಬ ಸೇವಾ ಸಮಿತಿಯ ಮೂಲಕ ನೋಡಿದ್ದೀರಿ. ಇದೇ ಬಿಜೆಪಿಯ ಶಾಸಕ, ಹಿರಿಯ ನಾಯಕ ಆಯನೂರು ಮಂಜುನಾಥ್ ಅವರೇ, ನೇರವಾಗಿ ಶಿವಮೊಗ್ಗ ಅಭಿವೃದ್ಧಿಯ ಜೊತೆಗೆ ಶಾಂತಿ ನೆಮ್ಮದಿಯನ್ನು ಹಾಗೂ ಸಕುಟುಂಬ ಪರಿವಾರವನ್ನು ಕಾಣಬೇಕಿದೆ. ಹಾಗಾಗಿ ನನಗೆ ಟಿಕೆಟ್ ನೀಡಿ ಎಂದು ಬಿಜೆಪಿಯ ಪ್ರಮುಖರಿಗೆ ಹಾಗೂ ಗಣ್ಯರಿಗೆ ವಿನಂತಿಸಿದ್ದಾರೆ. ಹಾಗಾದರೆ ಶಿವಮೊಗ್ಗದಲ್ಲಿ ಶಾಂತಿಯ ವಾತಾವರಣವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಶಿವಮೊಗ್ಗ ನೆಮ್ಮದಿಯ ತಾಣವಾಗಬೇಕು ಈ ಹಿನ್ನೆಲೆಯಲ್ಲಿ ನನಗೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂಬ ಭರವಸೆ ಇದೆ ಎಂದು ಮರಿಯಪ್ಪ ಹೇಳಿದರು.

By admin

ನಿಮ್ಮದೊಂದು ಉತ್ತರ

error: Content is protected !!