ಶಿವಮೊಗ್ಗ, ಫೆ.04:
ವಿಐಎಸ್ ಎಲ್ ಕಾರ್ಖಾನೆಯನ್ನ ಮುಚ್ಚಿ ಯಾವ ಪುರುಷಾರ್ಥಕ್ಕಾಗಿ ವಿಮಾನ ನಿಲ್ದಾಣ ಆರಂಭಿಸುತ್ತಿದ್ದೀರಿ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಬಿಜೆಪಿ ನಾಯಕರಿಗೆ ಅದರಲ್ಲೂ ಯಡಿಯೂರಪ್ಪ ಅವರಿಗೆ ನೇರವಾದ ದ್ವನಿಯ ಮೂಲಕ ಗಂಭೀರವಾಗಿ ಪ್ರಶ್ನಿಸಿದರು.
ಅವರು ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಯ ಉಳಿಸಿ ನಡೆಯುತ್ತಿರುವ ಹೋರಾಟವನ್ನ ಬೆಂಬಲಿಸಿ ಪ್ರತಿಭಟಿಸುತ್ತಿರುವ ಕಾರ್ಮಿಕರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ವಿಮಾನ ನಿಲ್ದಾಣ ಯಾರು ಕೇಳಿದವರು? ಜನರ ಬದುಕಿಗಿಂತ ವಿಮಾನ ನಿಲ್ದಾಣ ಮುಖ್ಯವಾಯ್ತಾ ಎಂದು ಪ್ರಶ್ನಿಸಿದರು.
ಕಾರ್ಖಾನೆಯ ಉಳಿವಿಗಾಗಿ ಕನ್ನಡಿಗರು ಇನ್ನೂ ಬದುಕಿದ್ದೇವೆ ಎಂದು ಕೇಂದ್ರಕ್ಕೆ ಸವಾಲು ಹಾಕಿದ್ದ ಮಾಜಿ ಸಿಎಂ ಅಪ್ಪಾಜಿ ಗೌಡ 1997 ರಲ್ಲಿ ಕಾರ್ಖಾನೆ ಉಳಿಸಲು ದೆಹಲಿಗೆ ಬಂದಿದ್ದರು. ಸೇಲ್ ಗೆ ವಿಐಎಸ್ ಎಲ್ ನ್ನ ಸೇರಿಸಲು ಪ್ರಯತ್ನ ನಡೆದಿತ್ತು. ಸೇಲ್ ನಲ್ಲಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು.
ಅಧ್ಯಕ್ಷರಾಗಲು ಹೊರಟವರೊಂದಿಗೆ ನಾನೇ ಮಾತನಾಡಿದ್ದೆ. ಅಧ್ಯಕ್ಷರನ್ನಾಗಿಸಲು ಭಯಹುಟ್ಟಿಸಿ 650 ಕೋಟಿ ರೂ ಗಳ ಬಂಡವಾಳ ಹಾಕುವಂತೆ ಒತ್ತಾಯಿಸಿ ಪುನಶ್ಚೇತನ ನೀಡಲು ಮಾತನ್ನ ಪಡೆದು ಸೇಲ್ ಗೆ ಸೇರಿಸಲಾಗಿತ್ತು ಎಂದರು.
ಬಿಎಸ್ ವೈ ನ ಮುಖ್ಯಮಂತ್ರಿ ಮಾಡಿದ್ದನ್ನ ಮತ್ತೆ ಪುನರುಚ್ಚರಿಸಿದ ಕುಮಾರ ಸ್ವಾಮಿ ಎರಡು ಬಾರಿ ಸಿಎಂ ಆಗಿದ್ದೆ ಸಿದ್ದರಾಮಯ್ಯ ಪಕ್ಷ ಬಿಟ್ಟು ಹೋದಾಗ 2005 ರಲ್ಲಿ ವಿಧಾನ ಸಭೆ ವಿಸರ್ಜಿಸಲು ದೇವೇಗೌಡರು ಯೋಜಿಸಿದ್ದರು. ಶಾಸಕರು ಚುನಾವಣೆ ಬೇಡ ಖರ್ಚು ಮಾಡಲು ಕಷ್ಟವಿದೆ ಎಂದಿದ್ದರು. ಅದೇ ವೇಳೆ ಬಿಎಸ್ ವೈ ಸಚಿವ ಸ್ಥಾನ ಕೊಡಿ ಎಂದು ಜೆಡಿಎಸ್ ಬಾಗಿಲಿಗೆ ಬಂದಿದ್ದರು ಎಂದು ಹೇಳಿದರು.
ಯಾವ ಪುರುಷಾರ್ಥಕ್ಕೆ ವಿಮಾನ ನಿಲ್ದಾಣ ಮಾಡ್ತಾ ಇದ್ದಾರೆ ಗೊತ್ತಿಲ್ಲ. ಅಂದು ಬಿಎಸ್ ವೈ ಬಿಜೆಪಿಯಲ್ಲಿ ಸಮಸ್ಯೆ ಇದೆ. ನನಗೆ ಮಂತ್ರಿಸ್ಥಾನ ಕೊಡಿ ಎಂದಿದ್ದರು. ರಾಜಕೀಯದಲ್ಲಿ ನೊಂದಿದ್ದೇನೆ ಎಂದಿದ್ದರು. ನಾನು ಬುದ್ದಿಹೇಳಿದ್ದೆ. ನೀವು ಶಾಸಕರನ್ನ ಒಗ್ಗೂಡಿಸಿ ಬನ್ನಿ ಎಂದಿದ್ದೆ.
ನಾವು ಬಿಜೆಪಿ ಜೊತೆಗೆ ಕೈಜೋಡಿಸದಿದ್ದರೆ ನಾಲ್ಕು ಬಾರಿ ಸಿಎಂ ಆಗ್ತಿರಲಿಲ್ಲ. ವಿಶ್ವೇಶ್ವರಯ್ಯ ಕಟ್ಟಿದ ಇತಿಹಾಸದ ಕಾರ್ಖಾನೆಯನ್ನ ಪರಬಾರೆ ಮಾಡಲು ಮುಖ್ಯಮಂತ್ರಿಯಾದಿರಾ? ನಿಮಗೆ ಮನಸ್ಸಿನಲ್ಲಿ ಆತ್ಮಸಾಕ್ಷಿ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಹತ್ತಿರ ಹೋಗಿ ರಾಜ್ಯದ ಜನತೆ ಬೀದಿ ಪಾಲುಮಾಡಲು ಗೆದ್ದು ಬಂದಿಲ್ಲವೆಂದು ತಿಳಿಸಿ ಎಂದರು.
ಎಂಪಿಎಂನ್ನ ತಿಂದು ನುಂಗಿದ್ರಿ. ದೊಡ್ಡ ಶಿಕ್ಷಣ ಸಂಸ್ಥೆ, ಹೋಟೆಲ್ ನಡೆಸಿದ್ರಿ. ಮಂಡ್ಯದಿಂದ ಬಂದವರನ್ನ ಗುರುತಿಸಿ ಗೆಲ್ಲುಸಿದ್ದು ಇದಕ್ಕೆನಾ? ಈಶ್ವರಪ್ಪನವರೇ ಈ ಬಗ್ಗೆ ಯೋಚಿಸಿ. ನಾಲ್ಕು ತಿಂಗಳು ಯಾರಿಗೂ ಪರಬಾರೆ ಮಾಡದಂತೆ ಕೇಂದ್ರಕ್ಕೆ ತಿಳಿಸಿ. ನಂತರ ಅದನ್ನ ಹೇಗೆ ಉಳಿಸಿಕೊಳ್ಳಬೇಕು ಗೊತ್ತಿದೆ ಎಂದರು.
ರಾಜ್ಯದ ಜನ ಏನು ತೀರ್ಮಾನ ಮಾಡಬೇಕಿದೆ ಎಂದು ಗೊತ್ತಿದೆ. ಜಿಲ್ಲೆಯ ಜನರಿಂದ ಬದುಕಿದ್ದೇವೆ ಎಂದು ಇದ್ದರೆ. ಕಾರ್ಖಾನೆ ಉಳಿಸಿ. ಕೊನೆಗಳಿಗೆಯಲ್ಲಿ ಜನರ ಶಾಪಕ್ಕೆ ಗುರಿಯಾಗಬೇಡಿ ಎಂದು ಕಿವಿ ಮಾತೇಳಿದರು. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಪಾಲಿದೆ. ಅವರು ಸಿಎಂ ಆಗದಿದ್ದರೆ ಶಿವಮೊಗ್ಗ ಗೆಲ್ಲುತಿರಲಿಲ್ಲ.
ರಾಜ್ಯದ ಖಜಾನೆಗೆ ಬರುವ ತೆರಿಗೆ ಹಣವನ್ನ40% ಕಮಿಷನ್ ತಡೆದರೆ ಆ ಹಣದಿಂದ ಕಾರ್ಖಾನೆಯಿಂದ ಪುನಶ್ಚೇತನಮಾಡಬಹುದು. ರಾಜ್ಯದಲ್ಲಿ ಅನೇಕ ಕಾರ್ಖಾನೆ ಮುಚ್ಚಿದವು. ಎಲ್ಲಾ ಸಾರ್ವಜನಿಕ ವಲಯದ ಕಾರ್ಖಾನೆ ಮುಚ್ಚಲಾಗಿದೆ. ದೇವೇಗೌಡರು ಕಾರ್ಖಾನೆಯ ಮೇಲೆ ಬಂಡವಾಳ ಹಿಂಪಡೆಯ ಬೇಡಿ ಎಂದು ಪತ್ರ ಬರೆದಿದ್ದಾರೆ. ಅವರಿಗೆ ಅನಾರೋಗ್ಯವಿದೆ ಹಾಗಾಗಿ ದೆಹಲಿಗೆ ಹೋಗಿಲ್ಲ ಎಂದರು.
ಕಾರ್ಮಿಕರು ಕಣ್ಣೀರು ಹಾಕಬೇಡಿ ಒಂದು ತಿಂಗಳು ಚುನಾವಣೆ ಘೋಷಣೆ ಆಗಲಿದೆ.ನೀತಿ ಸಂಹಿತೆ ಬಂದರೆ ಬಿಜೆಪಿಗೆ ಏನು ಮಾಡಲು ಆಗೊಲ್ಲ. ರಾಜ್ಯದಲ್ಲಿಯೇ ಬಿಜೆಪಿ ಇಲ್ಲ. ಭದ್ರಾವತಿಯಲ್ಲಿ ಗೆದ್ದು ಬರುತ್ತಾ. ತಾಯಂದಿರು ನೀನೆ ಸಿಎಂ ಎಂದು ನನಗೆ ಹರಿಸುತ್ತಿದ್ದಾರೆ. ಪಂಚರತ್ನ ಯಾತ್ರೆಗೆ ಅಭೂತ ಪೂರ್ವ ಪ್ರತಿಕ್ರಿಯೆ ಸಿಗುತ್ತಿದೆ ಎಂದರು.