ಗ್ರಾಮೀಣರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ ಎಂದು ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಲಕ್ಷ್ಮಣ ಕೊಡಸೆ ಹೇಳಿದರು.


ಅವರು ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ತು ವತಿಯಿಂದ ನಗರದ ಸಾಹಿತ್ಯ ಗ್ರಾಮದಲ್ಲಿ ಇಂದು ಆಯೋಜಿಸಿದ್ದ ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆ ಶತಮಾನಗಳಿಂದಲೂ ಉಳಿಯುತ್ತಲೇ ಬಂದಿದೆ. ಎಲ್ಲಾ ದಾಳಿಗಳ ನಡುವೆಯೂ ಕನ್ನಡ ಭಾಷೆ ಉಸಿರಾಡುತ್ತಲೇ ಇದೆ. ಕನ್ನಡ ಭಾಷೆಯನ್ನು ಉಳಿಸಿದವರು ನಮ್ಮ ಹಳ್ಳಿಗರು. ಗ್ರಾಮೀಣರು ಎಂದೂ ಈ ಭಾಷೆಯನ್ನು ಕೈಬಿಡುವುದಿಲ್ಲ. ಎಲ್ಲಾ ಭಾಷೆಯ ಪದಗಳನ್ನೂ ಕನ್ನಡ ಭಾಷೆಯನ್ನಾಗಿ ಮಾಡಿಕೊಂಡು ಬೆಳೆಸುತ್ತಿದ್ದಾರೆ. ಕಥೆ ಕಾದಂಬರಿಗಳಿಂದ ಕನ್ನಡ ಉಳಿಯುವುದಿಲ್ಲ ಬದಲಾಗಿ ಕನ್ನಡ ಬಳಸುವ ಗ್ರಾಮೀಣರಿಂದ ಉಳಿದಿದೆ ಎಂದರು.


ಹಸೆ ಚಿತ್ತಾರಗಳು, ಭೂಮಣ್ಣಿ ಬುಟ್ಟಿಯ ಚಿತ್ತಾರಗಳು ಅಪ್ಪಟ ದೇಶೀಯ ಚಿತ್ತಾರಗಳಾಗಿವೆ. ಅಂಟಿಕೆ ಪಿಂಟಿಕೆ, ಡೊಳ್ಳು ಕುಣಿತ ಮೊದಲಾದ ಕಲಾ ಪ್ರಕಾರಗಳು ಇನ್ನ? ಯುವ ಪೀಳಿಗೆ ತಲುಪಬೇಕಿದೆ. ಮಲೆನಾಡಿನ ಈಗಿನ ಚಿತ್ರಣ ಬಹಳ? ಬದಲಾವಣೆಯಾಗಿದೆ. ಮೊಬೈಲ್ ಬಳಕೆ ಬಂದ ಬಳಿಕ ಮಾಹಿತಿ ತಂತ್ರಜ್ಞಾನ ಸಾಕ? ಸುಧಾರಣೆಯಾಗಿದೆ. ಗ್ರಾಮೀಣ ಯುವಜ ಯುವತಿಯರಿಗೆ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯದ ಬಗ್ಗೆ ಸೂಕ್ತ ಮಾರ್ಗದರ್ಶನ ಬೇಕಿದೆ ಎಂದರು.
ಜಿಲ್ಲೆಯ ನಾಲ್ವರು ಮುಖ್ಯಮಂತ್ರಿಗಳು ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಇವರಲ್ಲಿ ಕಡಿದಾಳ್ ಮಂಜಪ್ಪನವರ ಹೆಸರಿನಲ್ಲಿ ಕುವೆಂಪು ವಿವಿಯಲ್ಲಿ, ಬಂಗಾರಪ್ಪ ಹೆಸರಿನಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ವಿವಿಯಲ್ಲಿ ಹಾಗೂ ಜೆ.ಎಚ್. ಪಟೇಲರ ಹೆಸರಿನಲ್ಲಿ, ದಾವಣಗೆರೆ ವಿವಿಯಲ್ಲಿ ಅಧ್ಯಯನ ಪೀಠ ಆರಂಭಿಸಬೇಕೆಂದು ಒತ್ತಾಯಿಸಿದರು.


ಅಡಿಕೆಯನ್ನೇ ನಂಬಿದ ರೈತರ ಬದುಕು ಇತ್ತೀಚಿನ ದಿನಗಳಲ್ಲಿ ಆತಂಕಕ್ಕೀಡು ಮಾಡುವಂತಹ ಪ್ರಸಂಗಗಳು ನಡೆದಿವೆ. ಅಡಿಕೆಯ ವಿವಿಧಬಳಕೆ ಬಗ್ಗೆ ಸಂಶೋಧನೆ ನಡೆಸಬೇಕಿದೆ. ಅಡಿಕೆ ಚೊಗರನ್ನು ನೈಸರ್ಗಿಕ ಬಣ್ಣವಾಗಿ ಬಳಕೆ ಮಾಡಲು ಇನ್ನ? ಸಂಶೋಧನೆ ನಡೆಯಬೇಕಿದೆ ಎಂದರು.
ಶರಾವತಿ ಮಳುಗಡೆ ಸಂತ್ರಸ್ತರ ಬದುಕು ಇಂದಿಗೂ ಹಸನಾಗಿಲ್ಲ. ಅಂದು ಭೂಮಿ ಕಳೆದುಕೊಂಡವರು ಅರಣ್ಯ ಕಾಯಿದೆಗಳಿಂದ ಇಂದಿಗೂ ಅತಂತ್ರರಾಗಿದ್ದಾರೆ. ಕ್ಯಾಸನೂರು ಕಾಡಿನ ಕಾಯಿಲೆಗೆ ಇಂದಿಗೂ ಸಮಗ್ರ ಪರಿಹಾರ ಸಿಗದಿರುವುದು ವಿ?ದನೀಯ ಎಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ೮೧ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಸಾಹಿತಿ ನಾ.ಡಿಸೋಜ, ಸಾಹಿತ್ಯ ಎಂದರೆ ವಯಸ್ಸಾದವರಿಗೆ ಎಂಬ ಭಾವನೆ ಬಂದಿದೆ. ಸಾಹಿತ್ಯದಿಂದ ಯುವ ಸಮುದಾಯ ದೂರ ಹೋಗುತ್ತಿದೆ. ಪುಸ್ತಕಗಳು ಜ್ಞಾನದ ಸಂಕೇತವಾಗಿವೆ. ಪುಸ್ತಕಗಳನ್ನು ಓದಬೇಕು, ಜ್ಞಾನ ಹೆಚ್ಚಳ ಮಾಡಿಕೊಳ್ಳಬೇಕು. ಯುವ ಜನರಲ್ಲಿ ಸಾಹಿತ್ಯ ಅಧ್ಯಯನದ ಅಗತ್ಯವಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಡಾ. ಗುಂಡಾ ಜೋಯ್ಸ್ ಧ್ವಜ ಹಸ್ತಾಂತರ ಮಾಡಿ ಮಾತನಾಡಿ,

ಕನ್ನಡಿಗರರು ಇರುವವರೆಗೆ ಕನ್ನಡ ಇರುತ್ತದೆ ಎಂಬುದನ್ನು ವಿದ್ವಾಂಸರು ಹೇಳಿದ್ದಾರೆ. ರಾಷ್ಟ್ರೀಯ ಭಾ?ಯ ಅನುದಾನ ಕೇವಲ ೨ ಕೋಟಿ ರೂ. ನೀಡಲಾಗಿದೆ. ಬೇರೆ ಭಾ?ಗೆ ೧೦ ಕೋಟಿ ರೂ. ನೀಡಲಾಗಿದೆ. ನ್ಯಾಯಾಲಯದಲ್ಲಿ ನ್ಯಾಯ ತೀರ್ಮಾನದ ಆದೇಶ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಕನ್ನಡದ ಕಡತಗಳು ಹಾಳಾಗುತ್ತಿರುವುದು, ಜಿಲ್ಲಾಧಿಕಾರಿ ಕಚೇರಿಯಲ್ಲಿನ ಕಡತಗಳು ನಾಶವಾಗುತ್ತಿರುವುದು ವಿ?ದನೀಯ, ಕನ್ನಡ ಭಾ? ಬೆಳವಣಿಗೆಯಲ್ಲಿ ಕಾನೂನು ವಿಧೇಯಕ ಬಂದರೆ ಇನ್ನ? ಬೆಳವಣಿಗೆ ಸಾಧ್ಯ ಎಂದರು.


ವಿವಿಧ ಲೇಖಕರ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿ?ತ್ ಶಾಸಕ ಆಯನೂರು ಮಂಜುನಾಥ್, ನಗರದ ಕರ್ನಾಟಕ ಸಂಘ ಸಾಹಿತ್ಯ ಚಟುವಟಿಕೆಗಳಿಗೆ ತಾಣವಾಗಿತ್ತು. ಇಂದು ಅಲ್ಲಿ ಚಟುವಟಿಕೆ ಸ್ವಲ್ಪ ಕಡಿಮೆಯಾಗಿದೆ. ಈ ಜಿಲ್ಲೆಯಲ್ಲಿ ಸಾಹಿತ್ಯ ಸಹಜವಾಗಿ ಬೆಳೆದು ಬಂದಿದೆ. ೧೨ನೇ ಶತಮಾನದಲ್ಲಿನ ಅಕ್ಕಮಹಾದೇವಿಯಿಂದ ಹಿಡಿದು ಇಲ್ಲಿಯವರೆಗೆ ಸಾಹಿತ್ಯ, ಕಲೆ, ನೃತ್ಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೆಸರು ಮಾಡಿದೆ. ಪ್ರತಿಭೆಗಳನ್ನು ಹೊರಹಾಕಲು ಇಂತಹ ಸಾಹಿತ್ಯ ಸಮ್ಮೇಳನಗಳು ಗೋಷ್ಠಿಗಳು ಪೂರಕವಾಗಿವೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಟಿ.ಕೆ. ರಮೇಶ್ ಶೆಟ್ಟಿ, ರಾಘವೇಂದ್ರ ಮೊದಲಾದವರು ಇದ್ದರು.
ಇದಕ್ಕೂ ಮೊದಲು ಚಾಲುಕ್ಯನಗರ ವೃತ್ತದಿಂದ ಸಮ್ಮೇಳನಾಧ್ಯಕ್ಷರ ಮರವಣಿಗೆ ನಡೆಸಲಾಯಿತು. ಸಮ್ಮೇಳನದಲ್ಲಿ ಪುಸ್ತಕಗಳ ಮಾರಾಟದ ಅಂಗಡಿಗಳು ಗಮನ ಸೆಳದವು.

By admin

ನಿಮ್ಮದೊಂದು ಉತ್ತರ

error: Content is protected !!