*
 ಶಿವಮೊಗ್ಗ,
      ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾದ್ಯಾಪಕರುಗಳ ಗುತ್ತಿಗೆ ಆಧಾರಿತ ಹುದ್ದೆಗಳ ನೇಮಕ ಸಂಬಂಧ ಫೆಬ್ರವರಿ 08 ರಂದು ಸಂದರ್ಶನ ನಡೆಯಲಿದೆ.


      ಪಶುವೈದ್ಯಕೀಯ ಸ್ತ್ರೀ ರೋಗ ಮತ್ತು ಪ್ರಸೂತಿ ಶಾಸ್ತ್ರ, ಪಶುವೈದ್ಯಕೀಯ ರೋಗಶಾಸ್ತ್ರ,, ಪಶುವೈದ್ಯಕೀಯ ಔಷಧ ಹಾಗೂ ವಿಷ ಶಾಸ್ತ್ರ, ವಿಭಾಗ, ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ, ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತ್ರ, ವಿಭಾಗ, ಪಶುವೈದ್ಯಕೀಯ ಶರೀರಕ್ರಿಯಾ ಮತ್ತು ಜೀವ ರಸಾಯನ ಶಾಸ್ತ್ರ ವಿಭಾಗ, ಪ್ರಾಣಿ ಅನುವಂಶೀಯತೆ ಮತ್ತು ತಳಿ ಶಾಸ್ತ್ರ, ಪಶು ವೈದ್ಯಕೀಯ ಚಿಕಿತ್ಸಾ ಶಾಸ್ತ್ರ, ಪಶುವೈದ್ಯಕೀಯ ಸೂಕ್ಷ್ಮ ಜೀವಾಣು ಶಾಸ್ತ್ರ, ವಿಭಾಗ, ದೈಹಿಕ ಶಿಕ್ಷಣ ಮತ್ತು ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣದ ಪಶುವೈದ್ಯಕೀಯ ಚಿಕಿತ್ಸಾ ಶಾಸ್ತ್ರ, ಪಶುವೈದ್ಯಕೀಯ ಶಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ, ಚಿಕಿತ್ಸಾ ರೋಗಶಾಸ್ತ್ರ /ಸೂಕ್ಷ್ಮಜೀವಾಣು ಶಾಸ್ತ್ರ /ಪರೋಪಜೀವಿ ಶಾಸ್ತ್ರ, / ಜೀವರಸಾಯನ ಶಾಸ್ತ್ರ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.


     ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿಯಂತೆ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಆಯ್ಕೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‍ಇಟಿ) ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ರೂ. 57,600/- ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಮಾಣ ಪತ್ರ ಹೊಂದಿರದ ಅಭ್ಯರ್ಥಿಗಳಿಗೆ ಮಾಸಿಕ ರೂ.50,000/- ವೇತನವಾಗಿ ಪಾವತಿಸಲಾಗುವುದು.


    ಫೆಬ್ರವರಿ 08 ರ ಬೆಳಗ್ಗೆ 11 ಗಂಟೆಯಿಂದ ಡೀನ್ ಕಚೇರಿ, ಪಶು ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ಇಲ್ಲಿ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಜಾಲತಾಣ www.kvafsu.edu.in  ಹಾಗೂ 08182-200872  ಸಂಪರ್ಕಿಸಬಹುದಾಗಿದೆ.

==

By admin

ನಿಮ್ಮದೊಂದು ಉತ್ತರ

error: Content is protected !!