ಹೊಸನಗರ; ಹತಾಶೆಗೊಳಗಾಗಿರುವ ತಮ್ಮ ರಾಜಕೀಯ ವಿರೋಧಿಗಳು ಇತ್ತೀಚೆಗೆ ಕೀಳುಮಟ್ಟದ ಅಪಪ್ರಚಾರ ನಡೆಸುವುದನ್ನೇ ಅಭ್ಯಾಸವಾಗಿಸಿ ಕೊಂಡಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.


ಅವರು ತಾಲೂಕಿನ ಕೊಡಚಾದ್ರಿ ಸಮೀಪದ ಕಟ್ಟಿನಹೊಳೆಗ್ರಾಮದಲ್ಲಿ ನೂತನ ರಸ್ತೆ ಅಭಿವೃದ್ಧಿಕಾಮಗಾರಿಗೆ ಶನಿವಾರ ಅವರು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ ೪೫ವರ್ಷಗಳಿಂದ ನಾನು ರಾಜಕಾರಣ ನಡೆಸುತ್ತಿದ್ದೇನೆ. ತೀರ್ಥಹಳ್ಳಿಯ ಪ್ರಬುದ್ಧ ರಾಜಕಾರಣಿಗಳನ್ನು ಹತ್ತಿರದಿಂದ ನೋಡಿದ್ದೇನೆ. ನನ್ನರಾಜಕೀಯ ಭವಿಷ್ಯಕ್ಕಾಗಿ ಬೇರೆಯವರನ್ನು ಮಟ್ಟ ಹಾಕಲು ನಾನು ತಯಾರಿಲ್ಲ. ನನ್ನಜನಪರ ಕಾಳಜಿಯಿಂದ ದೊರೆತ ಮತದಾರರ ಪ್ರೀತಿ ನನ್ನರಾಜಕೀಯವಾಗಿ ಮೇಲಕ್ಕೇರಿಸಿದೆ ಎಂದುಅವರು ಹೇಳಿದರು.


ಕೊಡಚಾದ್ರಿ ಬೆಟ್ಟದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಬೆಳೆಯಬೇಕಿದೆ. ಆ ಉದ್ದೇಶದಿಂದ ಹಿಂದೆಅಲ್ಲಿಗೆರಸ್ತೆ ಮಂಜೂರು ಮಾಡಲಾಗಿತ್ತು. ಆದರೆ ಕೆಲ ವೈಯ್ಕಕ್ತಿಕ ಹಿತಸಕ್ತಿ ಹೊಂದಿದವರು ಪರಿಸರ ಉಳಿಸುವ ಸೋಗಿನಲ್ಲಿಕೋರ್ಟ್‌ನ ಮೊರೆ ಹೋದರು. ರಸ್ತೆಆಗದಿರುವುದು ವಿಷಾಧಕರ. ಮಲೆನಾಡು ಭಾಗದಲ್ಲಿಕೈಗಾರಿಕೆಆರಂಬಿಸಲು ಬರುವುದಿಲ್ಲ. ಜನರಆರ್ಥಿಕಅಭಿವೃದ್ಧಿಗೆ ಇಕೋ ಟೂರಿಸಮ್‌ಒಂದೇದಾರಿಎಂದರು.
ಈ ಭಾಗದ ಗ್ರಾಮಗಳಿಗೆ ೧೦ ವರ್ಷದ ಹಿಂದೆ ತಾವು ಶಾಸಕರಾಗಿದ್ದ ವೇಳೆ ವಿದ್ಯುತ್ ಸೌಕರ‍್ಯ, ಒಂದಿಷ್ಟು ರಸ್ತೆ ನಿರ್ಮಾಣ ಮಾಡಲುಅನುದಾನ ನೀಡಲಾಗಿತ್ತು. ಆ ಬಳಿಕ ೧೦ ವರ್ಷಗಳ ಕಾಲ ತಮ್ಮರಾಜಕೀಯ ವಿರೋಧಿಗಳು

ಜನಪ್ರತಿನಿಧಿಗಳಾಗಿದ್ದರು. ಈ ಅವಧಿಯಲ್ಲಿಕ್ಷೇತ್ರಕ್ಕೆಒಟ್ಟು ೨೭೦೦ ಕೋಟಿರೂ. ಅನುದಾನತರಲಾಗಿದೆ. ಅಧಿಕಾರಇಲ್ಲದಾಗಆರೋಪ ಮಾಡುವುದು ಸುಲಭ. ಆದರೆಅಧಿಕಾರದೊರೆತಿದ್ದಕಾಲದಲ್ಲಿ ಏನು ಮಾಡಿದರುಎನ್ನುವುದುಗಣನೀಯ. ಕಂಡಕಂಡದಕ್ಕೆಲ್ಲ ವಿರೋಧಿಸುವುದು, ಪಾದಯಾತ್ರೆ ಮಾಡುವುದೇ ಕೆಲವರಿಗೆ ಹವ್ಯಾಸವಾಗಿದೆಎಂದರು.
ಗ್ರಾಮ ಪಂಚಾಯಿತಿಅಧ್ಯಕ್ಷೆ ಅನುಪಮ ಶ್ರೀನಿವಾಸ್‌ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೆ.ವಿ.ಕೃಷ್ಣಮೂರ್ತಿ, ಸುರೇಶ್ ಸ್ವಾಮಿರಾವ್, ಕೆ.ವಿ.ಸುಬ್ರಮಣ್ಯ, ದೊಡ್ಲೆಪಾಲುಚಂದ್ರಶೇಖರ್, ಗಣಪತಿ, ಸತ್ಯನಾರಾಯಣ, ಕೊಳಕಿ ಲಕ್ಷ್ಮಿನಾರಾಯಣ, ತ್ರಿವೇಣಿ, ಹೊಸನಗರ ತಹಸೀಲ್ದಾರ್ ವಿ.ಎಸ್.ರಾಜೀವ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್ ಮತ್ತಿತರರು ಇದ್ದರು.


.

By admin

ನಿಮ್ಮದೊಂದು ಉತ್ತರ

error: Content is protected !!