ಶಿವಮೊಗ್ಗ : ಬೆಂಗಳೂರಿನ ಮಹದೇವಪುರದ ಬಿಜೆಪಿ ಕಾರ್ಯಕರ್ತನಾದ ಪ್ರದೀಪ್ ತಲೆಗೆ ಗುಂಡು ಹಾರಿಸಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಮಹತ್ಯೆಗೆ ಅರವಿಂದ ಲಿಂಬಾವಳಿಯವರು ಕಾರಣವೆಂದು ಡೆತ್‌ನೋಟ್‌ನಲ್ಲಿ ಬರೆದಿರುವ ಕಾರಣ ಪ್ರಕರಣ ಪ್ರಥಮ ವರ್ತಮಾನ ವರದಿಯಲ್ಲಿ ಶಾಸಕರನ್ನು ಎ-೩ ಆರೋಪಿ ಎಂದು ದಾಖಲಿಸಲಾಗಿದೆ.

ಈ ಸಂಬಂಧ ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಶಾಸಕ ಅರವಿಂದ ಲಿಂಬಾವಳಿಯವರ ರಾಜೀನಾಮೆ ಪಡೆಯುವಂತೆ ಆಮ್ ಆದ್ಮಿ ಪಾರ್ಟಿ ಶಿವಮೊಗ್ಗ ನಗರ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ರವಿ ಕಿಶನ್ ಒತ್ತಾಯಿಸಿದ್ದಾರೆ.


ಶಾಸಕರನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಿ ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯಿಸಿದ್ದಾರೆ. ಅವರು ಪತ್ರಿಕಾ ಪ್ರಕಟಣೆಯಲ್ಲಿ ಬಿಜೆಪಿ ಸರ್ಕಾರದ ೪೦ ಪರ್ಸೆಂಟ್ ಸರ್ಕಾರವಾಗಿದ್ದು, ಕೆಲವೇ ದಿನಗಳ ಹಿಂದೆಯಷ್ಟೇ ಗುತ್ತಿಗೆದಾರರನೊಬ್ಬ ಮಾಜಿ ಸಚಿವರು, ಹಾಲಿ ಶಾಸಕರಾದ ಕೆ.ಎಸ್.ಈಶ್ವರಪ್ಪ ವಿರುದ್ಧ ಅಪಾಧಿಸಿದ್ದರು, ಈ ಕಾರಣದಿಂದಲೇ ಕೆ.ಎಸ್.ಈಶ್ವರಪ್ಪನವರನ್ನು ಸಚಿವ ಸಂಪುಟದಿಂದ ಕೈ ಬಿಡಲಾಗಿತ್ತು. ಸ್ವಹಿತಾಸಕ್ತಿಗಾಗಿ ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರನ್ನು ಮರೆತು ಕೋಟಿಗಟ್ಟಲೇ ಜನರ ತೆರಿಗೆ ಹಣದಿಂದ ನಡೆಸುವ ಕಲಾಪವನ್ನು ಬಹಿಷ್ಕರಿಸಿ ಕ್ಷೇತ್ರದ ಜನತೆಗೆ ಅವಮಾನ ಮಾಡಿರುವ ಕೆ.ಎಸ್.ಈಶ್ವರಪ್ಪನವರಿಗೆ ಜನರು ತಕ್ಕ ಪಾಠ ಕಳಿಸುತ್ತಾರೆಂದು ಹೇಳಿದರು.


ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ಪ್ರಕರಣಗಳು ತಮ್ಮ ಗಮನಕ್ಕೆ ಬಂದಿದ್ದು ಜೆ.ಸಿ.ಬಿ.ಪಕ್ಷಗಳಿಂದ ಈ ರಾಜ್ಯದ ಜನತೆಗೆ ಒಳಿತಾಗಲು ಸಾಧ್ಯವಿಲ್ಲ, ಆದ್ದರಿಂದ ಈ ಬಾರಿ ಕರ್ನಾಟಕ ಹಾಗೂ ಶಿವಮೊಗ್ಗದ ಜನರು ಬದಲಾವಣೆ ಬಯಸಿದ್ದಾರೆಂದು ತಿಳಿಸಿದರು.
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು. ಅಧಿಕಾರದ ವಿರೋಧಿ ಅಲೆ ಎದ್ದಿದೆ, ಮುಂದಿನ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ, ಉತ್ತಮ ಭ್ರಷ್ಟಾಚಾರ ಮುಕ್ತ ಕನಸು ಕಾಣುತ್ತಿದ್ದಾರೆಂದು ಎಂದು ಹೇಳಿದರು.

By admin

ನಿಮ್ಮದೊಂದು ಉತ್ತರ

error: Content is protected !!