:ನಾಡು ಕಂಡ ಶ್ರೇ? ಶಿಲ್ಪಿ, ಕಲೆ ಹಾಗೂ ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ಶಿಲ್ಪ ಕಲೆಯ ಮಹತ್ವವನ್ನು ಸಾರಿ ಅಜರಾಮರಾದ ಅಮರಶಿಲ್ಪಿ ಜಕಣಾಚಾರಿ ಅವರು ಸಮಾಜಕ್ಕೆ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ ತಿಳಿಸಿದರು.


ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ವಿಶ್ವ ಕರ್ಮ ಮಹಾಸಭಾ ವತಿಯಿಂದ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಭಾನುವಾರ ಮಾತನಾಡಿದರು.


ಬೇಲೂರು ಹಳೆಬೀಡು ದೇವಾಲಯಗಳನ್ನು ಜಗತ್ತಿನ ಮೂಲೆ ಮೂಲೆಯಿಂದ ಜನರು ಆಗಮಿಸಿ ಕಣ್ತುಂಬಿಕೊಳ್ಳುತ್ತಾರೆ.
ಶಿಲ್ಪ ಕಲೆಯ ಬಗ್ಗೆ ಕುತೂಹಲ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.

ಇದೇ ರೀತಿ ಅನೇಕ ದೇವಾಲಯಗಳು ಇವರ ಹೆಸರನ್ನು ಹೇಳುತ್ತವೆ. ಈ ರೀತಿಯ ಕುತೂಹಲ ಕೆರಳಿಸಲು ಕಾರಣಿ ಕರ್ತರು ಜಕಣಾಚಾರಿ ಅವರು ಎಂದರು.


ಅವರಲ್ಲಿಯ ಪ್ರಾಮಾಣಿಕತೆ ಎಷ್ಟಿತ್ತೆಂದರೆ, ಅವರ ಶಿಲ್ಪಕಲೆಯಲ್ಲಿ ನ್ಯೂನತೆ ಕಂಡು ಹಿಡಿದರೆ ತಮ್ಮ ಬೆರಳನ್ನು ಕತ್ತರಿಸಿಕೊಳ್ಳುವುದಾಗಿ ಪ್ರಮಾಣ ಮಾಡುತ್ತಾರೆ. ಅದೇ ರೀತಿ ಅವರ ಮಗ ಶಿಲ್ಪಕಲೆಯಲ್ಲಿ ನ್ಯೂನತೆಯನ್ನು ಕಂಡು ಹಿಡಿದು ತೋರಿಸುತ್ತಾರೆ. ತಪ್ಪನ್ನು ಒಪ್ಪಿಕೊಂಡು ಮಾತಿಗೆ ಬದ್ಧರಾಗಿ ತಮ್ಮ ಬೆರಳನ್ನು ತುಂಡರಿಸಿಕೊಳ್ಳುತ್ತಾರೆ.


ಅಂದರೆ ಅರ್ಥ, ಪ್ರಾಮಾಣಿಕ ಮನೋಭಾವ ಅವರಲ್ಲಿತ್ತು. ಆದ್ದರಿಂದ ಸಾಮಜ ಹಾಗೂ ಪ್ರತಿಯೊಬ್ಬ ಯುವಕ- ಯುವತಿಯರು, ಈ ರೀತಿಯ ಪ್ರ್ರಾಮಾಣಿಕ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.


ಕನ್ನಡ ಮತ್ತು ಸಂಸ್ಕ್ರತ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಉಮೇಶ್, ಉಪನ್ಯಾಸಕ ಜಿ.ಡಿ ಇಳಿಯರಾಜ್ ಇಟ್ಟಗಿ, ಕಲ್ಪನಾ ರಮೇಶ್, ನಿರಂಜನ್ ಮೂರ್ತಿ, ಸೋಮಚಾರ್, ಶ್ರೀನಿವಾಸ ಮೂರ್ತಿ, ರಮೇಶ್ ಹಾಗೂ ವಿಶ್ವಕರ್ಮ ಮಹಾಸಭಾದ ಸದಸ್ಯ ಮತ್ತು ಪದಾಧಿಕಾರಿಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!