ಶಿವಮೊಗ್ಗ,
ಶಿವಮೊಗ್ಗದ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲದಲ್ಲಿ ಹೊಸ ವರ್ಷದ ಕಲ್ಪತರು ದಿನದಂದು ಎಂದಿನಂತೆ ಪ್ರತಿ ವರ್ಷ ನಡೆಯುವ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಬಾಂಧವ್ಯವನ್ನು ಬೆಸೆಯುವ ಜನ್ಮದಾ ತರ ಪಾದಪೂಜೆ ಸಮಾರಂಭವನ್ನು ಬರುವ ೨೦೨೩ರ ಜನವರಿ ೧ ರಂದು ಆಯೋಜಿ ಸಲಾಗಿದೆ.
ಶಿವಮೊಗ್ಗ ಅನುಪಿನ ಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲದಲ್ಲಿ ಜನ್ಮದಾತರ ಪಾದಪೂಜೆ ಕಾರ್ಯಕ್ರಮ ಕಳೆದ ೨೦೦೫ ರಿಂದ ಆರಂಭಗೊಂಡಿದ್ದು, ಪ್ರಸಕ್ತ ವರು ಷದ ಈ ವಿಶೇಷ ಕಾರ್ಯಕ್ರಮವನ್ನು ನಡೆಸಲು ಈಗಾಗಲೇ ಸಕಲ ಸಿದ್ಧತೆಗಳು ನಡೆದಿದೆ.
ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ನ ಸಂಸ್ಥಾಪಕರಾದ ಡಿ ಎಂ ವೆಂಕಟರಮಣ ದಾವಣಿಬೈಲು, ಅವರ ಆಧ್ಯಾತ್ಮದ ಜೊತೆ ವೈಜ್ಞಾನಿಕ ಶಿಕ್ಷಣವನ್ನು ನೀಡುವ ಪರಿಪಾಠದಡಿ ಈ ಜನ್ಮದಾತರ ಪಾದಪೂಜೆ ಸಮಾರಂಭ ಇಡೀ ರಾಜ್ಯದಲ್ಲಿ ಮಾದರಿಯಾದ ಕಾರ್ಯಕ್ರಮ ವಾಗಿದೆ.
ಪಾದಪೂಜೆ ಸಮಾರಂಭದ ವಿವರ: ಜನವರಿ ಒಂದರ ಭಾನುವಾರ ಬೆಳಿಗ್ಗೆ ೮ ಗಂಟೆಗೆ ಸತ್ಯನಾರಾಯಣ ಸ್ವಾಮಿ ಪೂಜೆ, ೧೦ ಗಂಟೆಗೆ ಮೂಲೆಗದ್ದೆ ಮಠ ಶ್ರೀ ಸದಾನಂದ ಶಿವಯೋಗ ಆಶ್ರಮದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸರ್ಜಿ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ಧನಂಜಯ ಸರ್ಜಿ, ಹಾಗೂ ಶಾಲೆಯ ಹಿಂದಿನ ವಿದ್ಯಾರ್ಥಿ ಡಾ||. ಅಭಿನಂ ದನ್ ಎಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಡಾ. ಡಿ ಆರ್ ನಾಗೇಶ್ ಅಧ್ಯಕ್ಷತೆ ವಹಿಸಿರುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು ಶ್ರೀ ಡಿ ಎಂ ದೇವರಾಜ್ ಹಾಗೂ ಸಂಸ್ಥೆಯ ಪದಾಧಿ ಕಾರಿಗಳು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಅಡಿಯಲ್ಲಿ ಇರುವ ಶಾಲೆಯಲ್ಲಿ ಈಗಾಗಲೇ ಮೂರು ಬಾರಿ ನಾಲ್ಕು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ೬೨೫ ಅಂಕ ಗಳಿಸಿರುವ ಈ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ರಾಜ್ಯಮಟ್ಟದ ಕೀರ್ತಿ ತಂದಿದ್ದಾರೆ. ವಾಲಿಬಾಲ್, ಯೋಗ, ಕಬಡ್ಡಿ, ಚೆಸ್, ಕರಾಟೆ, ಸ್ವಿಮಿಂಗ್ ಸೇರಿದಂತೆ ವಿವಿಧ ಪಂದ್ಯಾವಳಿಗಳಲ್ಲಿ ರಾಜ್ಯಮ ಟ್ಟಕ್ಕೆ ನೂರಾರು ವಿದ್ಯಾರ್ಥಿಗಳು ಆಯ್ಕೆಯಾಗಿ ದ್ದಾರೆ.
ಇಂದಿನ ದಿನಮಾನಗಳಲ್ಲಿ ಮನುಜ ಸಂಬಂಧ ಹಾಗೂ ಬಾಂಧವ್ಯಗಳು ದೂರವಾಗು ತ್ತಿರುವ ಹಾಗೂ ಹೊಸ ತಿರುವು ಪಡೆಯುತ್ತಿರುವ ದಿನಗಳಲ್ಲಿ ಬಾಂಧವ್ಯಗಳನ್ನು ಹತ್ತಿರ ಮಾಡುವ, ಸಂಬಂಧಗಳನ್ನು ಆತ್ಮೀಯಗೊಳಿಸುವ ನಿಟ್ಟಿನಲ್ಲಿ ಡಿಎಂ ವೆಂಕಟರಮಣ ಅವರು ಪೂಜ್ಯ ಮಾತಾಪಿತೃಗಳನ್ನು ಗೌರವಿಸುವ ಮಕ್ಕಳಿಂದ ಅವರ ಪಾದ ಪೂಜಿಸುವ ಜೊತೆಗೆ ಸಂಬಂಧ ಗಳನ್ನು ಒಂದೆಡೆ ಕಟ್ಟಿಕೊಡುವ ಪ್ರಯತ್ನ ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರ ಮವನ್ನು ಆಯೋಜಿಸಿದ್ದರು. ಹೊಸ ವರ್ಷ ಎಂದರೆ ಅನ್ಯ ಚಟುವಟಿಕೆಗಳ ಮೂಲಕ ಸಂಭ್ರಮದ ಆಚರಣೆ ಮುಖ್ಯವಾಗುವುದಿಲ್ಲ. ಅಂದು ತಮ್ಮ ಜನ್ಮದಾತರಿಗೆ ಗೌರವ ಸಲ್ಲಿಸು ವುದು ಮುಖ್ಯವಾಗುತ್ತದೆ ಎಂಬ ದ್ಯೆಯೋದ್ದೇಶ ದಿಂದ ನಮ್ಮ ರಾಮಕೃಷ್ಣ ಸಂಸ್ಥೆ ಈ ಕಾರ್ಯ ಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಪ್ರಸಕ್ತ ಗುರುಕುಲದಲ್ಲಿರುವ ವಿದ್ಯಾರ್ಥಿಗಳು ತಮ್ಮ ಜನ್ಮದಾತರ ಪಾದಪೂಜಿಸುವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸುವಂತೆ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಪರವಾಗಿ ಆತ್ಮೀಯ ವಿನಂತಿ.