ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.


ಆರ್‌ಸಿಹೆಚ್ ಪೋರ್ಟಲ್ ಮೂಲಕ ಪ್ರೋತ್ಸಾಹ ಧನ ನೀಡುವುದನ್ನು ರದ್ದುಪಡಿಸಿ ನಿಗದಿತ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹಣವನ್ನು ಒಟ್ಟುಗೂಡಿಸಿ ಮಾಸಿಕ ಗೌರವಧನ ನಿಗದಿಪಡಿಸಬೇಕು ಎಂದು ಪ್ರತಿಭಟನಕಾರರು ತಿಳಿಸಿದರು.


ರಾಜ್ಯ ಸರ್ಕಾರದ ನಿಶ್ಚಿತ ಗೌರವ ಧನ ೫೦೦೦, ರೊಟೀನ್ ಚಟುವಟಿಕೆಗಳ ೨೦೦೦ ಪ್ರೋತ್ಸಾಹ ಧನ ೫೦೦೦ ಹೀಗೆ ಎಲ್ಲವನ್ನೂ ಒಟ್ಟುಗೂಡಿಸಿ ಮಾಸಿಕ ೧೨ಸಾವಿರ ಗೌರವಧನವನ್ನು ಪ್ರತಿ ತಿಂಗಳು ಪಾವತಿಸಬೇಕು. ಬಾಕಿ ಹಣವನ್ನು ಬಿಡುಗಡೆ ಮಾಡಬೇಕು. ಆರ್‌ಸಿಹೆಚ್ ಪೋರ್ಟಲ್‌ನ ವಿವಿಧ ಸಮಸ್ಯೆಯಿಂದ ಆಗಿರುವ ನಷ್ಟವನ್ನು ಹಿಂಬಾಕಿ ರೂಪದಲ್ಲಿ ನೀಡಬೇಕು ಗೌರವಧನ ಹೆಚ್ಚಿಸಬೇಕು.

ನಿವೃತ್ತಿ ಹೊಂದುವವರಿಗೆ ೨೦ಸಾವಿರ ಇಡುಗಂಟನ್ನು ನೀಡಬೇಕು. ಪಶ್ಚಿಮಬಂಗಾಳದಲ್ಲಿರುವಂತೆ ಇದನ್ನು ೩ಲಕ್ಷಕ್ಕೆ ಹೆಚ್ಚಿಸಬೇಕು. ಪ್ರಯಾನ ಭತ್ಯೆ ನೀಡಬೇಕು. ಮರಣ ಹೊಂದಿದ ಕಾರ್ಯಕರ್ತೆಯರ ಕುಟುಂಬಕ್ಕೆ ಕೆಲಸ ನೀಡಬೇಕು. ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಆರೋಗ್ಯ ವಿಮೆ ಮತ್ತು ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಪ್ರಮುಖರಾದ ಚಂದ್ರಕಲಾ, ಆಶಾ.ಕಲ್ಪನಾ, ಪೂರ್ಣಿಮಾ, ಜಯಮ್ಮ, ರತ್ನಮ್ಮ, ಯಾಸ್ಮಿತ್, ಸುಜಾತಾ ಬಾಯಿ, ಸತ್ಯವತಿ, ಅನಿತಾ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!