ಯುವಜನರು ಕೆಟ್ಟ ಹವ್ಯಾಸ ಬಿಟ್ಟು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ ಹೇಳಿದರು.
ಅವರು ಸೋಮವಾರ ಸಹ್ಯಾದ್ರಿ ವಾಣಿಜ್ಯ, ವಿಜ್ಞಾನ, ಕಲಾ ಕಾಲೇಜು ಆಯೋಜಿಸಿದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ೩೫ನೇ ಅಂತರ್ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ದೈಹಿಕ ಪರಿಶ್ರಮಕ್ಕೆ ಹೆಚ್ಚಿನ ಆದ್ಯತೆ ಇದೆ. ಬಹಳ ಹಿಂದಿನಿಂದಲೂ ನಮ್ಮ ಗ್ರಾಮೀಣ ಜನರು ಕ್ರೀಡೆಯನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಹಲವಾರು ಜನಪದ ಕ್ರೀಡೆಗಳಿಗೆ ನಾಟಕ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ವ ನೀಡಿರುವುದನ್ನು ನಾವು ಕಾಣುತ್ತೇವೆ ಹಾಗಾಗಿ ಯುವಜನರು ಯಾವುದೇ ಕಾರಣಕ್ಕೂ ಕ್ರೀಡೆಯನ್ನು ನಿರ್ಲಕ್ಷಿಸಬಾರದು. ಅದು ದೈಹಿಕ ಆರೋಗ್ಯದ ಜೊತೆಗೆ ಮನೋಲ್ಲಾಸವನ್ನು ನೀಡುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಕ್ರೀಡೆಯಲ್ಲಿ ಸಾಕ? ಅವಕಾಶಗಳಿವೆ. ಆದ್ದರಿಂದ ಇಂದಿನ ಯುವಕರು ಕೆಟ್ಟ ಹವ್ಯಾಸಗಳಲ್ಲಿ ತೊಡಗಿಕೊಳ್ಳದೆ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ. ಧನಂಜಯ ಕೆ.ಬಿ., ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಎನ್., ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಎನ್.ಡಿ ವಿರೂಪಾಕ್ಷ, ಪ್ರಾಧ್ಯಾಪಕರಾದ ಡಾ. ಕುಂದನ್ ಬಸವರಾಜ್, ಡಾ.ಮೇಟಿ ಮಲ್ಲಿಕಾರ್ಜುನ, ಡಾ.ಗಿರಿಧರ್ ಕೆ.ವಿ, ಪ್ರೊ. ರಮೇಶ್‌ಬಾಬು, ಶುಭಾ ಮರವಂತೆ, ಡಾ.ಟಿ. ಅವಿನಾಶ್ ಮೊದಲಾದವರು ಉಪಸ್ಥಿತರಿದ್ದರು.
ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ. ಕೆ.ವೀಣಾ ಸ್ವಾಗತಿಸಿ ಪ್ರಾಸ್ತಾವಿಸಿದರು. ಕ್ರೀಡಾಕೂಟದ ನೇತೃತ್ವ ವಹಿಸಿದ್ದ ಡಾ. ಶಿವಮೂರ್ತಿ ಎ. ವಂದಿಸಿದರು