ಹಳ್ಳಿಮನೆ ಹೆಸರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿರುವ ಉದ್ಯಮಿ ಡಿ.೨೮ರಂದು ಗೋಪಾಲಗೌಡ ಬಡಾವಣೆಯ ೧೦೦ ಅಡಿ ರಸ್ತೆಯಲ್ಲಿರುವ ದಾವಣಗೆರೆ ಬೆಣ್ಣೆದೋಸೆ ಕ್ಯಾಂಪ್ ಪಕ್ಕದಲ್ಲಿ ‘ಸ್ವಾದ್ ಭವನ್’ ಎಂಬ ರಾಜಸ್ಥಾನಿ ಥಾಲಿ ಊಟದ ಹೋಟೆಲ್ ಅನ್ನು ಆರಂಭಿಸಲಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಲೀಕ ನವೀನ್ಕುಮಾರ್, ಹೋಟೆಲ್ ಅನುಭವದ ಹಿನ್ನೆಲೆಯಲ್ಲಿ ಜನತೆಗೆ ಹೊಸ ರೀತಿಯ ಹೊಸತರದ ರುಚಿ ನೀಡಬೇಕು ಎಂಬ ಹಿನ್ನೆಲೆಯಲ್ಲಿ ಈ ರಾಜಸ್ಥಾನಿ ಹೋಟೆಲ್ ಅನ್ನು ನಾಳೆಯಿಂದ ಆರಂಭಿಸಲಾಗುವುದು. ಬೆಳಿಗ್ಗೆ ೧೧.೩೦ರಿಂದ ೩.೩೦ ಸಂಜೆ ೭ರಿಂದ ೯.೩೦ರವರೆಗೆ ಹೋಟೆಲ್ ತೆರೆದಿರುತ್ತದೆ.
ರಾಜಸ್ಥಾನಿ ಮಾದರಿಯ ಜೊತೆಗೆ ದಕ್ಷಿಣ ಭಾರತದ ಮಾದರಿಯನ್ನೂ ಬೆರೆಸಿಕೊಂಡ ಒಂದು ಅತ್ಯುತ್ತಮ ಹೋಟೆಲ್ ಇದಾಗಿದೆ ಎಂದರು.
ಡಿ.೨೮ರಂದು ಮಧ್ಯಾಹ್ನ ೧೨ ಗಂಟೆಗೆ ಮೇಯರ್ ಶಿವಕುಮಾರ್ ಹೋಟೆಲ್ ಉದ್ಘಾಟಿಸುವರು.
ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್ ಸುರೇಖಾ ಮುರುಳೀಧರ್, ಮಂಜುನಾಥ್ ಮುಂತಾದವರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಮಾದೇವಿ ಇದ್ದರು.