ಶಿವಮೊಗ್ಗ,
ಶಿವಮೊಗ್ಗ ಆಕ್ಸ್ಫರ್ಡ್ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವೇಶ್ವರನಗರ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆ ೩೫ ವರ್ಷ ಪೂರೈಸಿರುವ ಸಂಭ್ರಮದಲ್ಲಿ ಶಾಲಾ ಆಡಳಿತ ಮಂಡಳಿ ತನ್ನ ಶಾಲಾ ಹಾಗೂ ಜಿಲ್ಲೆಯ ಇತರ ಶಾಲಾ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಗೌರವಿಸುವಂತಹ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಿ. ಆರ್. ಶ್ರೀನಿವಾಸ್ ತಿಳಿಸಿದರು.
ಇಂದು ಬೆಳಿಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬರುವ ಡಿಸೆಂಬರ್ ೧೨ ರಿಂದ ೧೪ರ ವರೆಗೆ ನಾಲೆಡ್ಜ್ ವಿಲೇಜ್ ಎಂಬ ವಿನೂತನ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ. ೧೨ರ ಬೆಳಿಗ್ಗೆ ೯ಕ್ಕೆ ಈ ಕಾರ್ಯಕ್ರಮವನ್ನು ಎನ್ಎಸ್ಸಿ ಟಿಎಸ್ಜಿ ಭಾರತ ಶಿಕ್ಷಣ ಸಚಿವಾಲಯದ ಪ್ರಧಾನ ಸಲಹೆಗಾರರಾದ ಡಾ. ಜಿ ವಿ ಹರಿಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ ಎಂದರು.
ಅಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನಿಧ್ಯ ವಹಿಸಿರುವ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ನಾಲೆಡ್ಜ್ ವಿಲೇಜ್ ದೈನಂದಿನ ಬದುಕಿನಲ್ಲಿ ವಿಜ್ಞಾನದ ಜ್ಞಾನವನ್ನು ಬಿತ್ತರಿಸುವಂತಹ ಕಾರ್ಯಕ್ರಮವಾಗಿದ್ದು, ಇದರಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಅಗಸ್ತ್ಯ ಫೌಂಡೇಶನ್, ಜೆ ಎನ್ ಎನ್ ಸಿ ಕಾಲೇಜ್ ಶಿವಮೊಗ್ಗ, ಕಲಂಬಿ ಅಗ್ರಿ ಟೂಲ್ಸ್, ಸುಪ್ರೀಂ ಬಜಾಜ್, ಎಸ್ಆರ್ಎನ್ಎಂಎನ್ ಕಾಲೇಜು, ಅತಿಯಾಸ್ ಶೂರೊಂ, ದುರ್ಗಾಂಬ ಸರ್ವಿಸ್ ಸೆಂಟರ್, ಶಿವಮೊಗ್ಗದ ಜಗದ್ಗುರು ಪಂಚಾಚಾರ್ಯ ಐಟಿಐ ಕಾಲೇಜ್, ಗೊಡಚಿ ಎಲೆಕ್ಟ್ರಿಕಲ್ಸ್, ನ್ಯೂ ಟೆಕ್ ಸೊಲಾರ್ ಸಿಸ್ಟಮ್ ಹಾಗೂ ಮೂಕಾಂಬಿಕಾ ಎಂಟರ್ಪ್ರೈಸಸ್ ಸಹಯೋಗವನ್ನು ಹೊಂದಿದೆ ಎಂದು ಹೇಳಿದರು.
ಆಕ್ಸ್ಫರ್ಡ್ ವಿದ್ಯಾ ಸಂಸ್ಥೆ ತನ್ನ ವಿಶೇಷ ನೆನಪಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಜಿಲ್ಲೆಯ ಎಲ್ಲಾ ಶಾಲೆಯ ಮಕ್ಕಳಿಗೆ ಅವಕಾಶ ನೀಡುವಂತಹ ನಾಲೆಡ್ಜ್ ಕ್ವೆಸ್ಟ್ ರಸಪ್ರಶ್ನೆ ಕಾರ್ಯಕ್ರಮವನ್ನು ಇದೇ ಡಿಸೆಂಬರ್ ೨೭ರ ಬೆಳಿಗ್ಗೆ ೯:೩೦ಕ್ಕೆ ಶಾಲಾ ಆವರಣದಲ್ಲಿ ಆಯೋಜಿಸಿz. ಸಂಸ್ಥೆಯ ಸಂಸ್ಥಾಪಕ ಡಿ ಆರ್. ರಾಜಶೇಖರ್ ಅವರ ಸ್ಮರಣಾರ್ಥ ಅಂತರ್ ಶಾಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ೧,೮೦೦ರೂ ಮೊದಲ ಬಹುಮಾನ, ೨೫೦೦ ರೂ. ಎರಡನೆ ಬಹುಮಾನ ಹಾಗೂ ೧,೨೦೦ರೂ. ಮೂರನೇ ಬಹುಮಾನವನ್ನು ನೀಡಲಾಗುತ್ತಿದ್ದು ಈಗಾಗಲೇ ಎಲ್ಲ ಶಾಲೆಗಳಿಗೆ ಮಾಹಿತಿಯನ್ನು ರವಾನಿಸಲಾಗಿದೆ. ಈಗಲೂ ಈ ಸ್ಪರ್ಧೆಗೆ ಭಾಗವಹಿಸಲು ಅವಕಾಶವಿದೆ ಎಂದು ಹೇಳಿದರು.
ಅಂತೆಯೇ ಸಂಸ್ಥೆಯು ಶಿವಮೊಗ್ಗ ಜಿಲ್ಲಾ ಕನ್ನಡ ಜಾನಪದ ಪರಿಷತ್ ಸಹಯೋಗದಲ್ಲಿ ಶಾಲಾ ಮಕ್ಕಳ ನೃತ್ಯ ಸ್ಪರ್ಧೆಯನ್ನು ವಿಶೇಷವಾಗಿ ಆಯೋಜಿಸಿದೆ ಜನವರಿ ೫ರಂದು ಬೆಳಿಗ್ಗೆ ೯:೦೦ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಎರಡು ಹಂತಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಮೊದಲು ನೋಂದಾಯಿಸಿದ ೧೨ ತಂಡಗಳಿಗೆ ಅವಕಾಶ ನೀಡಲಾಗುತ್ತದೆ. ಇಲ್ಲಿ ಯಾವುದೇ ಆರ್ಟಿಫಿಷಿಯಲ್ ಬಳಸಿಕೊಳ್ಳುವಂತಿಲ್ಲ. ಒಂದು ತಂಡದಿಂದ ೧೬ ಮಕ್ಕಳಿಗೆ ಅವಕಾಶವಿದೆ. ನಮ್ಮ ಶಾಲೆಯನ್ನು ಹೊರತುಪಡಿಸಿ ಇತರ ಶಾಲಾ ಮಕ್ಕಳು ಇಲ್ಲಿ ಭಾಗವಹಿಸಬಹುದಾಗಿದೆ ಇದರಲ್ಲಿ ವಿಜೇತರಾದವರಿಗೆ ೧೦,೦೦೦ ಪ್ರಥಮ, ೮೦೦೦ ದ್ವಿತೀಯ, ೬,೦೦೦ ತೃತೀಯ ಹಾಗೂ ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ ೩೦೦೦ ನೀಡಲಾಗುತ್ತದೆ. ಮೇಲಿನ ಎರಡೂ
ಪಂದ್ಯಗಳಲ್ಲಿ ಭಾಗವಹಿಸುವ ಶಾಲಾ ಮಕ್ಕಳು ೯೮೪೫೫೭೧೧೧೦ ಹಾಗೂ ೯೪೪೯೧೧೧೦೮೬ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ ಎಂದರು.
ಎಂದಿನಂತೆ ಶಾಲೆ ಪೋಷಕರ ಕ್ರಿಡಾಕೂಟವನ್ನು ಡಿಸೆಂಬರ್ ೧೮ರಂದು ಆಯೋಜಿಸಿದೆ. ಡಿಸೆಂಬರ್ ೨೩ ರಂದು ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಹೊಳಲೂರಿನ ಆಕ್ಸ್ಫರ್ಡ್ ಸರಸ್ವತಿ ಮಂದಿರದ ಮಕ್ಕಳು ಇದರಲ್ಲಿ ಭಾಗವಹಿಸಲಿದ್ದಾರೆ ಅಂತೆಯೇ ವಿಶೇಷವಾಗಿ ಜನವರಿ ೫ರಂದು ಆಕ್ಸ್ಫರ್ಡ್ ಕೋರಲ್ ೩೫ನೇ ವರ್ಷದ ವಾರ್ಷಿಕೋತ್ಸವವನ್ನು
ಕುವೆಂಪುರಂಗ ಮಂದಿರದಲ್ಲಿ ಸಂಜೆ ೪ಕ್ಕೆ ಆಯೋಜಿಸಿದೆ, ಇಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್ ಎಲ್ ಸಿ ಮಕ್ಕಳಿಗೆ ಆಕ್ಸ್ಫರ್ಡ್ ವಿಧ್ಯಾರತ್ನ ಹಾಗೂ ಕ್ರೀಡೆಯಲ್ಲಿ ರಾಷ್ಟ್ರ ಹಾಗು ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಮಕ್ಕಳಿಗೆ ಖೇಲ್ ರತ್ನ ಪ್ರಶಸ್ತಿಯನ್ನು ರಾಜಶೇಖರ್ ಅವರ ಹೆಸರಿನಲ್ಲಿ ಪ್ರೋತ್ಸಾಹ ಧನ ನೀಡುವ ಮೂಲಕ ಗೌರವಿಸಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಡಿ ಆರ್ ಶ್ರೀನಿವಾಸ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಿ.ಆರ್. ಲೋಕೇಶ್, ಮ್ಯಾನೇಜರ್ ಜಗದೀಶ್ ಉಪಸ್ಥಿತರಿದ್ದರು.