ಬಿಜೆಪಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳಿಸಿದ್ದರಿಂದ ಈಡೀ ದೇಶದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಗರಿಗೆದರಿದೆ ಎಂದು ಬಿಜೆಪಿ ಮುಖಂಡ ದತ್ತಾತ್ರಿ ಹೇಳಿದ್ದಾರೆ.
ಅವರು ಇಂದು ಪಕ್ಷದ ಕಚೇರಿಯ ಮುಂಭಾಗ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ೮ನೇ ಬಾರಿಗೆ ಅಧಿಕಾರ ಹಿಡಿದ ಪ್ರಯುಕ್ತ ವಿಜಯೋತ್ಸವವನ್ನು ಆಚರಿಸಿ ಮಾತನಾಡಿದರು.
ಪ್ರಧಾನಿ ಮೋದಿಯವರು ಕೇವಲ ಒಂದು ವರ್ಗಕ್ಕೆ ಯೋಚಿಸದೆ ಇಡೀ ದೇಶದ ಎಲ್ಲಾ ವರ್ಗಕ್ಕೂ ಸೌಲಭ್ಯ ಕಲ್ಪಿಸಿದ್ದಾರೆ. ಬಿಜೆಪಿ ಗೆಲುವು ದೇಶದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ನೈತಿಕ ಬಲ ಬಂದಿದೆ. ಕರ್ನಾಟಕದಲ್ಲಿ ಕೂಡ ಇದೇ ರೀತಿ ಜಯಭೇರಿ ಭಾರಿಸಲಿದ್ದೇವೆ ಎಂದರು.
ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ರದ್ದು ಮಾಡಿರುವುದು ಇದೀಗ ಏಕರೂಪ ನಾಗರೀಕ ಸಂಹಿತೆ ತರಲು ಹೊರಟಿರುವುದು ಬಿಜೆಪಿಯ ಸಾಧನೆ. ೨೦೨೪ರಲ್ಲಿ ಮೋದಿ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದ್ದು, ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಗೊಳ್ಳುವುದು ಖಂಡಿತ ಎಂದರು.
ಈ ಸಂದರ್ಭದಲ್ಲಿ ಸಿಹಿಹಂಚಿ ಸಂಭ್ರಮಿಸಲಾಯಿತು. ಪ್ರಮುಖರಾದ ಚನ್ನಬಸಪ್ಪ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಸುನಿತಾ ಅಣ್ಣಪ್ಪ, ಸುರೇಖಾ ಮುರುಳೀಧರ್, ಜ್ಞಾನೇಶ್ವರ್, ಈ.ವಿಶ್ವಾಸ್, ಪ್ರಭು, ಅಣ್ಣಪ್ಪ, ಅಲ್ಲಾಭಕ್ಷ್, ವಿನ್‌ಸೆಂಟ್ ಡಿಸೋಜಾ, ರತ್ನಾಕರ್‌ಶೆಣೈ, ಜಿಲ್ಲಾ ಯುವಮೋರ್ಛಾ ಅಧ್ಯಕ್ಷ ಹರಿಕೃಷ್ಣ ಮತ್ತಿತರರಿದ್ದರು.