ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ್ ಆಗ್ರಹಿಸಿದ್ದಾರೆ.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಅಡಿಕೆಗೆ ಎಲೆಚುಕ್ಕಿ ರೋಗ ಕಾಣಿಸಿ ಕೊಂಡು ಹಲವ ತಿಂಗಳಗಳೇ ಕಳೆದಿವೆ. ಸಂಕಷ್ಟಕ್ಕೆ ಬೆಳೆಗಾರರು ಸಿಲುಕಿದ್ದಾರೆ. ಈಗಾಗಲೇ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಡಿಕೆ ಮರಗಳು ಜೀವ ಬಿಡತೊಡಗಿವೆ. ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಏಳು ಜನರ ಸಮಿತಿ ರಚಿಸಿದ್ದು, ಸಮಿತಿ ಪ್ರವಾಸ ಕೂಡ ಮಾಡಿತ್ತು. ಆದರೆ ಪರಿಹಾರದ ಮಾರ್ಗವನ್ನು ತಿಳಿಸಲೇ ಇಲ್ಲ. ಸಮಿತಿಯ ವರದಿಯೂ ಹೊರ ಬರಲಿಲ್ಲ. ಮುಖ್ಯಮಂತ್ರಿಗಳು ನೆಪಮಾತ್ರಕ್ಕೆ ಬಂದು ಹೋದರು. ಸಮಗ್ರವಾದ ಅಭಿಪ್ರಾಯ ಸರ್ಕಾರದಿಂದ ಮೂಡಲೇ ಇಲ್ಲ. ಈ ಎಲ್ಲಾ ಕಾರಣಗಳಿಂದ ಅಡಿಕೆ ಬೆಳೆಗಾರರ ಆತಂಕ ಹೆಚ್ಚಾಗಿದೆ ಎಂದರು.


ಅಡಿಕೆ ಬೆಳೆಗಾರರ ಹಿತಕ್ಕಾಗಿ ಅವರ ಸಹಕಾರ ಸಂಘದ ಸಾಲವಾಗಿರಲಿ, ವಾಣಿಜ್ಯ ಬ್ಯಾಂಕುಗ ಳಿಂದ ಪಡೆದಿರುವ ಸಾಲವಾಗಲಿ ಎಲ್ಲಾ ರೀತಿಯ ಸಾಲಗಳನ್ನು ರಾಜ್ಯಸರ್ಕಾರ ಮನ್ನಾ ಮಾಡಬೇಕು. ಇದಕ್ಕಾಗಿ ಅಡಿಕೆ ಮಂಡಳಿ ರಚನೆಯಾಗಬೇಕು. ಕೇಂದ್ರಸರ್ಕಾರ ಕೂಡ ರೈತರ ನೆರವಿಗೆ ಬರಬೇಕು. ಅಡಿಕೆ ಬೆಳೆ ಆಮದು ಮಾಡಿಕೊಳ್ಳುವುದನ್ನು ಕೇಂದ್ರ ಸರ್ಕಾರ ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.


ರಾಜ್ಯಸರ್ಕಾರದ ಎಪಿಎಂಸಿ ಕಾಯಿದೆ ಯಿಂದ ಭತ್ತದೆ ಬೆಲೆ ಕುಂಠಿತವಾಗಿದೆ ಕ್ವಿಂಟಾಲಿಗೆ ೩೧೦೦ರೂ. ಇದ್ದ ಬೆಲೆ ಈಗ ೨೧೦೦ಕ್ಕೆ ತಲುಪಿದೆ ೧ಸಾವಿರ ರೂ,ನಷ್ಟವಾಗಿದೆ ಇದು ಮಾರುಕಟ್ಟೆಯ ಸಂಚಾಗಿದ್ದು, ರಾಜ್ಯಸರ್ಕಾರ ಕೂಡಲೇ ಎಪಿಎಂಸಿ ಕಾಯಿದೆಯನ್ನು ವಜಾ ಮಾಡಬೇಕು. ಭತ್ತದ ಖರೀದಿ ಕೇಂದ್ರಗಳನ್ನು ತಕ್ಷಣವೇ ತೆರೆಯಬೇಕು ಎಂದರು.


ಡಿ.೨೩ರಂದು ರೈತರ ಕಣ್ಮಣಿ ಎನ್.ಡಿ. ಸುಂದರೇಶ್ ಅವರ ೩೦ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅವರ ಫಾರ್ಮ್‌ನಲ್ಲಿ (ಹೊಳೆಹೊನ್ನೂರು ಕೈಮರದ ಅಶೋಕನಗರ) ಬೆಳಿಗ್ಗೆ ೧೧ ಗಂಟೆಗೆ ಏರ್ಪಡಿ ಸಲಾಗಿದೆ. ಈ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ರೈತ ನಾಯಕ್ ಯದುವೀರಸಿಂಗ್, ನಿವೃತ್ತ ನ್ಯಾಯಮೂರ್ತಿ ರವಿವರ್ಮಕುಮಾರ್, ಸಾಹಿತಿ. ಶಿ,ಸಿ, ರಾಮಚಂದ್ರಗೌಡರು, ಚುಕ್ಕಿ ನಂಜುಂಡಸ್ವಾಮಿ, ಅನಸೂಯಮ್ಮ ಮುಂತಾದ ನಾಯಕರು ಭಾಗವಹಿಸುತ್ತಾರೆ . ಆದಿನ ಕೃಷಿ ಕಾಯಿದೆಯನ್ನು ವಾಪಾಸು ತೆಗೆದುಕೊಳ್ಳುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಲು ರೂಪುರೇಷೆಗೆ ಚರ್ಚೆ ಮಾಡಲಾಗುವುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಕೆ.ಸಿ. ಗಂಗಾಧರ, ಹಿರಣ್ಣಯ್ಯ, ಕೆ.ಆರ್. ಮಂಜುನಾಥ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!