ಎಸ್‌ಬಿಐ ಬ್ಯಾಂಕಿನ ಎಸ್‌ಎಂಎಸ್ ಎಂದು ನಂಬಿದ ಮಹಿಳಾ ಗ್ರಾಹಕರೋರ್ವರು ತಮ್ಮ ಪಾನ್ ನಂಬರ್, ಆಧಾರ್, ಒಟಿಪಿಗಳನ್ನು ಕೊಟ್ಟಿದ್ದರ ಹಿನ್ನೆಲೆಯಲ್ಲಿ ೧.೫೬ ಲಕ್ಷ ರೂ. ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ. ವಂಚನೆಗೊಳಗಾದವರು ಬುಧವಾರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಇಲ್ಲಿನ ಸುಭಾಷ್ ನಗರದ ಪೂಜಾ ಆರ್. ಎಂಬುವವರಿಗೆ ನ. ೨೭ರಂದು ಎಸ್‌ಬಿಐನಿಂದ ಬಂದಿದೆ ಎಂಬ ಮಾದರಿಯಲ್ಲಿ ನಕಲಿ ಎಸ್‌ಎಂಎಸ್ ಬಂದಿದ್ದು, ಪಾನ್ ನಂಬರ್ ಕಳುಹಿಸಲು ತಿಳಿಸಲಾ ಗಿದೆ. ಪೂಜಾ ಅವರು ಪಾನ್ ನಂಬರ್ ಕಳುಹಿಸಿದಾಗ ಬಂದಂತಹ ಒಟಿಪಿಯನ್ನು ಕಳುಹಿಸಲು ಮತ್ತೊಂದು ಮೆಸೇಜ್ ಬಂದಿದೆ. ಈ ರೀತಿ ಬ್ಯಾಂಕಿನಿಂದ ಎಸ್‌ಎಂಎಸ್ ಬಂದಿದೆ ಎಂದು ಮಹಿಳೆ ಆಧಾರ್ ಕಾರ್ಡ್ ವಿವರ, ಮತ್ತೆ ಬಂದ ಒಟಿಪಿಗಳನ್ನೆಲ್ಲ ಎಸ್‌ಎಂಎಸ್ ಮೂಲಕ ಆರೋಪಿಗಳ ನಂಬರ್‌ಗೆ ರವಾನಿಸಿದ್ದಾರೆ.


ಇದನ್ನು ಬಳಸಿಕೊಂಡ ಆರೋಪಿಗಳು ಮೊದಲು ೯,೩೦೦ ರೂ. ಹಾಗೂ ಎಂಟು ನಿಮಿಷಗಳ ನಂತರ ೧,೪೭,೬೦೦ ರೂ.ಗಳನ್ನು ವಿತ್‌ಡ್ರಾ ಮಾಡಿದ್ದಾರೆ.


ಬ್ಯಾಂಕಿನಲ್ಲಿ ತಂದೆಯ ನಿವೃತ್ತಿ ಹಣವಾದ ೧೦ ಲಕ್ಷ ರೂ.ಗಳನ್ನು ಕಳೆದ ಜೂನ್‌ನಲ್ಲಿ ಠೇವಣಿ ಇರಿಸಲಾಗಿತ್ತು. ಖದೀಮರು ಈ ಠೇವಣಿಯ ಮೇಲೆ ಸಾಲದ ಬೇಡಿಕೆಯನ್ನು ಸೃಷ್ಟಿಸಿ ಒಟ್ಟು ೧,೫೬,೯೦೦ ರೂ. ಲಪಟಾಯಿಸಿದ್ದಾರೆ. ಮೋಸ ಹೋದುದರ ಅರಿವು ಬಂದ ನಂತರ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!