ಕಲೆ, ಸಾಹಿತ್ಯ, ಕ್ರೀಡೆಯಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸುವ ಜೊತೆಗೆ ಮಾನಸಿಕ ದೈಹಿಕ ದೃಡತೆಯನ್ನು ತಂದು ಕೊಡುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.


ಇಲ್ಲಿನ ಜ್ಞಾನಸಾಗರ ಪಬ್ಲಿಕ್ ಶಾಲೆಯ ಸಂಭ್ರಮ-೨೦೨೨ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿ ಮತ್ತು ವಿಜ್ಞಾನ ವಸ್ತು ಪ್ರದರ್ಶನ, ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಕೆಲಸವನ್ನು ಶಾಲಾಹಂತದಲ್ಲಿ ನಡೆಯಬೇಕು. ಜ್ಞಾನಸಾಗರ ಶಾಲೆ ಅಂತಹ ಪ್ರತಿಭಾ ಪ್ರಕಾಶನಕ್ಕೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಮಕ್ಕಳು ಈ ಹಂತದಲ್ಲಿ ಕಲಿತಿದ್ದನ್ನು ಮುಂದಿನ ಜೀವನದುದ್ದಕ್ಕೂ ಅನುಸರಿಸಿಕೊಂಡು ಹೋಗಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಲ್ಲೂ ಯಶಸ್ಸು ಸಾಧಿಸಲು ಸಲಹೆ ನೀಡಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್. ರೋಟರಿ ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು, ಸಂಜಯ ವಿದ್ಯಾಕೇಂದ್ರದ ಅನುರಾಧ ಕಾಗೋಡು, ದೈಹಿಕ ಶಿಕ್ಷಣ ಪರಿವೀಕ್ಷಕ ಗುರುರಾಜ್, ಪ್ರಮುಖರಾದ ವಿ. ವೆಂಕಟೇಶ್, ಡಾ. ಜೀವನ್ ಇನ್ನಿತರರು ಹಾಜರಿದ್ದರು. ಸ್ಪರ್ಧೆಯಲ್ಲಿ ತಾಲ್ಲೂಕಿನ ವಿವಿಧ ಶಾಲೆಯ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!