ಶಿವಮೊಗ್ಗ: ತಾಲೂಕಿನ ಕೊಮ್ಮನಾಳು ಕ್ಯಾತಿನಕೊಪ್ಪ ರಸ್ತೆಯ ಸುತ್ತಮುತ್ತಲಿನ ಜಮೀನುಗಳಲ್ಲಿ ಕಳೆದೊಂದು ತಿಂಗಳಿನಿಂದ ಓಡಾಡುತ್ತಿದ್ದ ಚಿರತೆಯೊಂದು, ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಕೊನೆಗೂ ಬಿದ್ದಿದೆ.
ಕೊಮ್ಮನಾಳ್ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದು ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.
ಇತ್ತೀಚೆಗೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮಕೈಗೊಂಡಿತ್ತು. ಸೋಮವಾರ ಮುಂಜಾನೆ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ರೇಂಜ್ ಆಫೀಸರ್ ಸುಧಾಕರ್ ಬಿ., ಡಿ.ಆರ್.ಎಫ್.ಓ. ಇನಾಯತ್, ಶರತ್, ಸಿಬ್ಬಂದಿಗಳಾದ ಮಂಜುನಾಥ್, ಹನುಮಂತಪ್ಪ, ಮಲ್ಲಪ್ಪ, ಇಫ್ತೀಕರ್ ಅವರು ಭೇಟಿ ನೀಡಿದ್ದರು.