ಮಕ್ಕಳು ಓದಿನ ಜೊತೆಗೆ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಅವರು ಇಂದು ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ಶಿವಮೊಗ್ಗ. ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿವಮೊಗ್ಗ. ಹಾಗೂ ಬ್ರಿಲಿಯಂಟ್ ಎಜುಕೇಶನ್ ಸೊಸೈಟಿ (ರಿ )ಶಿವಮೊಗ್ಗ.

ಕಿದ್ವಾಯಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಆರ್. ಎಂ. ಎಲ್. ನಗರ ಶಿವಮೊಗ್ಗ, ಇವರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ೧೭ ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಬಾಲಕ-ಬಾಲಕಿಯರ

ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.


ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಬೇಕು. ಮನುಷ್ಯ ಆರೋಗ್ಯವಾಗಿರಲು ಕ್ರೀಡೆ ಸಹಕಾರಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಕ್ಕಳು ಬರೀ ಮೊಬೈಲ್‌ಗಳ ದಾಸರಾಗುತ್ತಿರುವುದು ವಿಷಾಧನೀಯ ಸಂಗತಿ ಎಂದರು.


ವಾಲಿಬಾಲ್ ಅಸೋಸಿಯೇಷನ್‌ನ ಕಾರ್ಯ ದರ್ಶಿ ಕೆ.ಎಸ್.ಶಶಿ ಅವರು ಮಾತನಾಡುತ್ತಾ, ಜಾತಿ-ಬೇಧವಿಲ್ಲದ ವ್ಯವಸ್ಥೆ ಎಂದರೆ ಅದು ಕ್ರೀಡೆಯಿಂದ ಮಾತ್ರ ಸಾಧ್ಯ. ಇಂದಿನ ಆರೋಗ್ಯಕರ ದೃಷ್ಠಿಯಿಂದ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಿದ್ವಾಯಿ ಸಂಸ್ಥೆಯ ಅಧ್ಯಕ್ಷ ಮೌಲನಾ ಮುಫ್ತಿ ಸಫೀವುಲ್ಲಾ ಖಾಸ್ಮಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಬಾಸ್ಕರ್ ಜಿ.ಕಾಮತ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಬ್ಯಾಂಕ್ ಆಫ್ ಬರೋಡದ ಶಾಖಾ ಮುಖ್ಯಸ್ಥರಾದ ಯತೀಶ್ ಹೆಚ್.ಎಸ್., ಕಿದ್ವಾಯಿ ಸಂಸ್ಥೆಯ ಆಡಳಿತ ಮಂಡ ಳಿಯ ಸದಸ್ಯರು, ರಾ.ಹ.ತಿಮ್ಮೇನಹಳ್ಳಿ, ಕೆ.ಜಿ.ಮ ಠಪತಿ ಮತ್ತಿತರರಿದ್ದರು. ಸೋಮಶೇಖರ್ ನಿರೂಪಿಸಿದರು. ರಘು ಎಲ್.ಎಸ್.ಸ್ವಾಗತಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!