: ತಾಲ್ಲೂಕಿನ ಸಂಕಣ್ಣ ಶಾನಭಾಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಳ್ಳಳ್ಳಿಯ ಸತೀಶ್ ಮತ್ತು ರಂಜಿತಾ ಅವರ ಮನೆಯ ಮುಂಬಾಗಿಲು ಒಡೆದು ನಗನಾಣ್ಯ ದೋಚಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.


ಸತೀಶ್ ಮತ್ತು ರಂಜಿತಾ ದಂಪತಿಗಳು ತಮ್ಮ ಮನೆಯಿಂದ ಒಂದು ಕಿ.ಮೀ. ದೂರ ಇರುವ ಕೋಲ್ಸೂರು ಗ್ರಾಮದ ತಮ್ಮ ತಂದೆಯವರ ಮನೆಗೆ ಭೂಮಿಹುಣ್ಣಿಮೆ ಹಬ್ಬಕ್ಕೆ ಹೋಗಿದ್ದರು.


ಸೋಮವಾರ ಮನೆಗೆ ಬಂದು ನೋಡಿದಾಗ ಮುಂಬಾಗಿಲು ಒಡೆದು ಗಾಡ್ರೇಜ್‌ನಲ್ಲಿದ್ದ ೯೫ ಗ್ರಾಂ ಬಂಗಾರ ಮತ್ತು ೧೦ಸಾವಿರ ರೂಪಾಯಿ ನಗದು ದೋಚಿಕೊಂಡು ಹೋಗಿರುವುದು ಪತ್ತೆಯಾಗಿದೆ.

ಈ ಸಂಬಂಧ ಸತೀಶ್ ಅವರು ಕಾರ್ಗಲ್ ಠಾಣೆಗೆ ದೂರು ನೀಡಿದ್ದಾರೆ. ಶರಾವತಿ ಹಿನ್ನೀರು ಪ್ರದೇಶವಾದ ಕರೂರು ಹೋಬಳಿಯಲ್ಲಿ ಒಂಟಿಮನೆಯನ್ನು ಗುರುತಿಸಿ ಕಳ್ಳತನ ಮಾಡುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಪೊಲೀಸರು ಸೂಕ್ತ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!