ಶಿವಮೊಗ್ಗ ದಸರಾ ಅಂಗವಾಗಿ ಗಾಂಧಿ ಪಾರ್ಕ್‌ನಲ್ಲಿ ಏರ್ಪಸಲಾಗಿದ್ದ. ರಾಜ್ಯಮಟ್ಟದ ಶ್ವಾನ ಪ್ರದರ್ಶನದಲ್ಲಿ ಅನೇಕ ಜಿಲ್ಲೆಗಳಿಂದ ಭಾಗವಹಿಸಲು ಶ್ವಾನಗಳನ್ನು ಕರೆತಂದಿದ್ದರು. ಇದರಲ್ಲಿ ಹಸ್ಕಿ, ಜರ್ಮನ್ ಶೆಫರ್ಡ್,
ಪಮೋರಿಯನ್ ಮುಧೋಳ, ಗೋಲ್ಡನ್ ರಿಟ್ರೇವರ್, ರಾಟ್ ವಿಲ್ಲರ್ ಫಗ್ ಸಹಿತ ಪ್ರಮುಖ 15 ಬಗೆಯ ನಾಯಿಗಳಿದ್ದವು.
ಇದ್ದರಲ್ಲಿ ಎಲ್ಲರ ಗಮನ ಸೆಳೆದ ಬರೋಬ್ಬರಿ 10 ಕೋಟಿ ರೂ ಗಳ ಟೀಬೇಟಿಯನ್ ಮಸ್ತಿಪ್ ಭೀಮ ಎಲ್ಲರ ಅಕರ್ಷಣೆಯ ಕೇಂದ್ರ ಬಿಂದುವಾಗಿತ್ತು ಇದನ್ನು ನೋಡಲು ಸಾವಿರಾರು ಜನ ಆಗಮಿಸಿದ್ದರು.
ಈ ನಾಯಿಯನ್ನು ಬೆಂಗಳೂರಿನ ನಟ ಹಾಗೂ ಇಂಡಿಯನ್ ಡಾಗ್ ಬ್ರ್ಪಿಡರ್ ಅಸೋಸಿಯೇಶನ್ಸ್ ಅಧ್ಯಕ್ಷ ಸತೀಶ್ ಕರೆತಂದಿದ್ದರು.
ಬೀಜಿಂಗ್‌ನಿಂದ ತರಿಸಿಕೊಂಡಿದ್ದ ಈ ನಾಯಿಗೆ ಪ್ರತಿ ನಿತ್ಯ ಚಿಕನ್ ಹಾಗೂ ಪ್ರತಿನಿತ್ಯ ಎ,ಸಿ ರೂಮ್ ನಲ್ಲೆ ಇರಿಸಬೇಕು ಇದನ್ನು ಸಾಕಲು ತಿಂಗಳಿಗೆ ಸುಮಾರು ೫೦ ಸಾವಿರ ರೂ ಖರ್ಚು ಬರುತ್ತದೆ. ಎಂದು ಸತೀಶ್ ತಿಳಿಸಿದ್ದಾರೆ.