ಪಿಎಫ್ಐ ಸಂಘಟನೆ ನಿಷೇಧದ ಬೆನ್ನಲ್ಲೇ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿವಿಧೆಡೆ ಕಂದಾಯಿಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ.

ಸರ್ಚ್ ವಾರೆಂಟ್ ಹಿಡಿದು ಬಂದ ಅಧಿಕಾರಿಗಳು ಗಾಂಧಿ ಬಜಾರ್ ನಲ್ಲಿರುವ ಪಿಎಫ್ಐ ಕಾರ್ಯಕರ್ತ ಉಮರ್ ಫಾರುಕ್, ಹಾಗೂ ಬೈಪಾಸ್ ನಲ್ಲಿರುವ ಎಸ್ ಡಿಪಿಐ ಕಚೇರಿಯ ಮೇಲೆ ದಾಳಿ ನೆಡೆದಿದೆ.

ಉಮರ್ ಫಾರೂಕ್ ಮನೆಯನ್ನ ಪೊಲೀಸರು ಬೀಗ ಹಾಕಿಕೊಂಡು ಹೋಗಿದ್ದಾರೆ. ಕುಂಸಿ ಠಾಣೆ ಪಿಐ ಹರೀಶ್ ಪಟೇಲ್ ಮತ್ತು ಸ್ಮಾರ್ಟ್ ಸಿಟಿ ಎಂಡಿ ಚಿದಾನಂದ ವಠಾರೆಯಿಂದ ದಾಳಿ ನಡೆದಿದೆ. ಎಸ್ ಡಿಪಿಐ ಕಚೇರಿ ಯನ್ನೂ ಸಹ ಕೋಟೆ ಪಿಐ ಚಂದ್ರಶೇಖರ್ ಮತ್ತು ತಹಶೀಲ್ದಾರ್ ಡಾ.ನಾಗರಾಜ್ ದಾಳಿ ನಡೆಸಿ ಕಚೇರಿಗೆಬೀಗ ಜಡೆದಿದ್ದಾರೆ.

ಟಿಪ್ಪುನಗರ ಏಳನೇ ತಿರುವಿನಲ್ಲಿರುವ ಎಸ್ ಡಿಪಿಐ ಜಿಲ್ಲಾ ಮಾಜಿಅಧ್ಯಕ್ಷ ಸಲೀಂ ಖಾನ್ ಮನೆಗೆ ತೆರಳಿರುವ ವಿನೋಬ ನಗರ ಪಿಐರವಿ ಮತ್ತು ಕಂದಾಯ ಇಲಾಖೆಯವರು ಅವರ ತಂದೆಯವರ ಬಳಿ ಮಾಹಿತಿ ಪಡೆದಿದ್ದಾರೆ. ಸಲೀಂ ಖಾನ್ ಮನೆಯಲ್ಲಿ ಇಲ್ಲದಿರುವುದು ಕಂಡು ಬಂದಿದೆ.

ಸಂಘಟನೆಯನ್ನ ಬ್ಯಾನ್ ಮಾಡಿರುವ ಹಿನ್ಬಲೆಯಲ್ಲಿ ತಿಳುವಳಿಕೆ ಪತ್ರ ನೀಡುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಗೋಪಾಳ ಪ್ರೆಸ್ ಕಾಲೋನಿ ಪಿಎಫ್ಐನ ಅಧ್ಯಕ್ಷ ಒಬೆದುಲ್ಲಾ ಮನೆಯ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಅಭಯ್ ಪ್ರಕಾಶ್ ಮತ್ತು ಸೂಡಾ ಆಯುಕ್ತ ಕೊಟ್ರೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಒಬೆದುಲ್ಲಾರವರು ಸಹ ಮನೆಯಲ್ಲಿ ಇಲ್ಲದಿರುವುದು ತಿಳಿದುಬಂದಿದೆ.

ಬೈಪಾಸ್ ನಲ್ಲಿರುವ ಗುಂಡಿ ಬಡಾವಣೆಯಲ್ಲಿ ಪಿಎಫ್ಐನ ಮಾಜಿ ಅಧ್ಯಕ್ಷ ರಿಜ್ವಾನ ಮನೆಯ ಮೇಲೆ ಶೋಧ ಕಾರ್ಯ ನಡೆದಿದೆ ಇಲ್ಲೂ ಸಹ ಆರೋಪಿತರು ಮನೆಯಲ್ಲಿ ಇಲ್ಲದಿರುವುದು ಕಂಡು ಬಂದಿದೆ. ಸಿಮ್ಸ್ ಸಿಎಒ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ದೊಡ್ಡಪೇಟೆ ಠಾಣೆ ಪಿಐ ಅಂಜನ್ ಕುಮಾರ್ ದಾಳಿಯಲ್ಲಿ ಭಾಗಿಯಾಗಿದ್ದಾರೆ. 

By admin

ನಿಮ್ಮದೊಂದು ಉತ್ತರ

error: Content is protected !!