ಶಿವಮೊಗ್ಗ: ಒಂದೆಡೆ ಐಎಸ್'ಐಎಸ್ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಶಂಕಿತ ಉಗ್ರರನ್ನು ಬಂಧಿಸಿದ್ದು, ಆನಂತರ ಪಿಎಫ್'ಐ ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ನಗರಕ್ಕೆ
ರಾ’ ಟೀಂ ಎಂಟ್ರಿ ಕೊಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತಂತೆ ಮಾಹಿತಿಗಳು ತಿಳಿದುಬಂದಿದ್ದು, ದೇಶದ ಹೊರಗಡೆಯಲ್ಲಿ ಭಾರತದ ಭದ್ರತೆಗೆ ಧಕ್ಕೆ ತರುವಂತಹ ವಿಚಾರಗಳ ಕುರಿತಾಗಿ ಭದ್ರತೆಯ ಹೊಣೆ ಹೊತ್ತಿರುವ ರಾ(ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ತಂಡ ನಗರಕ್ಕೆ ಆಗಮಿಸಿ, ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗಿದೆ.
ಐಎಸ್’ಐಎಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಇಬ್ಬರು ಉಗ್ರರನ್ನು ಬಂಧಿಸಲಾಗಿದ್ದು, ಇನ್ನೊಬ್ಬನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದರ ನಡುವೆಯೇ, ನಿನ್ನೆ ದೇಶದಾದ್ಯಂತ ನಡೆದಂತೆ ಶಿವಮೊಗ್ಗದಲ್ಲೂ ಸಹ ಪಿಎಫ್’ಐ ಸಂಘಟನೆಯ ಮುಖಂಡನ ಮನೆಯ ರಾಷ್ಟಿಯ ತನಿಖಾ ದಳದ ತಂಡ ಮೇಲೆ ದಾಳಿ ಆತನನ್ನು ಬಂಧಿಸಲಾಗಿದೆ.
ಇದರ ನಡುವೆಯೇ ಶಿವಮೊಗ್ಗಕ್ಕೆ ರಾ ತಂಡ ಭೇಟಿ ನೀಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಮಾಹಿತಿ ಕಲೆ ಹಾಕುತ್ತಿದೆ ಎಂದು ಹೇಳಲಾಗಿದೆ. ಬಂಧಿತ ಶಂಕಿತ ಉಗ್ರರನ್ನೂ ಸಹ ವಿಚಾರಣೆ ನಡೆಸಿದೆ ಎನ್ನಲಾಗಿದ್ದು, ಮಾಹಿತಿ ಪ್ರಕಟವಾಗಿಲ್ಲ.