ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ನಾಡ ಹಬ್ಬ ದಸರಾ – ಮಹಿಳಾ ದಸರಾ ಸಮಿತಿಯಿಂದ 75ನೇ ವರ್ಷದ ಸ್ವಾತಂತ್ರೋತ್ಸವ- ಅಮೃತ ಮಹೋತ್ಸವದ ಅಂಗವಾಗಿ ಸೆ. 27 ರಂದು ಸಂಜೆ 4 ಗಂಟೆಗೆ ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಆಯೋಜಿಸಿರುವ “ಮಹಿಳಾ ಸ್ವಾತಂತ್ರ್ಯ ನಡಿಗೆಯ” ಪ್ರಚಾರ ವಾಹನಕ್ಕೆ

ಇಂದು ಮಹಾನಗರ ಪಾಲಿಕೆಯ ಆವರಣದಲ್ಲಿ ಮೇಯರ್ ಸುನಿತಾ ಅಣ್ಣಪ್ಪ ಹಾಗೂ ಉಪಮೇಯರ್ ಶಂಕರ್ ಗನ್ನಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ದಸರಾ ಸಮಿತಿಯ ಅಧ್ಯಕ್ಷೆ ರೇಖಾ ರಂಗನಾಥ್, ಪಾಲಿಕೆ ಸದಸ್ಯರಾದ ಚನ್ನಬಸಪ್ಪ, ಹೆಚ್.ಸಿ. ಯೋಗೇಶ್, ಜ್ಞಾನೇಶ್ವರ್, ವಿಶ್ವನಾಥ್, ಮಂಜುನಾಥ್, ಧೀರರಾಜ್ ಹೊನ್ನವಿಲೆ, ವಿಶ್ವಾಸ್,

ರಾಜು, ಶಿವಕುಮಾರ್, ಮಂಜುಳಾ ಶಿವಣ್ಣ, ಅನಿತಾ ರವಿಶಂಕರ್, ಸುವರ್ಣ ಶಂಕರ್, ಸುರೇಖಾ ಮುರುಳಿಧರ್, ಕಲ್ಪನಾ ರಮೇಶ್, ಆರತಿ ಅ.ಮ.ಪ್ರಕಾಶ್, ಮೀನಾ ಗೋವಿಂದರಾಜ್, ಲಕ್ಷ್ಮಿಶಂಕರ್ ನಾಯ್ಕ್, ಭಾನುಮತಿ ವಿನೋದ್, ಅನ್ನಪೂರ್ಣ(ಅನಿತಾ), ಹೆಚ್.ಎಂ. ಶೀರೀಸ್, ಪನ್ನೀರ್ ಸೆಲ್ವಂ, ಹೇಮಂತ್, ಮೂರ್ತಿ ಹಾಗೂ ಪಾಲಿಕೆ ಆಯುಕ್ತ ಮಾಯಣ್ಣಗೌಡ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!