ಶಿವಮೊಗ್ಗ, ಸೆ.17: ಇಲ್ಲಿನ ಲಾಡ್ಜೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಾತನ ಡೆತ್ ನೋಟ್ ದೊಡ್ಡಮ್ಮನ ಮಗಳಾದ ಅಕ್ಕನನ್ನೇ ಕೊಲೆ ಮಾಡಿದ್ದನ್ನು ಬಹಿರಂಗಪಡಿಸಿದೆ. ಅದಕ್ಕೆ ಕಾರಣ ಆ ಅಕ್ಕ ತನ್ನ ಗಂಡನನ್ನೇ ಕೊಲೆ ಮಾಡಿದ್ದಳೆಂದು ಮಾಹಿತಿ ನೀಡಿದೆ.

ಏನಿದು ವಿವರ ನೋಡಿ
ದಿನಾಂಕಃ-13-09-2022 ರಂದು ರಾತ್ರಿ ಮಂಜುನಾಥ್‌, 26 ವರ್ಷ, ಕೆರೆಸೂರಗೊಂಡನಹಳ್ಳಿ, ತುಮಕೂರು ಜಿಲ್ಲೆ ಈತನು ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ KSRTC ಬಸ್‌ ನಿಲ್ದಾಣದ ಹತ್ತಿರ ಇರುವ ಹೋಟೆಲ್‌ ಒಂದರಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದು, ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದು, ದಿನಾಂಕಃ-15-09-2022 ರಂದು ಡೆತ್‌ ನೋಟ್‌ ಬರೆದಿಟ್ಟು ವಿಷ ಸೇವನೆ ಮಾಡಿ ಆತ್ಮ ಹತ್ಯೆ ಮಾಡಿಕೊಂಡಿರುತ್ತಾನೆ.


ಆತನ ದೊಡ್ಡಮ್ಮನ ಮಗಳಾದ ಅಕ್ಕ ಸುಧಾಳು ತನ್ನ ಗಂಡನನ್ನು ಅವಳ ಸ್ನೇಹಿತನ ಜೊತೆ ಸೇರಿಕೊಂಡು ಕೊಲೆ ಮಾಡಿರುತ್ತಾಳೆಂದು ಹೇಳಿಕೊಂಡಿರುತ್ತಾಳೆ, ಈ ವಿಷಯವಾಗಿ ಆಕೆಯ ಮೇಲಿನ ಕೋಪದಿಂದ ಸುಧಾಳನ್ನು ಕೊಲೆ ಮಾಡಿ ಬೀದಿ ಹೆಣ ಮಾಡಿರುತ್ತೇನೆಂದು ಡೆಟ್‌ ನೋಟ್‌ ಬರೆದಿಟ್ಟಿರುತ್ತಾನೆ. ಮೃತನ ಕಡೆಯವರಿಗೆ ಮಾಹಿತಿಯನ್ನು ನೀಡಲಾಗಿದ್ದು, ಅವರುಗಳು ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಪೊಲೀಸ್ ಪ್ರಕಟಣೆ ತಿಳಿಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!