ಭದ್ರಾವತಿ: ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ನಗರದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದು, ಮೆರವಣಿಗೆಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಹಾಗೂ ಹಿಂದೂ ಹರ್ಷನ ಫೋಟೋಗಳು ರಾರಾಜಿಸುತ್ತಿವೆ.
ಹೊಸಮನೆ ಮುಖ್ಯರಸ್ತೆಯಲ್ಲಿ ಸಾಗುತ್ತಿರುವ ಮೆರವಣಿಗೆಯಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಹಿಂದೂ ಹರ್ಷನ ಫೋಟೋಗಳು ರಾರಾಜಿಸುತ್ತಿವೆ.
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅವರ ಫೋಟೋ ಹಿಡಿದು ಘೋಷಣೆ ಕೂಗುತ್ತಿದ್ದರೆ, ಹಿಂದೂ ಪರ ಕಾರ್ಯಕರ್ತರು ಹಿಂದೂ ಹರ್ಷನ ಭಾವಚಿತ್ರವನ್ನು ಮೆರವಣಿಗೆಯುದ್ದಕ್ಕೂ ಹಿಡಿದು ಹರ್ಷ ಅಮರ್ ರಹೇ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಕಂಗೊಳಿಸುತ್ತಿದೆ ಕಲಾವಿದ ವಿಷ್ಣು ಕೈಚಳಕದ ಆಂಜನೆಯನ ಮೂರ್ತಿ
ಭದ್ರಾವತಿ: ನಗರದ ಪ್ರಖ್ಯಾತ ಕಲಾವಿದ ವಿಷ್ಣು ಅವರ ಕೈಚಳಕದಲ್ಲಿ ಮೂಡಿಬಂದ ಆಂಜನೇಯ ಸ್ವಾಮಿಯ ಪ್ರತಿಮೆ ಹಿಂದೂ ಮಹಾ ಸಭಾ ಗಣಪತಿ ಮೆರವಣಿಗೆಯಲ್ಲಿ ಆಕರ್ಷಣೆಯ ಕೇಂದ್ರವಾಗಿದೆ.


ಮೆರವಣಿಗೆಗಾಗಿಯೇ ವಿಷ್ಣು ಅವರು ಸಿದ್ಧಪಡಿಸಿರುವ ಈ ಆಂಜನೇಯನ ಪ್ರತಿಮೆ ಹಿಂದೂ ಧರ್ಮದ ಸಂಕೇತವೇ ಆಗಿ ರಾರಾಜಿಸುತ್ತಿದೆ. ಆಂಜನೆಯನ ಪ್ರತಿಮೆ ಮೆರವಣಿಗೆಯುದ್ದಕ್ಕೂ ಜನರ ಆಕರ್ಷಣೆಯ ಕೇಂದ್ರವಾಗಿದ್ದು, ಇದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.

ಶಾಂತಿಯುತ ಮೆರವಣಿಗೆಗೆ ಜನರು ಸಹಕರಿಸಿ: ಕದಿರೇಶ್ ಮನವಿ

ಭದ್ರಾವತಿ: ಶಾಂತಿಯುತ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮಹಾಸಭಾ ಅಧ್ಯಕ್ಷ, ನಗರಸಭಾ ಸದಸ್ಯ ವಿ. ಕದಿರೇಶ್ ಮನವಿ ಮಾಡಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ೫೦ನೇ ವರ್ಷಾಚರಣೆ ಅಂಗವಾಗಿ ಪ್ರತಿ ವರ್ಷಕ್ಕಿಂತಲೂ ಹೆಚ್ಚು ವೈಭವಯುತವಾಗಿ ರಾಜಬೀದಿ ಉತ್ಸವ ನಡೆಸಲಾಗುತ್ತಿದೆ.


ಬೆಳಿಗ್ಗೆ ಆರಂಭವಾಗಿರುವ ಮೆರವಣಿಗೆ ಸಂಜೆ ಮುಕ್ತಾಯವಾಗಲಿದೆ. ಯಶಸ್ಸು ಹಾಗೂ ಶಾಂತಿ ಕಾಪಾಡಲು ಪ್ರತಿಯೊಬ್ಬರೂ ಸಹಕರಿಸುತಿದ್ದಾರೆ. ಶಾಸಕ ಬಿ.ಕೆ. ಸಂಗಮೇಶ್ವರ್, ಎಲ್ಲಾ ನಗರಸಭಾ ಸದಸ್ಯರು, ಹಿಂದೂ ಪರ ಸಂಘಟನೆಗಳು, ಸ್ವಯಂ ಸೇವಾ ಸಂಘಟನೆಗಳೂ ಹಾಗೂ ನಾಗರಿಕರು ಸಂಪೂರ್ಣ ಸಹಕಾರ ನೀಡುತ್ತಿದ್ದು, ಶಾಂತಿಯುತವಾಗಿ ಗಣೇಶನ ವಿಸರ್ಜನೆ ಮಾಡುತ್ತೇವೆ ಎಂದರು.
ಮೆರವಣಿಗೆಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಬೇಡ ಎಂದು ಮನವಿ ಮಾಡಿದ್ದೇವು. ಆದರೂ ಪೊಲೀಸ್ ಇಲಾಖೆ ಅತ್ಯಂತ ಬಿಗಿ ಭದ್ರತೆ ಒದಗಿಸಿದೆ. ಮೆರವಣಿಗೆಯನ್ನು ಯಶಸ್ವಿಗೊಳಿಸಲು ಹಾಗೂ ಶಾಂತಿ ಕದಡದಂತೆ ತಡೆಯಲು ಪೊಲೀಸ್ ಇಲಾಖೆ ಕೈಗೊಡಿರುವ ಕ್ರಮ ಶ್ಲಾಘನೀಯ. ಭದ್ರತೆಗೆ ನಿಯೋಜನೆಗೊಂಡಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗಳನ್ನು, ಸಮಸ್ತ ಹಿಂದೂಗಳ ಪರವಾಗಿ ಅಭಿನಂದಿಸುತ್ತೇನೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!