ಶಿವಮೊಗ್ಗ,
ನಗರದಲ್ಲಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ನಾಳೆ ನಡೆಯಲಿದ್ದು, ಗಾಂಧಿ ಬಜಾರ್ ಸೇರಿದಂತೆ ಹಲವು ವೃತ್ತಗಳು ಸಂಪೂರ್ಣ ಕೇಸರಿ ಮಯವಾಗಿದೆ.
ಹಿಂದೂ ಮಹಾಸಭಾ ಗಣಪನ ರಾಜಬೀದಿ ಉತ್ಸವದ ವೇಳೆ ಪ್ರತಿ ವರ್ಷವೂ ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಅಲಂಕಾರಗೊಳ್ಳುವ ನಗರ ಈ ಭಾರಿ ಕೇಸರಿ ಹಿಂದೂ
ಅಲಂಕಾರ ಸಮಿತಿ ಗಾಂಧಿಬಜಾರ್ನಲ್ಲಿ ಕೃಷ್ಣಾರ್ಜುನರ ಗೀತೋಪದೇಶದ ಪರಿಕಲ್ಪನೆಯ ಬೃಹತ್ ಮಹಾದ್ವಾರ ನಿರ್ಮಿಸಲಾಗಿದ್ದು, ಇದರ ಬಹುತೇಕ ಕೆಲಸ ಪೂರ್ಣಗೊಂಡಿದೆ.
ಇಲ್ಲಿ ಜನರು, ಯುವಕರು, ಯುವತಿಯರು ಮಹಾದ್ವಾರದ ಬಳಿ ಬಂದು ಫೋಟೋ, ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿರುವುದು ಕಂಡು ಬಂದಿತ್ತು.
ಗಣಪತಿಯ ಮೆರವಣಿಗೆ ಸಾಗುವ ಗಾಂಧಿ ಬಜಾರ್ ಸಂಪೂರ್ಣ ಕೇಸರಿಮಯದಿಂದ ಕೂಡಿಬಂ ದಿದ್ದು, ಶಿವಪ್ಪನಾಯಕ ಸರ್ಕಲ್ ನಲ್ಲಿ ಪಂಚಮುಖಿ ಆಂಜ ನೇಯ ಗಧೆ ಹಿಡಿದು ನಿಂತಿ ರುವ ಬೃಹದಾಕರಾದ ಪ್ರತಿಮೆ ಈಗಾಗಲೇ ನಿರ್ಮಿಸಲಾಗಿದ್ದು, ಛತ್ತಪತಿ ಶಿವಾಜಿ, ರಾಣಾ ಪ್ರತಾಪ್ ಸಿಂಗ್
ಅವರ ಪ್ರತಿಮೆಗಳನ್ನು ನಿರ್ಮಿಸಲಾ ಗುವುದೆಂದು ಮೂಲಗಳು ತಿಳಿಸಿವೆ. ಎಎ ಸರ್ಕಲ್ನ ಸುತ್ತಲು ಕೇಸರಿ ಬಟ್ಟೆಯಿಂದ ಅಲಂಕೃತಗೊಂಡಿದೆ. ಇನ್ನುಳ್ಳಿದಂತೆ ನೆಹರೂ ರಸ್ತೆಯಲ್ಲಿ ದೇಶಭಕ್ತರ, ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾನೀಯ ಬಂಟಿಂಗ್ಸ್ ಗಳು ಕಂಗೋಳಿಸುತ್ತಿದ್ದು, ಗೋಪಿ ಸರ್ಕಲ್ ವೃತ್ತವು ಸಹ ವಿಶೇಷವಾಗಿ ಅಲಂಕೃತಗೊಂಡಿದೆ.
ಸಹಾಸ್ರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ: ನಾಳೆ ನಡೆಯಲಿರುವ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವದ ವೇಳೆ ಸಹಾಸ್ರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರತಿ ವರ್ಷದಂತೆ ಈ ಭಾರಿಯೂ ಸಹ ರಾಜಬೀದಿ ಉತ್ಸವ ಸಾಗುವ ಮಾರ್ಗದಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳಿಗೆ ಅನ್ನಸಂತರ್ಪಣೆ, ಲಡ್ಡು ವಿತರಣೆ, ಮಜ್ಜಿಗೆ, ಪಾನಕ, ನೀರಿನ ವಿತರಣೆ ನಡೆಯಲಿದೆ.
ವಾಹನ ಮಾರ್ಗ ಬದಲಾವಣೆ ಹಿಂದೂ ಮಹಾಸಭಾ ಗಣಪ ವಿಸರ್ಜನಾ ಮರೆವಣಿಗೆಯಲ್ಲಿ ಯಾವುದೇ ಸ್ಥಳ ಬದಲಾವಣೆಯಿಲ್ಲ. ಆದರೆ, ಈ ಸಂದರ್ಭದಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.