| ದೇಶಭಕ್ತರ, ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾನೀಯ ಬಂಟಿಂಗ್ಸ್ | ಸಹಾಸ್ರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ | ಬಾಲ ಬಿಚ್ಚೀರಿ ಜೋಕೆ ಪೊಲೀಸರ ಭದ್ರಕೋಟೆಯಾಗಿದೆ ಶಿವಮೊಗ್ಗ ನಗರ


ರಾಕೇಶ್ ಸೋಮಿನಕೊಪ್ಪ


ಶಿವಮೊಗ್ಗ : ನಗರದಲ್ಲಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ನಾಳೆ ನಡೆಯಲಿದ್ದು, ಗಾಂಧಿ ಬಜಾರ್ ಸೇರಿದಂತೆ ಹಲವು ವೃತ್ತಗಳು ಸಂಪೂರ್ಣ ಕೇಸರಿ ಮಯವಾಗಿದೆ.


ಹಿಂದೂ ಮಹಾಸಭಾ ಗಣಪನ ರಾಜಬೀದಿ ಉತ್ಸವದ ವೇಳೆ ಪ್ರತಿ ವರ್ಷವೂ ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಅಲಂಕಾರಗೊಳ್ಳುವ ನಗರ ಈ ಭಾರಿ ಕೇಸರಿಮಯವಾಗಿದೆ. ಅಲಂಕಾರ ಸಮಿತಿ ಗಾಂಧಿಬಜಾರ್‌ನಲ್ಲಿ ಕೃಷ್ಣಾರ್ಜುನರ ಗೀತೋಪದೇಶದ ಪರಿಕಲ್ಪನೆಯ ಬೃಹತ್ ಮಹಾದ್ವಾರ ನಿರ್ಮಿಸಲಾಗಿದ್ದು, ಇದರ ಬಹುತೇಕ ಕೆಲಸ ಪೂರ್ಣಗೊಂಡಿದೆ. ಇಲ್ಲಿ ಜನರು, ಯುವಕರು, ಯುವತಿಯರು ಮಹಾದ್ವಾರದ ಬಳಿ ಬಂದು ಫೋಟೋ, ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿರುವುದು ಕಂಡು ಬಂದಿತ್ತು.

ಗಣಪತಿಯ ಮೆರವಣಿಗೆ ಸಾಗುವ ಗಾಂಧಿ ಬಜಾರ್ ಸಂಪೂರ್ಣ ಕೇಸರಿಮಯದಿಂದ ಕೂಡಿಬಂದಿದ್ದು, ಶಿವಪ್ಪನಾಯಕ ಸರ್ಕಲ್‌ನಲ್ಲಿ ಪಂಚಮುಖಿ ಆಂಜನೇಯ ಗಧೆ ಹಿಡಿದು ನಿಂತಿರುವ ಬೃಹದಾಕರಾದ ಪ್ರತಿಮೆ ಈಗಾಗಲೇ ನಿರ್ಮಿಸಲಾಗಿದ್ದು, ಛತ್ತಪತಿ ಶಿವಾಜಿ, ರಾಣಾ ಪ್ರತಾಪ್ ಸಿಂಗ್ ಅವರ ಪ್ರತಿಮೆಗಳನ್ನು ನಿರ್ಮಿಸಲಾಗುವುದೆಂದು ಮೂಲಗಳು ತಿಳಿಸಿವೆ. ಎಎ ಸರ್ಕಲ್‌ನ ಸುತ್ತಲು ಕೇಸರಿ ಬಟ್ಟೆಯಿಂದ ಅಲಂಕೃತಗೊಂಡಿದೆ. ಇನ್ನುಳ್ಳಿದಂತೆ ನೆಹರೂ ರಸ್ತೆಯಲ್ಲಿ ದೇಶಭಕ್ತರ, ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾನೀಯ ಬಂಟಿಂಗ್ಸ್‌ಗಳು ಕಂಗೋಳಿಸುತ್ತಿದ್ದು, ಗೋಪಿ ಸರ್ಕಲ್ ವೃತ್ತದಲ್ಲಿಯೂ ಸಹ ವಿಶೇಷವಾಗಿ ಅಲಂಕೃತಗೊಂಡಿದೆ.


ಸಹಾಸ್ರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ
: ನಾಳೆ ನಡೆಯಲಿರುವ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವದ ವೇಳೆ ಸಹಾಸ್ರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರತಿ ವರ್ಷದಂತೆ ಈ ಭಾರಿಯೂ ಸಹ ರಾಜಬೀದಿ ಉತ್ಸವ ಸಾಗುವ ಮಾರ್ಗದಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳಿಗೆ ಅನ್ನಸಂತರ್ಪಣೆ, ಲಡ್ಡು ವಿತರಣೆ, ಮಜ್ಜಿಗೆ, ಪಾನಕ, ನೀರಿನ ವಿತರಣೆ ನಡೆಯಲಿದೆ.


ಪೊಲೀಸರ ಭದ್ರಕೋಟೆಯಾದ ಶಿವಮೊಗ್ಗ
ಶಿವಮೊಗ್ಗ ಮೆರವಣಿಗೆ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಭಾರೀ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪ್ರಮುಖವಾಗಿ ಹಳೇ ಶಿವಮೊಗ್ಗ ಭಾಗ ಪೊಲೀಸ್ ಭದ್ರಕೋಟೆಯಾಗಿದೆ.
ಭದ್ರತೆಗೆ ಎಷ್ಟು ಪೊಲೀಸರ ನಿಯೋಜನೆ?
ಬಂದೋಬಸ್ತ್ ಕರ್ತವ್ಯಕ್ಕೆ ೨ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ೧೯ ಪೊಲೀಸ್ ಉಪಾಧೀಕ್ಷಕರು, ೪೬ ಪೋಲಿಸ್ ನಿರೀಕ್ಷಕರು, ೭೧ ಪೊಲೀಸ್ ಉಪನಿರೀಕ್ಷಕರು, ೧೯೭೦ ಪೊಲೀಸ್ ಸಿಬ್ಬಂದಿಗಳು, ೭೦೦ ಗೃಹರಕ್ಷಕ ದಳ ಸಿಬ್ಬಂದಿಗಳು, ೦೧ ಆರ್’ಎಎಫ್ ಕಂಪನಿ (೨೦೦ ಅಧಿಕಾರಿ ಮತ್ತು ಸಿಬ್ಬಂದಿಗಳು), ೧೫ ಕೆಎಸ್’ಆರ್’ಪಿ ತುಕಡಿಯ (೩೦೦ ಅಧಿಕಾರಿ ಮತ್ತು ಸಿಬ್ಬಂದಿಗಳು), ೧೫ ಡಿಎಆರ್ ತುಕಡಿ(೧೨೦ ಅಧಿಕಾರಿ ಹಾಗೂ ಸಿಬ್ಬಂದಿ) ನಿಯೋಜಿಸಲಾಗಿದೆ. ನಗರದಲ್ಲಿ ಸುಮಾರು ಮೂರು ಸಾವಿರದಷ್ಟು ಪೊಲೀಸರಿರುತ್ತಾರೆ. ಇದರೊಂದಿಗೆ ಸಿಸಿ ಕ್ಯಾಮರಾ, ವೀಡಿಯೋ ಕ್ಯಾಮರಾ, ಡ್ರೋಣ್ ಬಳಸಲಾಗುತ್ತಿದೆ. ಖಾಕಿ ದಾಟಿ ತಪ್ಪೆಸಗುವ ಯಾವುದೇ ಸಾದ್ಯತೆಗಳಿಲ್ಲ.

By admin

ನಿಮ್ಮದೊಂದು ಉತ್ತರ

error: Content is protected !!