ಶಿವಮೊಗ್ಗ : ಪತ್ರಿಕಾ ಕ್ಷೇತ್ರ ನನಗೆ ಸಾಕಷ್ಟು ಸಹಕಾರ ನೀಡಿದೆ ಎಂದು ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹೇಳಿದರು.


ಶಿವಮೊಗ್ಗದಲ್ಲಿ ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಭಾನುವಾರ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿನಪತ್ರಿಕೆ ವಿತರಕರ ದಿನಾಚರಣೆ ಉದ್ಘಾಾಟಿಸಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಪತ್ರಿಕೆಗಳು ಬಹು ಪ್ರಮುಖ ಪಾತ್ರ ವಹಿಸಿವೆ. ಪ್ರತಿದಿನವೂ ದಿನಪತ್ರಿಕೆಯನ್ನು ಮನ ಮನೆಗೆ ತಲುಪಿಸುವ ವಿತರಕರ ಕಾರ್ಯ ಶ್ಲಾಾಘನೀಯ ಎಂದರು.

ಇಂದು ದಿನಪತ್ರಿಕೆ ವಿತರಣೆಯಲ್ಲಿ ಬಹಳಷ್ಟು ಜನ ಯುವಕರು ತೊಡಗಿಕೊಂಡಿದ್ದಾಾರೆ. ಸರಕಾರದ ಯೋಜನೆಗಳನ್ನು ಮುದ್ರಿಸುವ ಕೆಲಸವನ್ನು ದಿನಪತ್ರಿಕೆಗಳನ್ನು ಮಾಡುತ್ತವೆ. ಯೋಜನೆಗಳನ್ನು ದಿನಪತ್ರಿಕೆ ವಿತರಕರು ಸಾಕಾರ ಮಾಡುತ್ತಾಾರೆ ಎಂದರು.

ದಿನಪತ್ರಿಕೆ ವಿತರಕರ ಕ್ಷೇಮಾಭಿವೃದ್ದಿ ಸಂಘದ ಮೂಲ ಉದ್ದೇಶ, ಕ್ಷೇಮ ಮತ್ತು ಅಭಿವೃದ್ದಿಯಾಗಿದೆ. ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟ ಸಾಗರದ ಪತ್ರಿಕಾ ವಿತರಕನಿಗೆ ಸಂಘ ಪರಿಹಾರ ನೀಡಿದೆ. ಈ ರೀತಿಯ ಸಹಾಯ ಸಂಘ ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯವಾಗುತ್ತದೆ ಎಂದರು.

ನಿಮ್ಮ ಜೀವನದ ಭದ್ರತೆಗಾಗಿ ಸಂಘವನ್ನು ಬಳಸಿಕೊಳ್ಳಿ. ಸಂಘದ ಧ್ಯೇಯೋದ್ದೇಶಗಳಿಗೆ ಬದ್ದರಾಗಿದ್ದು, ಒಗ್ಗಟ್ಟಾಗಿದ್ದರೆ, ಏನನ್ನೂ ಬೇಕಾದರೂ ಸಾಧಿಸಲು ಸಾಧ್ಯ ಎಂದರು.

ಡಾ.ಧನಂಜಯ ಸರ್ಜಿ ಮಾತನಾಡಿ, ಪತ್ರಿಕಾ ವಿತರಕರಾಗಿದ್ದಘ, ಅಬ್ದುಲ್ ಕಲಾಂ ರವರು ಎಂಜಿನಿಯರ್ ಆಗಿ, ವಿಜ್ಞಾನಿಯಾಗಿ, ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದರು. ಜೀವನದಲ್ಲಿ  ಡ್ರೀಮ್, ಡೇಟ್,ಡಿಕ್ಲೇರ್ ಮತ್ತು ಡೆಡಿಕೇಶನ್ ಎಂಬ ಪೋರ್ ಸೂತ್ರವನ್ನು ಅಳವಡಿಸಿಕೊಂಡಾಗ ನೀವು ಅವರಂತೆ ಆಗಬಹುದು. ಜೀವನದಲ್ಲಿ ದೊಡ್ಡ ಕನಸನ್ನು ಕಾಣಬೇಕು. ಅದಕ್ಕೆ ತಕ್ಕಂತೆ ಸಿದ್ದತೆ ಮತ್ತು ವಿಚಾರಧಾರೆ ಇರಬೇಕು ಎಂದರು.

ನಿಮ್ಮ ಸಂಘಟನೆಯಲ್ಲಿ ಒಗ್ಗಟ್ಟಿದ್ದರೆ, ನಿಮ್ಮ ಸವಲತ್ತುಗಳನ್ನು ನೀವೇ ಪಡೆದುಕೊಳ್ಳಬಹುದು. ನಿಮ್ಮ ಸಂಘವನ್ನು ಕಾರ್ಮಿಕ ಇಲಾಖೆಯಲ್ಲಿ  ನೋಂದಣಿ ಮಾಡಿಕೊಳ್ಳುವ ಮೂಲಕ ಇಎಸ್‌ಐ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಪತ್ರರ್ತರಾದ ಗೋಪಾಲ ಎಸ್.ಯಡಗೆರೆ, ಚಂದ್ರಹಾಸ ಹಿರೇಮಳಲಿ, ಸೂರ್ಯನಾರಾಯಣ್, ಕೆ.ಎನ್.ಸತೀಶ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿನಪತ್ರಿಕೆ ಉಪಪ್ರತಿನಿಗಳ ಕ್ಷೇಮಾಭಿವದ್ದಿ ಸಂಘದ ಅಧ್ಯಕ್ಷ ಸತ್ಯನಾರಾಯಣ ವಹಿಸಿಕೊಂಡಿದ್ದರು. ಸಂಘದ ಗೌರವಾಧ್ಯಕ್ಷ ಗಣೇಶ್ ಭಟ್, ಕಾರ್ಯದರ್ಶಿ ಧನಂಜಯ ಹೆಚ್, ಖಜಾಂಚಿ  ಯೋಗೇಶ್ ಪಿ.ಎಸ್., ಭಾನುಪ್ರಕಾಶ್, ಮಂಜುನಾಥ ಬಿ., ಚೇತನ್, ರಾಮಚಂದ್ರ,  ಸೇರಿದಂತೆ ಪ್ರಮುಖರು ಹಾಗೂ ದಿನಪತ್ರಿಕೆ ವಿತರಕರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ದಿನಪತ್ರಿಕೆ ವಿತರಿಸುತ್ತಿರುವ ಸಂಜಯ್, ಪ್ರಕಾಶ್, ಸತ್ಯನಾರಾಯಣ್, ಗಿಡ್ಡೇಶ್, ಕಷ್ಣಮೂರ್ತಿ, ರಮೇಶ್ ರವರಿಗೆ ಸನ್ಮಾನ ಮಾಡಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!