ಶಿವಮೊಗ್ಗ,
ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಈ ಬಾರಿ ಗಣಪತಿ ಹಬ್ಬ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.


ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಎಸ್ಪಿ ಡಾ.ಬಿ.ಎಂ ಲಕ್ಷ್ಮೀಪ್ರಸಾದ್ ಮತ್ತು ಹೆಚ್ಚುವರಿ ಎಸ್ಪಿ ವಿಕ್ರಮ್ ಅಮಾತೆ ಹಾಗೂ ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ೧೫೦ಕ್ಕೂ ಹೆಚ್ಚು ಗಣಪತಿ ಮಂಡಳಿಯವರ ಜತೆ ಗಣಪತಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.


’೨೦೧೮-೧೯ರ ಸಂದರ್ಭದಲ್ಲಿ ಗಣಪತಿ ಕೂರಿಸಿದ ರೀತಿಯಲ್ಲಿಯೇ ಅವಕಾಶ ನೀಡಲಾಗುವುದು. ಆದರೆ, ನಿಗದಿತ ವಿಸರ್ಜನೆ ಮೆರವಣಿಗೆಯ ಮಾರ್ಗ ಮೊದಲೇ ನೀಡಬೇಕು. ಕೊನೆ ಘಳಿಗೆಯಲ್ಲಿ ಮಾರ್ಗ ಬದಲಾಯಿಸಬಾರದು’ ಎಂದ ಅವರು, ’ಗಣಪತಿ ಸಮಿತಿಯವರು ಹಬ್ಬದ ಬಗ್ಗೆ ಮಾಹಿತಿ ಕೊಟ್ಟಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುವುದು’ ಎಂದು ಎಸ್ಪಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಹೇಳಿದರು.


’ನಗರದಲ್ಲಿ ಇದುವರೆಗೂ ಗಣಪತಿಯ ಎತ್ತರದ ಪ್ರಶ್ನೆ ಬಂದಿಲ್ಲ. ಆದರೂ ವಿದ್ಯುತ್ ತಂತಿಗೆ ತಾಗದಂತೆ ಎಚ್ಚರವಹಿಸಬೇಕು. ಜತೆಗೆ ಗಣಪತಿಯ ಎತ್ತರ ಸ್ಥಳೀಯರೇ ಸರಿಪಡಿಸಿ ಕೊಳ್ಳಲು ಸೂಚಿಸಿದರು. ಸ್ಥಳೀಯ ಅಧಿಕಾರಿಗಳು ತಮ್ಮೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಮೈಕ್‌ಗೆ ಸುಪ್ರೀಂಕೋರ್ಟ್ ನಿಯಮ ಪಾಲಿಸಬೇಕಿದೆ. ಹಾಗಾಗಿ ಡಿಜೆ ಹೊರತು ಪಡಿಸಿ ಗಣಪತಿ ಕೂರಿಸುವ ಮತ್ತು ವಿಸರ್ಜಿಸುವ ಬಗ್ಗೆ ಇಲಾಖೆಯಿಂದ ಯಾವುದೇ ನಿರ್ಬಂಧವಿಲ್ಲ’ ಎಂದರು.


’೨೦೧೯ರಲ್ಲಿ ಡಿಜೆಗೆ ಅವಕಾಶವಿತ್ತು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾತ್ರಿ ೧೦ರಿಂದ ಬೆಳಿಗ್ಗೆ ೬ರವರೆಗೆ ಹೆಚ್ಚು ಶಬ್ದಕ್ಕೆ ನಿರ್ಬಂಧಗಳಿವೆ. ಆದರೆ, ಸರ್ಕಾರ ಡಿಜೆಗೆ ಅಥವಾ ಸೌಂಡ್ ಸಿಸ್ಟಮ್‌ಗೆ ಅವಕಾಶ ಮಾಡಿಕೊಟ್ಟರೆ ಸ್ಥಳೀಯವಾಗಿಯೂ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಲಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.


ಮೆಸ್ಕಾಂ, ಅಗ್ನಿಶಾಮಕ ದಳ, ಪಾಲಿಕೆ ಮತ್ತು ಪೊಲೀಸ್ ಇಲಾಖೆಯ ಸಿಂಗಲ್ ವಿಂಡೋದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶವಿದೆ. ಮೆರವಣಿಗೆ ಹೋಗುವ ದಾರಿಗೆ ಸಿ.ಸಿ.ಟಿ.ವಿ ಕ್ಯಾಮೆರೆಆ ಅಳವಡಿಸಲಾಗುವುದು. ಪೊಲೀಸ್ ಬಂದೋಬಸ್ತ್ ನೀಡಲಾಗುವುದು. ಆದರೆ, ವಿಸರ್ಜನೆಯ ದಾರಿ ಸರಿಯಾಗಿ ತಿಳಿಸಬೇಕು. ಕೊನೆಯ ಹಂತದಲ್ಲಿ ಬದಲಾವಣೆ ಮಾಡಬಾರದು ಎಂದು ಸೂಚಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!