ಶಿವಮೊಗ್ಗ, ಆ.15:
ಎಪ್ಪತೈದನೇ ಸ್ವತಂತ್ರ ಮಹೋತ್ಸವದ ಶುಭಗಳಿಗೆಯಲ್ಲಿ ಸಂಭ್ರಮಿಸುತ್ತಿದ್ದ ಜನರ ನಡುವೆ ಕಿಡಿಯೊಂದು ಹತ್ತಿತಾ..?
ಜನ ನೆಮ್ಮದಿ ಕೇಳ್ತಾರೆ. ಅನಗತ್ಯ ಗಲಾಟೆಯೊಂದನ್ನು ಮಾದ್ಯಮದ ಕೆಲ ಟಿವಿ ವಾಹಿನಿಗಳು ಅವರ ಹೈ ಅಲಾರ್ಟ್ ಗೊಸ್ಕರ ಬೇಕಾಬಿಟ್ಟಿಯಾಗಿ ಬಳಸಿಕೊಂಡರೆ ಏನಾಗಬೇಕಿತ್ತೊ ಅದು ಈಗ ಆಗುತ್ತಿದೆ.
ಶಿವಮೊಗ್ಗ ಪೊಲೀಸರು ಕಾನೂನು ಬಾಹಿರ ಕೃತ್ಯಗಳನ್ನು ಸೆದೆಬಡಿಯಲು ಸಂಪೂರ್ಣ ಸಿದ್ದರಾಗಿದ್ದಾರೆ.
ಇಂದು ಮದ್ಯಾಹ್ನ ಮೂರರ ಹೊತ್ತಿಗೆ ಪ್ಲೆಕ್ಸಿಯೊಂದ ಗಲಾಟೆ ಕೋಮು ವಿಚಾರವನ್ನು ಮುಂದು ಮಾಡಿಕೊಂಡಿದ್ದು ದುರಂತ.
ದೇಶವನ್ನು ಬ್ರಿಟೀಷರಿಂದ ಮುಕ್ತ ಮಾಡಲು ಎರಡು ಬಾರೀ ಕರೀನೀರಿನ ಶಿಕ್ಷೆ ಅನುಭವಿಸಿ ವೀರತ್ವ ತೋರಿದ ವೀರ ಸಾವರ್ಕರ್ ಭಾವಚಿತ್ರದ ಈ ಗಲಾಟೆ ನಾನಾ ರೂಪ ಪಡೆಯುತ್ತಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳು 144 ಸೆಕ್ಷನ್ ಜಾರಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.