ಶಿವಮೊಗ್ಗ, ಆ.06:
ತೀರ್ಥಹಳ್ಳಿ ಕಟ್ಟೇಹಕ್ಕಲು ಸಮೀಪದಲ್ಲಿ ಓಮಿನಿ ವ್ಯಾನ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸರ್ಕಾರಿ ಶಾಲಾ ಮುಖ್ಯ ಉಪಾಧ್ಯಾಯ ವೆಂಕಟೇಶ್ .ಎಂ ಸಾವು ಕಂಡಿದ್ದಾರೆ.
ಇಂದು ಸಂಜೆ ಕಟ್ಟೆಹಕ್ಕಲು ಮಿಡ್ಲಿಸ್ಕೂಲ್ ಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟೇಶ್. ಎಂ. ರವರು ಕಚೇರಿ ಕೆಲಸದ ನಿಮಿತ್ತ ಬೈಕಿನಲ್ಲಿ ಹೋಗುತ್ತಿರುವಾಗ ಮಾರುತಿ ಓಮ್ನಿ ಮತ್ತು ಬೈಕ್ ಮುಖಾಮುಖಿಯಾಗಿ ಅಪಘಾತದಲ್ಲಿ ವೆಂಕಟೇಶ್ (47ವರ್ಷ ) ಅವರು ಸ್ಥಳದಲ್ಲೇ ಮೃತರಾಗಿದ್ದಾರೆ.
ಮೃತದೇಹವನ್ನು ತೀರ್ಥಹಳ್ಳಿ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಇಡಲಾಗಿದೆ. ತೀರ್ಥಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ .
ಸುದ್ದಿ ತಿಳಿದ ತಕ್ಷಣ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಜೆಸಿ ಆಸ್ಪತ್ರೆಗೆ ಧಾವಿಸಿ ಬಂದು ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸಲ್ಲಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಯ ನಂತರ ಮೃತದೇಹವನ್ನು ಗಡಿ ಸಮೀಪ ಹೊಕ್ಕಳಿಕೆ ಗ್ರಾಮದಲ್ಲಿರುವ ವೆಂಕಟೇಶ್ ರವರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟು ನಂತರ ಅಂತಿಮ ಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ .
ಮೃತರು ಸುವರ್ಣ ಟಿವಿ ವರದಿಗಾರ ರಾಜೇಶ್ ಕಾಮತ್ ಅವರ ತಂಗಿಯ ಗಂಡ ಆಗಿದ್ದಾರೆ. ಮೃತರು ಪತ್ನಿ. ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!