ಶಿವಮೊಗ್ಗ,
ಶೈಕಣಿಕ ಪದವಿಯು ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲಾಗಿದ್ದು ನಾವು ಪಡೆದ ಪದವಿ ದೇಶದ ಅಭ್ಯುದಯಕ್ಕೆ ಸಹಕಾರಿ ಯಾಗಲಿ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಸಚಿವೆ ಅನುರಾಧ.ಜಿ ಅಭಿಪ್ರಾಯಪಟ್ಟರು
ಇಂದು ನಗರದ ಜೆ.ಎನ್.ಎನ್. ಎಂಜಿನಿ ಯರಿಂಗ್ ಕಾಲೇಜಿನ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಎಂಜಿನಿಯ ರಿಂಗ್, ಎಂ.ಬಿ.ಎ, ಎಂ.ಸಿ.ಎ ವಿಭಾಗದ ವಿದ್ಯಾರ್ಥಿಗಳ ಗ್ರಾಜುಯೇಷನ್ ಡೇ ಕಾರ್ಯ ಕ್ರಮ ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಣದ ನಂತರವೇ ಬದುಕಿನಲ್ಲಿ ನಿಜವಾದ ಸವಾಲುಗಳು ಎದುರಾಗುತ್ತದೆ. ಅಂತಹ ಸವಾ ಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕಿದೆ.
ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಮುಖ ಸ್ಥಾನ ಪಡೆದಿದ್ದು ಅಂತಹ ಅನೇಕ ನಾವಿನ್ಯಯುತ ಸಾಧನೆಗಳಿಗೆ ತಾಂತ್ರಿಕ ಪದವೀಧರರಾಗಿ ಹೊರಹೊಮ್ಮುತ್ತಿರುವ ತಮ್ಮೆಲ್ಲರ ಕೊಡುಗೆ ಹೆಚ್ಚಾಗಲಿ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮಾತನಾಡಿ, ಪದವಿ ಪಡೆದುಕೊಳ್ಳುವುದು ಜೀವನದ ನಿಜವಾದ ಸಾಕ್ಷಾತ್ಕಾರವಲ್ಲ, ಬದುಕಿನ ದೀರ್ಘ ಆಯಾಮದಲ್ಲಿ ಅದೊಂದು ಘಟ್ಟ ಮಾತ್ರ. ಶಿಕ್ಷಣದ ಜೊತೆಗೆ ವ್ಯಕ್ತಿತ್ವ ಪ್ರಮುಖವಾಗಿದೆ. ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವೆ ಶಬ್ದದ ವ್ಯತ್ಯಾಸವಿದ್ದರು
ವ್ಯಕ್ತಿತ್ವವಿಲ್ಲದ ಬದುಕು ವ್ಯರ್ಥವಾಗಿ ಬಿಡುತ್ತದೆ. ಬದುಕಿನಲ್ಲಿ ಯಶಸ್ಸು ಆಕಸ್ಮಿಕವಾಗಿ ಸಿಗುವ ವಸ್ತುವಲ್ಲ. ಅದರ ಹಿಂದೆ ದೀರ್ಘಕಾಲಿಕ ಪ್ರಯತ್ನ, ಕಠಿಣ ಪರಿಶ್ರಮ, ಕೌಶಲ್ಯಯುತ ಅನುಷ್ಟಾನ ಅವಶ್ಯಕ.
ಹಾಗಾಗಿಯೇ ಶಿಕ್ಷಣದೊಂದಿಗೆ ಉತ್ತಮ ವ್ಯಕ್ತಿತ್ವ, ಕೌಶಲ್ಯತೆ, ಹೊಸತನದ ಚಿಂತನೆಗಳು ಅಳವಡಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ.ಶಿವಕುಮಾರ್, ಎನ್.ಟಿ.ನಾರಾ ಯಣರಾವ್, ಸೀತಾಲಕ್ಷ್ಮೀ, ಕುಲಸಚಿವರಾದ ಪ್ರೊ.ಟಿ.ಎಸ್.ಹೂವಯ್ಯಗೌಡ, ಪ್ರಾಂಶುಪಾಲ ರಾದ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.