ಶಿವಮೊಗ್ಗ, ಆ.2:
ಇಲ್ಲಿನ ಬೊಮ್ಮನಕಟ್ಟೆ ಮಹಾರಾಣಿ ಶಾಲೆ ಬಳಿಯ ಮನೆಯೊಂದರಲ್ಲಿ ಏಳು ಇಂಚಿನ ಶೂ ನೊಳಗೆ ಬಚ್ಚಿಕೊಂಡು ಕುಳಿತಿದ್ದ ಸುಮಾರು ಮೂರು ಅಡಿ ಉದ್ದದ ನಾಗರ ಹಾವನ್ನು ಈಗ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಇಂದಿನ ನಾಗರಪಂಚಮಿ ಪೂರ್ವದ ನಿನ್ನೆ ಇಂತಹ ಸ್ಥಿತಿಯಲ್ಲಿ ನಾಗರ ಹಾವು ಪತ್ತೆಯಾಗಿದೆ.


ನಿನ್ನೆ ಬೊಮ್ಮನಕಟ್ಟೆಯ ಕುಮಾರ್ ಎಂಬುವರ ಕಾಂಪೌಂಡ್ ನೊಳಗೆ ಬಂದಿದ್ದ ನಾಗರಹಾವನ್ನು ಮನೆಯವರು ಹೊರ ಹೋಗುವಂತೆ ಗದರಿಸಿದ್ದಾರೆ. ನಾಗ ಬೀತಿಯಿಂದ ಅಲ್ಲಿಯೇ ಇದ್ದ ಏಳು ಇಂಚು ಉದ್ದದ ಶೂನೊಳಗೆ ಅವಿತುಕೊಂಡಿದೆ.


ಕೂಡಲೇ ಸ್ನೇಕ್ ಕಿರಣ್ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸಿ ಹಾವನ್ಬು ಹಿಡಿದು ಕಾಡೊಳಗೆ ಬಿಟ್ಟು ಬಂದಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!