ಶಿವಮೊಗ್ಗ, ಆ.02:
ಚಂದದ ಬದುಕು ಕಟ್ಟಿಕೊಳ್ಳುವಾಗ ಪರಸ್ಪರ ಪ್ರೀತಿ, ವಿಶ್ವಾಸ ನಂಬಿಕೆ ಅತ್ಯಗತ್ಯ. ಇಲ್ಲಿ ಅನಿಮಾನವೆಂಬ ಹುಳು ಹರಿದಾಡಿದರೆ ಇಡೀ ಬದುಕೇ ಎಕ್ಕುಟ್ಟಿ ಹೋಗುತ್ತದೆ. ಅನುಮಾನವೆಂಬ ಈ ಹುತ್ತದ ಸುತ್ತ ಸುತ್ತುವ ಬದಲು ಅನುಮಾನವನ್ನು ಬಗೆಹರಿಸಿಕೊಳ್ಳುವ ಹಾಗೂ ಕಿತ್ತೊಗೆಯುವ ಕಾಯಕವಾಗಬೇಕಿದೆ.


ಇಂತಹ ಪೀಠಿಕೆಗೆ ಕಾರಣ ಇಷ್ಟೇ. ಗಂಡನ ಅನುಮಾನದ ಗೂಡೊಳಗೆ ಸಿಕ್ಕಿಕೊಂಡು ಒದ್ದಾಡುತ್ತಿರುವ ಹೆಂಡತಿ ಅನಾನ ಹಾಗೂ ಗಂಡನ ಕಿರುಕುಳದ ವಿರುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಹೊಳೆಬೆನವಳ್ಳಿ ಗ್ರಾಮದಲ್ಲಿ 11 ವರ್ಷಗಳ ಹಿಂದೆ ಸ್ವಂತ ಮಾವನ ಮಗನನ್ನೇ ಮದುವೆಯಾಗಿದ್ದ ನನ್ನ ಮೇಲೆ ಗಂಡ ಅಣ್ಣಪ್ಪ ಅನುಮಾನ ಪಡುತ್ತಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧ ದೂರು ನೀಡಿದ್ದಾರೆ.


ಅನುಮಾನ ಹುಟ್ಟಿಕೊಂಡಿರುವ ಪ್ರಯುಕ್ತ ಆತ ಹೊಡೆ-ಬಡಿಯೋದನ್ನ‌ಆರಂಭಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಅನುಮಾನದಿಂದ ನೋಡಲು ಶುರು ಹಚ್ಚಿಕೊಂಡಿರುವ ಪತಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಈ ಹಿಂದೆಯೇ ಹಿರಿಯರ ಮುಂದೆ ಆರೋಪಿಸಿದ್ದಳು.
ರಾಜೀ ಪಂಚಾಯ್ತಿ ನಡೆಸಲು ಮುಂದಾದ ಹಿರಿಯರಿಗೆ ಪತಿ ಮತ್ತು ಮಾವ ನಿಂದಿಸಿ ಯಾವ ಪಂಚಾಯ್ತಿಯೂ ಬೇಡ ನಿನ್ನನ್ನ‌ಜೀವ ಸಹಿತ ಬಿಡೋಲ್ಲವೆಂದು ಧಮ್ಕಿ ಹಾಕಿ ಪತಿ ಅಡಿಕೆ ದಬ್ಬೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ಸಹ ಮಹಿಳೆ ಆರೋಪಿಸಿದ್ದಾರೆ.


ಈ ಗಲಾಟೆ ಇಲ್ಲಿಗೆ ನಿಲ್ಲಿಸಲು ಸೂಚಿಸಿದ್ದ ಹಿರಿಯರ ಆದೇಶದ ಮೇರೆಗೆ ಪತಿಯ‌ ವಿರುದ್ಧ ದೂರು ನೀಡದ‌ ಮಹಿಳೆ ಮೂರು ನಾಲ್ಕು ದಿನ ಸುಮ್ಮನಿರ್ತಾಳೆ. ಒಂದು ವೇಳೆ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಮುನ್ಸೂಚನೆಯಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.

By admin

ನಿಮ್ಮದೊಂದು ಉತ್ತರ

error: Content is protected !!